ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಾ ಫ್ರೆಂಚ್ ಕಲಿಯಲು ಯಾಕೆ ಶುರು ಮಾಡಿದ?

By Prasad
|
Google Oneindia Kannada News

Jokes for the day
ಸಂತಾ ತೀವ್ರ ಅಸ್ವಸ್ಥನಾಗಿದ್ದ. ಪರೀಕ್ಷೆ ಮಾಡಿಸಲೆಂದು ವೈದ್ಯರ ಬಳಿ ಬಂದ. ಆತ ಫ್ರೆಂಚ್ ಭಾಷೆಯನ್ನು ಹಗಲು ರಾತ್ರಿ ಒಂದು ಮಾಡಿ ಕಲಿಯಲು ಶುರು ಮಾಡಿದ್ದರಿಂದ ಆತನ ಆರೋಗ್ಯದಲ್ಲಿ ಏರುಪೇರಾಯಿತು ಎಂದು ಕೇಳಿ ವೈದ್ಯರು ದಂಗಾದರು.

ವೈದ್ಯ :
ಯಾಕಪ್ಪಾ ಸಂತಾ, ಆರೋಗ್ಯ ಹಾಳಾಗುವಂತೆ ಯಾಕೆ ಫ್ರೆಂಚ್ ಕಲೀತಾ ಇದ್ದೀಯಾ?

ಸಂತಾ : ಯಾರೋ ಜ್ಯೋತಿಷಿಗಳು ಹೇಳಿದ್ದರು. ಸತ್ತ ಮೇಲೆ ಸ್ವರ್ಗದಲ್ಲಿ ಫ್ರೆಂಚ್ ಮಾತಾಡ್ತಾರೆ ಅಂತ. ಅದಕ್ಕೇ ಕಲಿಯಲು ಶುರು ಮಾಡಿದೆ.

ವೈದ್ಯ : ನೀನು ಸತ್ತ ಮೇಲೆ ಸ್ವರ್ಗಕ್ಕೇ ಹೋಗ್ತಿಯಂತ ಏನು ಗ್ಯಾರಂಟಿ? ನರಕಕ್ಕೆ ಹೋದರೆ?

ಸಂತಾ : ಪರವಾಗಿಲ್ಲ ಡಾಕ್ಟ್ರೆ, ನನಗೆ ಪಂಜಾಬಿ ಚೆನ್ನಾಗಿ ಬರುತ್ತದೆ.

***

ಸಂತಾ : ಯಾಕೋ ಬಂತಾ ಇಷ್ಟೊಂದು ಬೇಜಾರು ಮಾಡ್ಕೊಂಡಿದ್ದೀಯಾ? ಏನ್ ನಿನ್ನ ಪ್ರಾಬ್ಲಮ್ಮು?

ಬಂತಾ : ನನ್ನ ಬೇಜಾರಿಗೆ ಕಾರಣ ನನ್ನ ಮಗ ಮತ್ತು ಮಗಳು.

ಸಂತಾ :
ಯಾಕಪ್ಪಾ ಏನಾಯ್ತು?

ಬಂತಾ : ಮಗ ದಿನಾ ಬೆಳಿಗ್ಗೆ ಎದ್ದ ಕೂಡಲೆ, ನಾನು ಕೋಂಪ್ಲಾನ್ ಬಾಯ್ ಅಂತಾನೆ. ನನ್ನ ಮಗಳು, ನಾನು ಕೋಂಪ್ಲಾನ್ ಗರ್ಲ್ ಅಂತ. ಏನು ಹೇಳುಬೇಕೋ ಗೊತ್ತಾಗುತ್ತಿಲ್ಲ.

***

ಬಂತಾ : ಮಾಣಿ, ಗಿಡಗಳಿಗೆ ಚೆನ್ನಾಗಿ ನೀರು ಹಾಕುವುದನ್ನು ಮರೆಯಬೇಡ.

ಮಾಣಿ : ಯಜಮಾನ್ರೆ, ನೋಡ್ಲಿಲ್ವಾ ಹೊರಗಡೆ ಮಳೆ ಸಖತ್ತಾಗಿ ಸುರಿಯುತ್ತಿದೆ.

ಬಂತಾ :
ಪರವಾಗಿಲ್ಲ, ಕೊಡೆ ತೊಗೊಂಡು ನೀರು ಹಾಕು.

English summary
Kananda jokes for the day. Why did Santa begin to learn French language?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X