ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಗೆ 2021ನೇ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಯಾದಗಿರಿ, ಬೆಳಗಾವಿ ಜಿಲ್ಲೆಯಲ್ಲಿ 316 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಅರ್ಜಿ ಹಾಕಬಯಸುವವರು ಅರ್ಜಿ ಸಲ್ಲಿಸಬಹುದು. ಯಾದಗಿರಿ ಜಿಲ್ಲೆ ಅಭ್ಯರ್ಥಿಗಳಿಗೆ ಆಗಸ್ಟ್ 28ರಂದು ಕೊನೆಯ ದಿನಾಂಕವಾಗಿದ್ದು, ಬೆಳಗಾವಿ ಜಿಲ್ಲೆ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಕೊನೆಯ ದಿನಾಂಕವಾಗಿದೆ.

ಸಂಸ್ಥೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ (WCD ಕರ್ನಾಟಕ)

ಬೆಂಗಳೂರಿನಲ್ಲಿ ಮಹಿಳಾ ಅಗ್ನಿವೀರರ ನೇಮಕಾತಿ ರ್‍ಯಾಲಿ : ಅರ್ಜಿ ಸಲ್ಲಿಸುವುದು ಹೇಗೆಬೆಂಗಳೂರಿನಲ್ಲಿ ಮಹಿಳಾ ಅಗ್ನಿವೀರರ ನೇಮಕಾತಿ ರ್‍ಯಾಲಿ : ಅರ್ಜಿ ಸಲ್ಲಿಸುವುದು ಹೇಗೆ

ಹುದ್ದೆ ಹೆಸರು: ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ.

ಒಟ್ಟು ಹುದ್ದೆ: ಯಾದಗಿರಿ ಜಿಲ್ಲೆ- 34, ಬೆಳಗಾವಿ ಜಿಲ್ಲೆ- 282 ಹುದ್ದೆಗಳು ಒಟ್ಟು 316 ಹುದ್ದೆಗಳು

ಅಂಗನವಾಡಿ ಕಾರ್ಯಕರ್ತೆ: 38 ಹುದ್ದೆ

WCD Karnataka Recruitment 2022: Apply For 316 Anganwadi Worker And Helper Posts In Yadgir And Belagavi

ಅಂಗನವಾಡಿ ಸಹಾಯಕಿ: 278 ಹುದ್ದೆ

ಉದ್ಯೋಗ ಸ್ಥಳ: ಯಾದಗಿರಿ, ಬೆಳಗಾವಿ

ಸಂಬಳ ವಿವರ: ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಅಧಿನಿಯಮಗಳ ಪ್ರಕಾರ

ವಿದ್ಯಾರ್ಹತೆ:

ಅಂಗನವಾಡಿ ಕಾರ್ಯಕರ್ತೆ: 10ನೇ ತರಗತಿ ತೇರ್ಗಡೆಯಾಗಿರಬೇಕು.

ಅಂಗನವಾಡಿ ಸಹಾಯಕಿ : 4 ನೇ, 09ನೇ ತರಗತಿ ತೇರ್ಗಡೆ. ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಬೇಕು. ಅಗತ್ಯ ವಿದ್ಯಾರ್ಹತೆಗಿಂತ ಹೆಚ್ಚಿನ ಅರ್ಹತೆ ಹೊಂದಿದ್ದರೆ ಆಯ್ಕೆಗೆ ಪರಿಗಣಿಸುವಂತಿಲ್ಲ.

ವಯೋಮಿತಿ: ಕನಿಷ್ಠ ವರ್ಷ: 18 ವರ್ಷ ಗರಿಷ್ಠ ವರ್ಷ: 35 ವರ್ಷ ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ನಿಯಮದ ಅನುಸಾರ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ವಿನಾಯತಿ ಸಿಗಲಿದೆ.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕವಿಲ್ಲ.

ನೇಮಕಾತಿ ಪ್ರಕ್ರಿಯೆ: ಮೆರಿಟ್ ಪಟ್ಟಿ ಮತ್ತು ವೈಯಕ್ತಿಕ ಸಂದರ್ಶನ.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಆಗಸ್ಟ್ 04, 2022

WCD Karnataka Recruitment 2022: Apply For 316 Anganwadi Worker And Helper Posts In Yadgir And Belagavi

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಯಾದಗಿರಿ ಜಿಲ್ಲೆ ಅಭ್ಯರ್ಥಿಗಳಿಗೆ ಆಗಸ್ಟ್ 28ರಂದು ಕೊನೆಯ ದಿನಾಂಕವಾಗಿದ್ದು, ಬೆಳಗಾವಿ ಜಿಲ್ಲೆ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5 ರಂದು ಕೊನೆಯ ದಿನಾಂಕವಾಗಿದೆ.

ಅರ್ಜಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಗಾಗಿ ಕರ್ನಾಟಕ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ವೆಬ್ ತಾಣ anganwadirecruit.kar.nic.in ವೀಕ್ಷಿಸಬಹುದು.

ಆನ್ ಲೈನ್ ಅರ್ಜಿಯೊಂದಿಗೆ ಅಪ್ ಲೋಡ್ ಮಾಡಬೇಕಿರುವ ದಾಖಲಾತಿಗಳು: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಮೊದಲನೆಯದಾಗಿ WCD ಕರ್ನಾಟಕ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

WCD ಕರ್ನಾಟಕ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

WCD ಕರ್ನಾಟಕ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಕ್ಯಾಪ್ಚರ್ ಮಾಡಿಟ್ಟುಕೊಳ್ಳಿ.

English summary
Women and Child Development Department Karnataka invited applications from eligible and interested candidates to fill up Anganwadi Worker and Helper Posts in Yadgir – Belagavi through WCD Karnataka official notification August 2022. Apply for 316 Anganwadi Worker and Helper vacancies. Know Details Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X