ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ, ನನಗೆ ನೀನು ಯಾರೂಂತನೆ ಗೊತ್ತಿಲ್ಲಾ!

By * ಬಾಲರಾಜ್ ತಂತ್ರಿ, ಉಡುಪಿ
|
Google Oneindia Kannada News

Jokes for the day
ಗೋಲ್ಡನ್ ಸ್ಟಾರ್ ಗಣೇಶ್ ಆಕಸ್ಮಿಕವಾಗಿ ಶಾರೂಖ್ ಖಾನ್ ಅವರನ್ನು ಭೇಟಿಯಾದಾಗ,
ಗಣೇಶ್ : ಸಾರಿ ಶಾರೂಖ್, ನನಗೆ ಸರಿಯಾಗಿ ಹಿಂದಿ ಗೊತ್ತಿಲ್ಲಾ.
ಶಾರೂಖ್ : ಏ, ನನಗೆ ನೀನು ಯಾರೂಂತನೆ ಗೊತ್ತಿಲ್ಲಾ!

***

ತೀವ್ರ ನಿಗಾ ಘಟಕದಲ್ಲಿರುವ ಮಾರ್ವಾಡಿಯೊಬ್ಬ,
ಎಲ್ಲಿ ನನ್ನ ಹೆಂಡ್ತಿ? - ನಾನು ಇಲ್ಲೇ ಇದ್ದೀನ್ರೀ.
ಎಲ್ಲಿ ನನ್ನ ಮಗಳು? - ನಾನು ಇಲ್ಲೇ ಇದ್ದೀನಪ್ಪಾ.
ಎಲ್ಲಿ ನನ್ನ ಮಗ? - ನಾನೂ ಇಲ್ಲೇ ಇದ್ದೀನಿ ಡ್ಯಾಡಿ.
ಮಾರ್ವಾಡಿ: ಈಡಿಯಟ್ ಗಳಾ ಎಲ್ಲಾ ಇಲ್ಲಿದ್ದೀರಲ್ಲಾ, ಅಲ್ಲಿ ಅಂಗಡಿ ಯಾರು ನೋಡ್ಕೋತಾರೆ?

***

ಹೆಂಡತಿ ಗಂಡನಿಗೆ : ರೀ.. ನಿಮ್ಮ ಸ್ನೇಹಿತ ಮದುವೆಯಾಗುತ್ತಿರುವ ಹುಡುಗಿ ಸ್ವಲ್ಪಾನೂ ಚೆನ್ನಾಗಿಲ್ಲಾರೀ, ನೀವಾದ್ರೂ ಸ್ವಲ್ಪ ಅವರಿಗೆ ಹೇಳಬಾರದಾ?
ಗಂಡ : ಯಾಕೇ.. ಹೇಳ್ಬೇಕು? ನಾನು ಮದುವೆಯಾಗುವಾಗ ಅವನೇನಾದ್ರೂ ನಂಗೆ ಹೇಳಿದ್ನಾ..

***

ಮಹಿಳೆಯೊಬ್ಬಳನ್ನು ಅಪಹರಣಕಾರರು ಕಿಡ್ನಾಪ್ ಮಾಡುತ್ತಾರೆ. ಮಹಿಳೆಯ ಬೆರಳನ್ನು ಸ್ವಲ್ಪ ಪೀಸ್ ಮಾಡಿ ಆಕೆಯ ಗಂಡನಿಗೆ ಕಳುಹಿಸಿ, ನಿನ್ನ ಹೆಂಡತಿಯನ್ನು ಅಪಹರಿಸಿದ್ದೇವೆ, ಅದಕ್ಕೆ ಬೆರಳಿನ ಪೀಸ್ ಸಾಕ್ಷಿ ಬೇಗ ನಾವು ಕೇಳಿದಷ್ಟು ದುಡ್ಡು ಕಳುಹಿಸು ಅಂತ ಫೋನ್ ಮಾಡ್ತಾರೆ. ಅದಕ್ಕೆ,
ಗಂಡ : ನೀವು ಕಳುಹಿಸಿದ ಸಾಕ್ಷಿ ಸಾಲದು, ನನಗೆ ಇನ್ನೂ ಹೆಚ್ಚಿನ ಸಾಕ್ಷಿ ಬೇಕು.

***

ಟೀಚರ್ : ಮಕ್ಕಳೇ ಸ್ಕೂಲನ್ನು ಸ್ವಚ್ಛವಾಗಿ ಹೇಗೆ ಇಟ್ಟುಕೊಳ್ಳಬಹುದು?
ಸ್ಟೂಡೆಂಟ್ಸ್ : ನಾವೆಲ್ಲಾ ಮನೆಯಲ್ಲಿದ್ದರೆ ಸ್ಕೂಲ್ ನೀಟಾಗಿರುತ್ತೆ ಅಲ್ವಾ.. ಟೀಚರ್?

***

ನರ್ಸರಿ ಚುಲ್ಟಾರಿ : ಮಿಸ್ ನೀವು ನಿನ್ನೆ ನನ್ನ ಅಪ್ಪನ ಮೊಬೈಲ್ ಗೆ ಫೋನ್ ಮಾಡಿದ್ರಾ?
ಮಿಸ್ : ನಿನ್ನಪ್ಪನ ಮೊಬೈಲ್ ಗೆ ನಾನೇಕೆ ಫೋನ್ ಮಾಡ್ಲಿ?
ಚುಲ್ಟಾರಿ : ಇಲ್ಲಾ ಮಿಸ್, ನಮ್ಮಪ್ಪನ ಮೊಬೈಲ್ ನಲ್ಲಿ "ಮಿಸ್ ಕಾಲ್" ಎಂದಿತ್ತು!

***

ಇಂಗ್ಲಿಷ್ ವರ್ಣಮಾಲೆಯಲ್ಲಿ ಅತ್ಯಂತ ಅಪಾಯಕಾರಿ ಶಬ್ದ ಯಾವುದು?
"W" ಯಾಕಂದ್ರೆ Who, Why, What, When, which, Whom, Where, War ಕೊನೆಯದಾಗಿ "Woman" "Wife"...

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X