ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಿಂದಲಾದರೂ ಕೆಲಸ ಮಾಡಿ: ಭಾರತದಿಂದ 9,000 ಉದ್ಯೋಗಿಗಳಿಗೆ ಅವಕಾಶ

|
Google Oneindia Kannada News

'ಎಲ್ಲಿಂದಲಾದರೂ ಕೆಲಸ ಮಾಡಿ' ಹೀಗಂತ ಯಾವುದಾದರೂ ಕಂಪನಿ ಆಫರ್ ಕೊಟ್ಟುಬಿಟ್ಟರೆ ಉದ್ಯೋಗಿಗಳಿಗೆ ಸ್ವರ್ಗಕ್ಕೆ ದಾರಿತೋರಿದಷ್ಟೇ ಖುಷಿ ನೀಡುವುದರಲ್ಲಿ ಅನುಮಾನವಿಲ್ಲ. ಕೊರೊನಾದಿಂದ ಕೊಂಚ ಬಿಡುಗಡೆ ಸಿಗುತ್ತಿದ್ದಂತೆ ಹಲವಾರು ಕಂಪನಿಗಳು ಉದ್ಯೋಗಿಗಳಿಗೆ 'ವರ್ಕ್‌ ಫ್ರಾಂ ಆಫೀಸ್' ಎಂದು ಹೇಳಿ ಉದ್ಯೋಗಿಗಳಿಗೆ ಕಡ್ಡಾಯವಾಗಿ ಆಫೀಸ್ ಬರಲು ಸೂಚಿಸಿವೆ. ಈಗಲೂ ಕೊರೊನಾ ಭೀತಿಯಲ್ಲಿರುವ ಜನ ಹಾಗೂ ಮನೆಯಲ್ಲಿ ಆಫೀಸ್‌ ಕೆಲಸಕ್ಕೆ ಹೊಂದಿಕೊಂಡಿರುವ ಜನರಿಗೆ ಇದು ಕಿರಿಕಿರಿಯನ್ನುಂಟು ಮಾಡಿದೆ. ಈ ನಡುವೆ ಎಂಎನ್‌ಸಿ ಕಂಪನಿಯೊಂದು ಭಾರತದಾದ್ಯಂತ ಸುಮಾರು 9,000 ಹೊಸ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಆಫರ್ ಕೊಡುವುದಾಗಿ ಕರೆ ನೀಡಿದೆ.

ಮನೆಯಿಂದಲೇ ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳಲು ಕಂಪನಿ ಯೋಚನೆ ಮಾಡಿದೆ. ತಾವು ನೀಡುವ ಟಾರ್ಗೆಟ್ ಪೂರ್ಣಗೊಳಿಸಿದರೆ ಸಾಕು ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಶ್ರೇಣಿ II ಮತ್ತು III ರೀತಿಯಲ್ಲಿ ಹಂತ ಹಂತವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಜಾಗತಿಕ ಗ್ರಾಹಕ ಸೇವಾ ಸಾಫ್ಟ್‌ವೇರ್ ಮತ್ತು ಸೇವೆಗಳ ಕಂಪನಿ ಮಂಗಳವಾರ ಕಂಪನಿಯು ಭಾರತದಾದ್ಯಂತ ಸುಮಾರು 9,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಿದೆ. ನೇರ ಕರೆ ಹಾಗೂ ಚಾಟ್‌ಗಳ ಮೂಲಕ ಕಂಪನಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.

"ನಾವು ನಮ್ಮ ಜನರಿಂದ ಹೆಚ್ಚಾಗಿ ಕೆಲಸವನ್ನು ತೆಗೆದುಕೊಳ್ಳುತ್ತೇವೆ ಮತ್ತು ಅವರನ್ನು ನಾಯಕರನ್ನಾಗಿ ಬೆಳೆಸುವ ಮುನ್ನ ಫ್ರೆಷರ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಉದ್ಯಮಕ್ಕಿಂತ ನಮ್ಮ ಅಟ್ರಿಷನ್ ದರಗಳು ಸ್ಥಿರವಾಗಿ ಕಡಿಮೆ ಇರುವುದಕ್ಕೆ ಇದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಮ್ಮ ಕಾರ್ಯಪಡೆಯಲ್ಲಿ ವೈವಿಧ್ಯತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ," ಎಂದು ಮಿಂಟ್ ವರದಿಯ ಪ್ರಕಾರ, ಭಾರತ ಮತ್ತು ಅಮೇರಿಕಾ ಎಸ್ವಿಪಿ ಮತ್ತು HRD ಹೆಡ್ ನೀನಾ ನಾಯರ್ ಅವರು ಹೇಳಿದರು.

Work from anywhere: Job openings for 9,000 employees from India

ಕಂಪನಿಯು ಕಳೆದ ವರ್ಷ ಭಾರತದಿಂದ 5,000 ಜನರನ್ನು ನೇಮಿಸಿಕೊಂಡಿದೆ ಎಂದು ಹೇಳಿದೆ. ಕಂಪನಿಯು ಇತ್ತೀಚೆಗೆ ಲಾಸ್ ವೇಗಾಸ್‌ನಲ್ಲಿ ನಡೆದ CCW ಎಕ್ಸಲೆನ್ಸ್ ಅವಾರ್ಡ್ಸ್‌ನಲ್ಲಿ "ವರ್ಷದ BPO" ಪ್ರಶಸ್ತಿಯನ್ನು ಸ್ವೀಕರಿಸಿದೆ ಮತ್ತು ಇದನ್ನು ಕಂಪನಿಗೆ ಗ್ರಾಹಕ ಸಂಪರ್ಕ ವಾರ, ವಿಶ್ವದ ಅತಿದೊಡ್ಡ ಗ್ರಾಹಕ ಕಾರ್ಯಕ್ರಮದಿಂದ ಪ್ರಸ್ತುತಪಡಿಸಲಾಯಿತು.

English summary
An MNC company has offered 9,000 employees from India to work from home with jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X