ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಮೈ ಗಾಡ್, ನಿಮಗೆ ಹೇಗೆ ಗೊತ್ತಾಯಿತು?

By Prasad
|
Google Oneindia Kannada News

Oh my God! How did you know?
ಬಿಸಿಗಾಳಿ ಬಲೂನಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮಹಿಳೆಯೊಬ್ಬಳಿಗೆ ತಲುಪಬೇಕಾಗಿದ್ದ ತಾಣ ಸಿಗದೆ ಎಲ್ಲೋ ಕಳೆದುಹೋಗಿದ್ದೇನೆಂದು ಭಾಸವಾಗುತ್ತದೆ. ಬಲೂನನ್ನು ಸ್ವಲ್ಪ ಕೆಳಗಿಳಿಸಿ ವೀಕ್ಷಿಸಿದಾಗ ಒಬ್ಬ ವ್ಯಕ್ತಿ ಕಂಡುಬಂದು ಹೋದ ಜೀವ ಮತ್ತೆ ಬಂದಂತಾಗುತ್ತದೆ.

ಆತನನ್ನು ಉದ್ದೇಶಿಸಿ, "ಒಂದು ಗಂಟೆಯ ಹಿಂದೆ ನನ್ನ ಸ್ನೇಹಿತನನ್ನು ಸಂಧಿಸುತ್ತೇನೆಂದು ಭಾಷೆಯಿತ್ತಿದ್ದೆ. ಆದರೆ ಎಲ್ಲಿದ್ದೀನಂತ ತಿಳಿಯುತ್ತಿಲ್ಲ. ದಯವಿಟ್ಟು ಸಹಾಯ ಮಾಡ್ತೀರಾ?" ಅಂತ ಕೇಳ್ತಾಳೆ.

ಉತ್ತರವಾಗಿ ಆತ, "ನೀವೀಗ ಬಿಸಿಗಾಳಿ ಬಲೂನಿನಲ್ಲಿ ಭೂಮಿಯಿಂದ ಅಂದಾಜು 30 ಅಡಿ ಎತ್ತರದಲ್ಲಿದ್ದೀರಾ. 40ರಿಂದ 41 ಡಿಗ್ರಿ ಅಕ್ಷಾಂಶದಲ್ಲಿ ಮತ್ತು 59ರಿಂದ 60 ಡಿಗ್ರಿ ರೇಖಾಂಶದಲ್ಲಿರುವಿರಿ."

ಮಾರುತ್ತರವಾಗಿ ಆಕೆ, "ನೀವು ಇಂಜಿನಿಯರಾ?"

ಆಶ್ಚರ್ಯಚಕಿತವಾದ ಅವನು, "ಹೌದು, ನಿಮಗೆ ಹೇಗೆ ಗೊತ್ತಾಯಿತು?"

"ಹಾಂ, ತಾಂತ್ರಿಕವಾಗಿ ನೀವು ಹೇಳಿದ್ದೆಲ್ಲ ಸರಿ. ಆದರೆ, ಈ ಮಾಹಿತಿ ತೆಗೆದುಕೊಂಡು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ವಿಷಯವೇನೆಂದರೆ, ನಾನೀಗ ದಿಕ್ಕು ತಪ್ಪಿದ್ದೇನೆ. ನಿಮ್ಮಿಂದ ಯಾವ ಪ್ರಯೋಜನವೂ ಇಲ್ಲ. ನನ್ನ ಪ್ರಯಾಣ ಇನ್ನಷ್ಟು ತಡವಾಯಿತು" ಎಂದು ಮಹಿಳೆ ಪೇಚಾಡಿಕೊಂಡಳು.

"ನಿಮ್ಮನ್ನು ನೋಡಿದರೆ, ನೀವು ಉನ್ನತ ಮ್ಯಾನೇಜ್ ಮೆಂಟ್ ಹುದ್ದೆಯಲ್ಲಿದ್ದೀರಿ ಅಂತ ಕಾಣಿಸುತ್ತದೆ, ಹೌದಾ?" ಸೇರಿಗೆ ಸವ್ವಾಸೇರೆಂಬಂತೆ ಆತ ಪ್ರಶ್ನಿಸಿದ.

ಈ ಬಾರಿ ಆಶ್ಚರ್ಯವಾಗುವ ಸರದಿ ಆಕೆಯದು, "ಓ ಮೈ ಗಾಡ್, ನಿಮಗೆ ಹೇಗೆ ತಿಳಿಯಿತು?"

ಕೊಂಚವೂ ವಿಚಲಿತನಾಗದ ಅವನು, "ನೀವೆಲ್ಲಿದ್ದೀರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದೇ ನಿಮಗೇ ಗೊತ್ತಿಲ್ಲ. ಯಾವನೋ ಒಬ್ಬನಿಗೆ ಭಾಷೆಯಿತ್ತಿದ್ದೀರಾ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿಲ್ಲ ಮತ್ತು ಕೆಳಗಿದ್ದವರು ನಿಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಇಚ್ಛಿಸುತ್ತೀರಿ. ಆಮ್ ಐ ರೈಟ್?!"

ಜೋಕ್ ಕಳಿಸಿದವರು : ಮಂಜುನಾಥ್ ಅಜ್ಜಂಪುರ

ಓದುಗರಲ್ಲಿ ವಿನಂತಿ : ಓದುತ್ತಿದ್ದಂತೆ ಕಚಗುಳಿ ಇಡುವ, ನಗುವವರಿದ್ದರೆ ಗಹಗಹಿಸಿ ನಗಿಸುವ, ನಗಲೇಬಾರದೆನ್ನುವವರೂ ಮುಗುಳ್ನಗುವ ಜೋಕುಗಳ ಸರಮಾಲೆ ಇದ್ದರೆ ನಮಗೆ ಕಳಿಸಿ. ನಾವೂ ನಗೋಣ, ಓದುಗರನ್ನೂ ನಗಿಸೋಣ. ನಮ್ಮ ವಿಳಾಸ : [email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X