ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್: ಹೆಂಡ್ತೀನಾ ವಾಪಸ್ ಕರ್ಕೊಂಡು ಬಂದ್ರೆ?

|
Google Oneindia Kannada News

Kannada Jokes for the Day
ಗುಂಡನಿಗೆ ಲಾರಿ ಕಂಡರೆ ಸಾಕು ಸಿಕ್ಕಾಪಟ್ಟೆ ಭಯ ಮಾರಾಯ್ರೇ.. ಗುಂಡ ಯಾಕೆ ಲಾರಿಗೆ ಭಯ ಪಡುತ್ತಿದ್ದಾನೆ ಎನ್ನುವ ಕುತೂಹಲ ನಮ್ಮ ತಿಮ್ಮನಿಗೆ. ಒಂದು ತಿಂಗಳು ನೋಡಿದ.. ಎರಡು ತಿಂಗಳು ನೋಡಿದ.. ಆದರೆ ಗುಂಡನ ಭಯಕ್ಕೂ ಲಾರಿಗೂ ಏನು ಸಂಬಂಧ ಎಂದು ಪತ್ತೆ ಹಚ್ಚುವುದಕ್ಕೆ ಆಗಲೇ ಇಲ್ಲ. ಒಂದು ದಿನ..
ತಿಮ್ಮ: ಗುಂಡ.. ಬಹಳ ದಿನದಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಲಾರಿ ನೋಡಿದಾಗಲೆಲ್ಲಾ ಹೆದರುಕೊಳ್ಳುತ್ತೀಯಲ್ಲಾ ಯಾಕೆ?
ಗುಂಡ: ಒಂದು ದಿನ ನಾನು ಮತ್ತು ನನ್ನ ಹೆಂಡತಿ ವಾಕಿಂಗ್ ಹೋಗಿ ಬರುತ್ತಿದ್ದಾಗ ಲಾರಿಯವನೊಬ್ಬ ನನ್ನ ಹೆಂಡತಿಯನ್ನು ಅಪಹರಿಸಿಕೊಂಡು ಹೋದ..
ತಿಮ್ಮ: ಅದಕ್ಕೆ?
ಗುಂಡ: ಲಾರಿ ನೋಡಿದಾಗಲೆಲ್ಲಾ ಎಲ್ಲಿ ಅವಳನ್ನು ವಾಪಸ್ ಕರ್ಕೊಂಡು ಬಂದು ಬಿಡುತ್ತಾನೋ ಅನ್ನೋ ಭಯ !!
***
ಒಬ್ಬ ಟೈಲರ್ ಊರಿನ ಬಟ್ಟೆಯನ್ನೆಲ್ಲಾ ಗಂಟುಮೂಟೆ ಕಟ್ಟುಕೊಂಡು ಓಡಿ ಹೋದ..ಕೆಲವರು ಗುಂಪು ಕಟ್ಟಿಕೊಂಡು ಟೈಲರ್ ಹುಡುಕಿಕೊಂಡು ಹೋದರೆ, ಇನ್ನು ಕೆಲವರು ಪೋಲೀಸ್ ಸ್ಟೇಶನ್ ಹೋಗಿ ಕಂಪ್ಲೇಂಟ್ ಕೊಟ್ಟರು.
ನಮ್ಮ ಶರ್ಟ್ ಪೀಸ್ ಕದ್ದೊಯ್ದಿದ್ದಾನೆ..ನನ್ನ ಪ್ಯಾಂಟ್ ಪೀಸ್, ಸೂಟ್.. ನನ್ನ ಪೈಜಾಮ್ ಎಂದು ಪೊಲೀಸರಿಗೆ ಕಂಪ್ಲೇಂಟ್ ಸುರಿಮಳೇನೆ ಆಯಿತು. ಸುಮ್ಮನೆ ಇದ್ದ ಗುಂಡನನ್ನು ಪೊಲೀಸರು ಕೇಳ್ತಾರೆ..
ಪೋಲೀಸ್: ಲೇ.. ನಿಂದು ಏನು ತೆಗೆದುಕೊಂಡು ಹೋಗಿದ್ದಾನೆ?
ಗುಂಡ: ಮೆಸರ್ಮೆಂಟ್ !!
***
ಗುಂಡ: ನೋಡೋ ಪಕ್ದ್ಮನೆ ಹುಡುಗೀನಾ ? ಎಷ್ಟು ಜಾಣೆ ಇದ್ದಾಳೆ. ಈ ಬಾರಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾಳಂತೆ. ನೀನು ಇದ್ದೀಯಾ ದಂಡಪಿಂಡ..
ಮರಿಗುಂಡ: ಸುಮ್ನಿರಪ್ಪ..
ಗುಂಡ: ಏನು ಸುಮ್ನಿರಪ್ಪ
ಮರಿಗುಂಡ: ಅವಳನ್ನು ನೋಡಿದ್ದಕ್ಕೆ ನಾನು ಫೇಲ್ ಆಗಿದ್ದು..

English summary
Kannda jokes for the day. Jokes between Gunda, Thimma and Mari Gunda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X