ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳ ಕೋಪ ಯಾವಾಗ್ಲೂ ಓವರ್ ಫ್ಲೋ ಆಗ್ತಿರತ್ತೆ!

By * ನಿವೇದಿತಾ
|
Google Oneindia Kannada News

Kannada Jokes
ನಲ್ಲಿ ರಿಪೇರಿ ಮಾಡುವವ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಧೀಶರು ವಿಚಾರಣೆ ಮಾಡಿ ರಿಪೇರಿಯವನ್ನು ಕೇಳಿದರು, "ಯಾಕಪ್ಪ ಹೆಂಡತಿಗೆ ವಿಚ್ಛೇದನ ಕೊಡ್ತಾ ಇದ್ದೀಯಾ?"

ನಲ್ಲಿ ರಿಪೇರಿಯವ, "ಅಯ್ಯೋ, ಏನು ಹೇಳೋದು ಸಾರ್, ಅವಳ ಕೋಪ ಯಾವಾಗ್ಲೂ ಓವರ್ ಫ್ಲೋ ಆಗ್ತಿರತ್ತೆ!"

***

ಇಡೀ ಬೆಂಗಳೂರಿನಲ್ಲಿ ಅತ್ಯಂತ ದಪ್ಪವಾಗಿರುವ ಹುಡುಗಿಗೆ ಏನಂತ ಕರೀತಾರೆ?

ಬೃಹತ್ ಬೆಂಗಳೂರು ಮಹಾನಗರ ಬಾಲಿಕೆ!

***

Kite ಸಿನಿಮಾ ಹೇಗಿದೆ ಗುರೂ?

ಕೈಟಾ? ಗಾಳಿಪಟ ಸಿನಿಮಾದ ರಿಮೇಕ್ ಗುರುವೆ. ಬಾಲಿವುಡ್ ನವರಿಗೆ ಸ್ವಂತಿಕೆ ಅನ್ನೋದೇ ಇಲ್ಲ.

***

ಗುಲಬರ್ಗಾಗೆ ಟ್ರಾನ್ಸಫರಾಗಿದ್ದ ಪೆದ್ದಣ್ಣ ಅಂಗಿ, ಬನಿಯನ್ನು ಬಿಚ್ಚಿ ಮನೆ ಮುಂದೆ ನಿಂತಿದ್ದ.

ಇದನ್ನು ನೋಡಿದ ಪಕ್ಕದ್ಮನೆಯವ, "ಯಾಕ್ಸಾರ್ ಇಂಥಾ ಸುಡುಬಿಸಿಲಲ್ಲಿ ಹೊರಗಡೆ ನಿಂತಿದ್ದೀರಾ?" ಅಂತ ಕೇಳಿದ.

ಅದಕ್ಕೆ ಪೆದ್ದಣ್ಣ, "ಸಿಕ್ಕಾಪಟ್ಟೆ ಸೆಖೆಗೆ ಮೈಯೆಲ್ಲಾ ಬೆವರು ಬಿಟ್ಟಿದೆ. ಒಣಗಿಸಲೆಂದು ಬಿಸಿಲಲ್ಲಿ ನಿಂತಿದ್ದೇನೆ" ಅಂತ ನಗೆ ಬೀರಿದ.

***

ಲೈಲಾ ಬಿರುಗಾಳಿಗೆ ಸಿಕ್ಕ ಜಾನ್, ಇರ್ಷಾದ್ ಮತ್ತು ಸಂತಾ ಕೂತಿದ್ದ ಬೋಟು ಬಂಗಾಳ ಕೊಲ್ಲಿಯಲ್ಲಿ ದಿಕ್ಕಾಪಾಲಾಗಿ ಒಂದು ದ್ವೀಪಕ್ಕೆ ಡಿಕ್ಕಿ ಹೊಡೆದು ನುಚ್ಚು ನೂರಾಯಿತು. ಮೂವರೂ ಹೇಗೋ ಪಾರಾದರು. ಸುರಕ್ಷಿತವಾಗಿ ಮತ್ತೊಂದು ದಡ ಸೇರಬೇಕಿದ್ದರೆ ನೂರು ಕಿ.ಮೀ. ಈಜಬೇಕಿತ್ತು.

ಮೊದಲು ಸಮುದ್ರಕ್ಕೆ ಧುಮುಕಿದ ಜಾನ್ ಇಪ್ಪತ್ತೈದು ಕಿ.ಮೀ. ಈಜಿ ನಾಟ್ ಪಾಸಿಬಲ್ ಅಂತ ವಾಪಸ್ ಬಂದ. ಯಾಕಪ್ಪ ಅಂತ ಕೇಳಿದ್ದಕ್ಕೆ, ಎಪ್ಪತ್ತೈದು ಕಿ.ಮೀ. ಈಜುವುದು ಅಸಾಧ್ಯ ಅಂತ ಜೋಲು ಮುಖ ಮಾಡಿದ. ಸರಿ, ನಾನು ಪ್ರಯತ್ನಿಸ್ತೀನಿ ಅಂತ ಇರ್ಷಾದ್ ನೀರಿಗೆ ಧುಮುಕಿ, ನಲವತ್ತೊಂಬತ್ತು ಕಿ.ಮೀ. ಈಜಿ ಮುಂದು ಹೋಗುವುದು ಸಾಧ್ಯವೇ ಇಲ್ಲ ವಾಪಸ್ ಬಂದ.

ಇಬ್ಬರನ್ನು ನೋಡಿ ಜೋರಾಗಿ ನಗೆನಕ್ಕ ಸಂತಾ ತಾನೂ ನೀರಿಗೆ ಧುಮುಕಿದ. ಎಪ್ಪತ್ತೈದು ಕಿ.ಮೀ. ಈಜಿದವ ಇಪ್ಪತ್ತೈದು ಕಿ.ಮೀ. ಈಜುವುದು ಸಾಧ್ಯವೇ ಇಲ್ಲ ಅಂತ ವಾಪಸ್ ಬಂದುಬಿಟ್ಟ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X