ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗಾನದಿ ಬೆಂಗಳೂರಿನಲ್ಲಿ ಯಾಕೆ ಹರಿಯುತ್ತಿಲ್ಲ?

|
Google Oneindia Kannada News

Kannada Jokes for the day
ಗುಂಡ ಅಪ್ಪಿ ತಪ್ಪಿ ಟೀಚರ್ ಆದ. ಅಷ್ಟೇ ಅಲ್ಲದೆ 5ನೇ ಕ್ಲಾಸಿನ ಪ್ರಶ್ನೆ ಪತ್ರಿಕೆ ರೆಡಿ ಮಾಡುವ ಜವಾಬ್ದಾರಿ ಆತನ ಮೇಲೆ ಬಿತ್ತು. ಪ್ರಶ್ನೆ ಪತ್ರಿಕೆ ಡಿಫರೆಂಟ್ ಆಗಿರಬೇಕೆಂದು ಮೂರು ಹಗಲು ನಾಲ್ಕು ರಾತ್ರಿ ಕೆಲಸ ಮಾಡಿ ಪತ್ರಿಕೆ ರೆಡಿ ಮಾಡಿದ. ಆದರೆ ಪ್ರಶ್ನೆ ಪತ್ರಿಕೆ ಓದಿದ ವಿದ್ಯಾರ್ಥಿಗಳು ಮೂರ್ಛೆ ತಪ್ಪಿ ಹೋದರು. ಗುಂಡ ರೆಡಿ ಮಾಡಿದ ಪ್ರಶ್ನೆ ಪತ್ರಿಕೆ ಈ ರೀತಿ ಇದೆ:

ಕೆಳಕಂಡ ಹತ್ತು ಪ್ರಶ್ನೆಗಳಲ್ಲಿ ಯಾವುದಾದರೂ ಎಂಟಕ್ಕೆ ತಪ್ಪದೆ ಉತ್ತರಿಸುವುದು:
ಸಮಯ : 90 ನಿಮಿಷ
ಅಂಕ : 40

1. ಚಿನ್ನ ಯಾವ ದೇಶದಲ್ಲಿದೆ?
2. ಆಗಸ್ಟ್ 15 ಯಾವ ದಿನಾಂಕದಲ್ಲಿ ಬರುತ್ತೆ?
3. ಗ್ರೀನ್ ಬಣ್ಣ ಯಾವ ಕಲರ್?
4. ಕಿತಾಬ್ ಪದಕ್ಕೆ ಹಿಂದಿಯಲ್ಲಿ ಏನು ಹೇಳುತ್ತಾರೆ?
5. ಗಾಂಧೀಜಿ ಸಮಾಧಿಯಲ್ಲಿ ಯಾರನ್ನು ಸಮಾಧಿ ಮಾಡಿದರು?
6. ಗಂಗಾನದಿ ಬೆಂಗಳೂರಿನಲ್ಲಿ ಯಾಕೆ ಹರಿಯುತ್ತಿಲ್ಲ?
7. ಪರಮವೀರ ಚಕ್ರ ಪ್ರಶಸ್ತಿಯನ್ನು ಪಡೆದ ಸಿನಿಮಾ ರಂಗದವರ ಇಬ್ಬರ ಉದಹಾರಣೆ ನೀಡಿ.
8. ನೆಟ್ ಇಲ್ಲದೆ ಇಂಟರ್ನೆಟ್ ಚೆಕ್ ಮಾಡುವ ಸುಲಭ ವಿಧಾನವನ್ನು ಚುಟುಕಾಗಿ ಬರೆಯಿರಿ.
9. ಶಿವಾಜಿ ಗಣೇಶನ್ ಅಭಿನಯಿಸಿದ 100ನೇ ತಮಿಳು ಚಿತ್ರ ಯಾವ ಭಾಷೆಯಲ್ಲಿದೆ?
10. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕ್ರೀಡಾಪಟುವಿನ ಹೆಸರೇನು?

English summary
Kannada Jokes for the day. Here is model question paper set by Gunda, who became teacher by chance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X