ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡನ ಬಾಯಲ್ಲಿ ಕೇಳಿ ಮಹಾತ್ಮ ಗಾಂಧೀ ಮಹಾತ್ಮೆ

By Prasad
|
Google Oneindia Kannada News

Unique Gandhi Jayanti celebration
ಟೀಚರ್ : ಮರಿಗುಂಡಾ.. ಗಾಂಧೀ ಜಯಂತಿ ಯಾವ ರೀತಿ ಆಚರಿಸಿದಿ?
ಮರಿಗುಂಡ : ನಾನು ಈ ಬಾರಿ ವಿಶಿಷ್ಟ ರೀತಿಯಲ್ಲಿ ಆಚರಿಸಿದೆ ಮೇಡಂ.
ಟೀಚರ್ : ಗುಡ್ ಬಾಯ್.. ಯಾವ ರೀತಿ?
ಮರಿಗುಂಡ : ಎಲ್ಲರಿಗೂ ಮೆಸೇಜ್ ಕಳುಹಿಸಿದೆ..
ಟೀಚರ್ : ಏನೂಂತಾ ಮೆಸೇಜ್ ಮಾಡ್ದೆ?
ಮರಿಗುಂಡ : ನಾನು ಗಾಂಧೀಜಿ ಫೋಟೋ ಕಲೆಕ್ಟ್ ಮಾಡ್ತಾ ಇದ್ದೀನಿ.. ಅದಕ್ಕೆ ನಿಮ್ಮ ಹೆಲ್ಪ್ ತುಂಬಾ ಬೇಕು.. ಎಲ್ಲರೂ ಗಾಂಧೀಜಿ ಫೋಟೋ ಇರುವ 100, 500, 1000 ರುಪಾಯಿ ನೋಟುಗಳನ್ನು ನನಗೆ ಕಳುಹಿಸಿ ಕೊಡಿ ಎಂದು ಮೇಡಂ.

***
ಟೀಚರ್ : ಗಾಂಧೀಜಿ, ಮುಷರಫ್ ಮತ್ತು ಲಾಲೂ ಪ್ರಸಾದ್ ನಡುವೆ ಏನು ವ್ಯತ್ಯಾಸ ಹೇಳು.
ಮರಿಗುಂಡ : ಗಾಂಧೀಜಿಗೆ ಸುಳ್ಳು ಅಂದರೆ ಏನೂಂತ ಗೊತ್ತಿರಲಿಲ್ಲ. ಮುಷರಫ್ ಗೆ ಸತ್ಯ ಅಂದರೆ ಏನೂಂತ ಗೊತ್ತಿಲ್ಲಾ.
ಟೀಚರ್ : ಮತ್ತೆ ಲಾಲೂ ಗೆ?
ಮರಿಗುಂಡ : ಇವೆರಡರ ವ್ಯತ್ಯಾಸ ಗೊತ್ತಿಲ್ಲ!

***
ಟೀಚರ್ : ರುಪಾಯಿಯ ಎಲ್ಲಾ ನೋಟಿನಲ್ಲಿ ಗಾಂಧೀ ತಾತಾ ನಗುತ್ತಾ ಇರುತ್ತಾರಲ್ಲಾ ಯಾಕೆ?
ಮರಿಗುಂಡ : ಉತ್ತರ ನನಗೆ ಗೊತ್ತು ಟೀಚರ್..
ಟೀಚರ್ : ಹೇಳು..
ಮರಿಗುಂಡ : ಅತ್ತರೆ ನೋಟು ಒದ್ದೆ ಆಗುತ್ತಾಲ್ಲಾ ಮೇಡಂ ಅದಕ್ಕೆ!

English summary
Kannada jokes for the day. Gunda celebrates Gandhi Jayanti in a unique way. How?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X