ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರ ಅಂಗನವಾಡಿಯಲ್ಲಿ 171 ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಕೋಲಾರ, ಆಗಸ್ಟ್ 15: ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಗೆ 2021ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 171 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತ ಹಾಗೂ ಅಂಗನವಾಡಿ ಸಹಾಯಕ ಹುದ್ದೆಗಳಿಗೆ ಅರ್ಜಿ ಹಾಕಬಯಸುವವರು ಸೆಪ್ಟೆಂಬರ್ 13, 2021ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಮಹಿಳಾ ಮತ್ತು ಕಲ್ಯಾಣ ಇಲಾಖೆ
ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕ.
ಒಟ್ಟು ಹುದ್ದೆ: 171
-ಅಂಗನವಾಡಿ ಕಾರ್ಯಕರ್ತೆ: 38 ಹುದ್ದೆ
-ಅಂಗನವಾಡಿ ಸಹಾಯಕ: 133 ಹುದ್ದೆ

ಉದ್ಯೋಗ ಸ್ಥಳ: ಕೋಲಾರ, ಕರ್ನಾಟಕ
ಎಲ್ಲೆಲ್ಲಿ ಎಷ್ಟು ಹುದ್ದೆ ಖಾಲಿ?:
ಬಂಗಾರಪೇಟೆ:
ಅಂಗನವಾಡಿ ಕಾರ್ಯಕರ್ತೆ: 06 ಹುದ್ದೆ
-ಅಂಗನವಾಡಿ ಸಹಾಯಕಿ: 16 ಹುದ್ದೆ

WCD Kolar Recruitment 2021 apply for 171 Anganwadi Worker
**
ಬಂಗಾರಪೇಟೆ:
ಅಂಗನವಾಡಿ ಕಾರ್ಯಕರ್ತೆ: 06 ಹುದ್ದೆ
-ಅಂಗನವಾಡಿ ಸಹಾಯಕಿ: 16 ಹುದ್ದೆ
**
ಬೇತಮಂಗಲ:
ಅಂಗನವಾಡಿ ಕಾರ್ಯಕರ್ತೆ: 06 ಹುದ್ದೆ
-ಅಂಗನವಾಡಿ ಸಹಾಯಕಿ: 14 ಹುದ್ದೆ
**
ಕೋಲಾರ:
ಅಂಗನವಾಡಿ ಕಾರ್ಯಕರ್ತೆ: 05 ಹುದ್ದೆ
-ಅಂಗನವಾಡಿ ಸಹಾಯಕಿ: 26 ಹುದ್ದೆ
**
ಮಾಲೂರು:
ಅಂಗನವಾಡಿ ಕಾರ್ಯಕರ್ತೆ: 07 ಹುದ್ದೆ
-ಅಂಗನವಾಡಿ ಸಹಾಯಕಿ: 21 ಹುದ್ದೆ
***
ಮುಳಬಾಗಿಲು:
ಅಂಗನವಾಡಿ ಕಾರ್ಯಕರ್ತೆ: 08 ಹುದ್ದೆ
-ಅಂಗನವಾಡಿ ಸಹಾಯಕಿ: 32 ಹುದ್ದೆ
***
ಶ್ರೀನಿವಾಸಪುರ:
ಅಂಗನವಾಡಿ ಕಾರ್ಯಕರ್ತೆ: 08 ಹುದ್ದೆ
-ಅಂಗನವಾಡಿ ಸಹಾಯಕಿ: 24 ಹುದ್ದೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 13, 2021

ವಿದ್ಯಾರ್ಹತೆ : ಅಭ್ಯರ್ಥಿಗಳು 4, 9, 10 ಅಥವಾ ತತ್ಸಮಾನ ತರಗತಿಗಳಲ್ಲಿ ತೇರ್ಗಡೆ ಹೊಂದಿರಬೇಕು. ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು. ಅಗತ್ಯ ವಿದ್ಯಾರ್ಹತೆಗಿಂತ ಹೆಚ್ಚಿನ ಅರ್ಹತೆ ಹೊಂದಿದ್ದರೆ ಆಯ್ಕೆಗೆ ಪರಿಗಣಿಸುವಂತಿಲ್ಲ.

ಕರ್ನಾಟಕದ ರಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮುಕ್ತ ಶಾಲೆ/ಮುಕ್ತ ವಿದ್ಯಾಲಯಗಳಲ್ಲಿ ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಪ್ರಥಮ/ ದ್ವಿತೀಯ ಭಾಷೆಯಾಗಿ ಕನ್ನದ ಮತ್ತು ಸಾಮಾನ್ಯ ಗಣಿತ ಮತ್ತು ಸಮಾಜ ಶಾಸ್ತ್ರ /ಸಮಾಜ ವಿಜ್ಞಾನ ವಿಷಯಗಳನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಪ್ರಮಾಣ ಪತ್ರ/ ಅಂಕಪಟ್ಟಿಯಲ್ಲಿ ಗರಿಷ್ಠ 635ಕ್ಕೆ 219 ಅಂಕಗಳನ್ನು ಹೊಂದಿದ್ದಲ್ಲಿ ಅಂಥ ಅಭ್ಯರ್ಥಿಗಳನ್ನು ಪರಿಗಣಿಸತಕ್ಕದ್ದು.

ವಯೋಮಿತಿ:
ಕನಿಷ್ಠ ವರ್ಷ: 18 ವರ್ಷ
ಗರಿಷ್ಠ ವರ್ಷ: 35 ವರ್ಷ
ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ನಿಯಮದ ಅನುಸಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯತಿ ಸಿಗಲಿದೆ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ಸಂಬಳ ವಿವರ:
ಅಂಗನವಾಡಿ ಕಾರ್ಯಕರ್ತ: 8000ರು
ಅಂಗನವಾಡಿ ಸಹಾಯಕ: 4000 ರು
ಉಪ ಅಂಗನವಾಡಿ ಸಿಬ್ಬಂದಿ: 4750 ರು

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 12/08/2021
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13/09/2021

ಅರ್ಜಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಾಗಿ ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವೆಬ್ ತಾಣವನ್ನು ವೀಕ್ಷಿಸಬಹುದು.

ಆನ್ ಲೈನ್ ಅರ್ಜಿಯೊಂದಿಗೆ ಅಪ್ ಲೋಡ್ ಮಾಡಬೇಕಿರುವ ದಾಖಲಾತಿಗಳು:
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
* ಜನನ ಪ್ರಮಾಣ ಪತ್ರ/ಜನ್ಮ ದಿನಾಂಕ ದೃಢೀಕರಣಕ್ಕಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿ
* ನಿಗದಿತ ವಿದ್ಯಾರ್ಹತೆ ಅಂಕಪಟ್ಟಿ.
* ತಹಶೀಲ್ದಾರರು/ಉಪತಹಶೀಲ್ದಾರರಿಂದ ಪಡೆದು ಮೂರುವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ.
* ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ(ಮೀಸಲು ಅಂಗನವಾಡಿ ಕೇಂದ್ರಗಳಿಗೆ ಅರ್ಜಿಸಲ್ಲಿಸುವವರಿಗೆ ಮಾತ್ರ)
* ಪತಿಯ ಮರಣ ಪ್ರಮಾಣ ಪತ್ರ (ವಿಧವಾ ಅಭ್ಯರ್ಥಿಗಳಿಗೆ ಮಾತ್ರ, ವಿಧವಾ ವೇತನ ದೃಢೀಕರಣ ಪರಿಗಣಿಸುವುದಿಲ್ಲ)
* ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿ ಪ್ರಕರಣಗಳಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ
* ದಿವ್ಯಾಂಗ ಪ್ರಮಾಣ ಪತ್ರ
* ನ್ಯಾಯಾಲಯದಿಂದ ವಿಚ್ಛೇದನಾ ಪ್ರಮಾಣ ಪತ್ರ
* ಮಾಜಿ ದೇವದಾಸಿಯರ ಮಕ್ಕಳಾಗಿದ್ದರೆ ಅದಕ್ಕೆ ಸೂಕ್ತ ಪತ್ರ.
* ಪರಿತ್ಯಕ್ತೆ ಎಂಬ ಬಗ್ಗೆ ಗ್ರಾಮ ಪಂಚಾಯಿತಿಂದ ಪಡೆದ ಪ್ರಮಾಣ ಪತ್ರ
* ರಾಜ್ಯ ಮಹಿಳಾ ನಿಲಯಗಳ ನಿವಾಸಿ ಎಂಬ ಪ್ರಕರಣಗಳ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.
* ಯೋಜನಾ ನಿರಾಶ್ರಿತರೆಂಬ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ.

English summary
WCD Kolar recruitment 2021 notification has been released on official website for the recruitment of 171 vacancies at Women and Child Development Department Gadag (WCD Gadag).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X