ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟ್ರೇ ಪೇಷಂಟ್ ಕರೆದದ್ದು ನಿಮ್ಮನ್ನಲ್ಲ!

By Prasad
|
Google Oneindia Kannada News

Joke for the day
ಫೋನ್‌ನಲ್ಲಿ ತುರ್ತು ಸುದ್ದಿ ಕೇಳಿದ ಡಾಕ್ಟರು ನರ್ಸ್‌ನ ಕರೆದು ಹೇಳಿದರು.

'ಸಿಸ್ಟರ್‌, ಬೇಗ ನನ್ನ ಕಿಟ್‌ ತಗೊಂಡು ಬನ್ನಿ. ನೀವು ಬರದಿದ್ರೆ ಈಗ್ಲೇ ಸತ್ತು ಹೋಗ್ತೀನಿ ಎಂದು ಪೇಷಂಟ್‌ ಹೇಳ್ದ. ಈಗಲೇ ಹೋಗ್ಬೇಕು."

'ಆ ಪೇಷೆಂಟ್‌ ಫೋನ್‌ ಮಾಡಿ ಕರೆದದ್ದು ನಿಮ್ಮನ್ನಲ್ಲ ಸಾರ್‌. ನನ್ನನ್ನು !" ಎಂದು ನಸುನಾಚುತ್ತಾ ಉಂಗುಷ್ಟದಿಂದ ನೆಲ ಕೆರೆಯುತ್ತಾ ನರ್ಸ್ ಹೇಳಿದಾಗ ಡಾಕ್ಟರು ಸುಸ್ತೋಸುಸ್ತು.

***

ಮೊದಲು ಅಪ್ಪನ ಮೇಲೆ ಪ್ರಯೋಗ

ಎರಡನೇ ಪಿಯುಸಿ ಹುಡುಗನ ಬಗ್ಗೆ ತಾಯಿ ಬಳಿ ದೂರು ಹೇಳಲು ಪ್ರಿನ್ಸಿಪಾಲ್‌ ಪ್ರಯತ್ನಿಸಿದರು.

'ನೋಡಿ ತಾಯಿ. ನಿಮ್ಮ ಮಗ ಹುಡುಗೀರ ಜೊತೆ ಸದಾ ಮಾತಾಡ್ತಾ ತಿರುಗಾಡ್ತಾ ಇರ್ತಾನೆ. ಈ ಚಟ ಬಿಡಿಸೋಕೆ ಒಂದೆರಡು ಮಾರ್ಗ ಹುಡುಕಿದೀನಿ.."

ಆಕೆ ಕಣ್ಣರಳಿಸಿದಳು. ಕೈ ಮುಗಿದು ಕೇಳಿದಳು : 'ಸಾರ್‌, ಆ ಮಾರ್ಗ ಯಾವುದು ಅಂತ ನನಗೂ ತಿಳಿಸಿ. ಅದನ್ನ ಇವನ ಅಪ್ಪನ ಮೇಲೆ ನಾನು ಪ್ರಯೋಗ ಮಾಡಬೇಕಿದೆ."

***

ಬೀಗದ ಕೈ ಇದ್ರೂ ರಾಡ್ ಕೊಟ್ಟ ಅಪ್ಪ!

'ನನ್ನ ತಂದೆ ನನ್ನ ನಂಬೊಲ್ಲ ಅನ್ನೋದು ಗ್ಯಾರಂಟಿ ಆಯ್ತು ಕಣೋ" ಎಂದು ರಾಜ ಗೆಳೆಯನ ಬಳಿ ತನ್ನ ದುಃಖ ತೋಡಿಕೊಂಡ.

'ಹ್ಯಾಗೆ ಬಂದೆ ಈ ನಿರ್ಧಾರಕ್ಕೆ?"

'ನಿನ್ನೆ ನಾನು ಮೂರ್ಛೆ ಬಂದಂತೆ ನಟಿಸಿ ಕೆಳಗೆ ಬಿದ್ದೆ . ಕೈಗೆ ಬೀಗದ ಕೈ ಕೊಡಿ ಅಂತ ಎಲ್ಲರೂ ಹೇಳಿದರು. ನಮ್ಮಪ್ಪನ ಕೈಲಿ ತಿಜೋರಿ ಬೀಗದ ಕೈ ಇದ್ದರೂ ಅದನ್ನು ಕೊಡದೆ ಒಂದು ಕಬ್ಬಿಣದ ರಾಡ್‌ ತಂದು ನನ್ನ ಕೈಗೆ ತುರುಕಿದರು."

***

ಈ ವರ್ಷಾನೇ ಗಣಿತ ಕಲಿಸಿ

ಮಗ ಕಷ್ಟ ಪಟ್ಟು ಹೋಂವರ್ಕ್‌ ಮಾಡುತ್ತಿದ್ದುದನ್ನು ನೋಡಿದ ಪತ್ನಿ ಗಂಡನಿಗೆ ಹೇಳಿದಳು : ಏನ್ರಿ, ಮಗು 4 ನೇ ಕ್ಲಾಸು. ಗಣಿತ ಕಷ್ಟ ಇದೆ. ಸ್ವಲ್ಪ ಹೇಳಿಕೊಡಿ ಈ ವರ್ಷ. ಮುಂದಿನ ವರ್ಷದಿಂದಂತೂ ನಿಮ್ಮ ಕೈಲಿ ಆಗಲ್ಲ ...

***

ಟೈಪಿಸ್ಟ್ ತಾರಣಿಯ ಹೊಸ ಪ್ಲಾನ್

ಟೈಪಿಸ್ಟ್‌ ತಾರಿಣಿಯನ್ನು ಬಾಸ್‌ ಸೋಮು ಆಫೀಸಿನಲ್ಲಿ ಪ್ರೀತಿಸಿ, ಛತ್ರದಲ್ಲಿ ಮದುವೆಯಾದ. ತೆರವಾದ ಟೈಪಿಸ್ಟ್‌ ಸ್ಥಾನಕ್ಕೆ ಯಾರನ್ನು ತುಂಬಬೇಕು ಎಂದು ಯೋಚಿಸುತ್ತಿದ್ದಾಗ ತಾರಿಣಿ ಹೇಳಿದಳು : 'ರಿಟೈರ್ಡ್‌ ರಾಮಾಶಾಸ್ತ್ರಿಗಳನ್ನು ಟೈಪಿಸ್ಟ್‌ ಕೆಲ್ಸಕ್ಕೆ ನಾನು ಈಗಾಗಲೇ ಒಪ್ಪಿಸಿದ್ದೇನೆ!"

***

ಬೀಗದ ಕೈ ಇಲ್ಲದಿದ್ದರೇನಾಯಿತು?

'ನೋಡಿ ಸಾರ್‌, ಇದು ಗೋದ್ರೇಜ್‌ಗಿಂತ ಒಳ್ಳೆಯ ಬೀರು ಸಾರ್‌, ಬೆಲೆಯೂ ಕಡಿಮೆ. ಎರಡು ಬೀಗದ ಕೈ ಇದೆ. ಒಂದು ಕಳೆದ್ರೆ ಇನ್ನೊಂದು."

'ಒಂದು ವೇಳೆ ಎರಡೂ ಬೀಗದ ಕೈ ಕಳೆದು ಹೋದರೆ ?"

'ಅದೇ ಸಾರ್‌, ನಮ್ಮ ಸ್ಪೆಷಾಲಿಟಿ, ನೀವು ಚಿಂತೆ ಮಾಡೋ ಅಗತ್ಯವೇ ಇಲ್ಲ. ಹೇರ್‌ಪಿನ್‌ ಹಾಕಿ ತಿರುಗಿಸಿದರೆ ಬೀಗ ಬಿಚ್ಕೊಳ್ಳುತ್ತೆ" ಎಂದ ಅಂಗಡಿಯವ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X