• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋಲಾರ; ಕೆಲಸ ಖಾಲಿ ಇದೆ, ಜ 17, 18ರಂದು ನೇರ ಸಂದರ್ಶನ

|
Google Oneindia Kannada News

ಕೋಲಾರ, ಜನವರಿ 14; ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ಜನವರಿ 17 ಮತ್ತು 18ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

2021-22ನೇ ಸಾಲಿನಲ್ಲಿ ಒಟ್ಟು 59 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿಗ್ರಾಮ ಲೆಕ್ಕಿಗರ ನೇಮಕಾತಿ; ಆಕಾಂಕ್ಷಿಗಳಿಗೆ ಶೀಘ್ರದಲ್ಲೇ ಸಿಹಿಸುದ್ದಿ

ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು 2, ಎನ್‌ಯುಹೆಚ್‌ಎಂ ವೈದ್ಯಾಧಿಕಾರಿಗಳು 3, ಆಡಿಯೋಲಾಜಿಸ್ಟ್ 1, ಆರ್‌ಬಿಎಸ್‌ಕೆ ಫಾರ್ಮಸಿಸ್ಟ್ 1, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕರು 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ ಆಡಳಿತ ಸಹಾಯಕ ಹುದ್ದೆಗೆ ಅರ್ಜಿ ಕರೆದ ಧಾರವಾಡ ಜಿಲ್ಲಾ ಪಂಚಾಯಿತಿ

ಮೇಂಟೆನೆನ್ಸ್ ಇಂಜಿನಿಯರ್ 1, ಪ್ರಯೋಗ ಶಾಲಾ ತಂತ್ರಜ್ಞರು 2, ಒಟಿ ಟೆಕ್ನಿಷಿಯನ್ 3, ಡೆಂಟಲ್ ಟೆಕ್ನಿಷಿಯನ್ 1, ಆರೋಗ್ಯ ನಿರೀಕ್ಷಣ ಅಧಿಕಾರಿಗಳು 1, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ 2, ಕಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ 2 ಮತ್ತು ಶುಶ್ರೂಷಕ ಅಧಿಕಾರಿ 6 ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಯಲಿದೆ.

ದಾವಣಗೆರೆ; ಕೆಲಸ ಖಾಲಿ ಇದೆ, ಜ.23ರೊಳಗೆ ಅರ್ಜಿ ಹಾಕಿ ದಾವಣಗೆರೆ; ಕೆಲಸ ಖಾಲಿ ಇದೆ, ಜ.23ರೊಳಗೆ ಅರ್ಜಿ ಹಾಕಿ

ನೇರ ಸಂದರ್ಶನ 17/1/2022 ಮತ್ತು 18/1/2022ರ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ದಾಖಲೆಗಳ ಜೊತೆ 1 ಸೆಟ್ ಝೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.

ವಿಳಾಸ; ಜಿಲ್ಲಾ ಆರೋಗ್ಯ್ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ. ಕೆ.ಎಸ್.ಟಿ.ಬಿ ಸ್ಯಾನಿಟೋರಿಯಂ ಆಸ್ಪತ್ರೆ ಆವರಣ, ಬಂಗಾರಪೇಟೆ.

ಅಭ್ಯರ್ಥಿಗಳಿಗೆ ಸೂಚನೆಗಳು

* ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡುವ ಹಕ್ಕು ಸಹ ಸಮಿತಿಗೆ ಇರುತ್ತದೆ.

* ರೋಸ್ಟರ್ ಕಮ್‌ ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

* ನೇರ ಸಂದರ್ಶನದ ದಿನಾಂಕದಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಮಾತ್ರ ಅವಕಾಶವಿದೆ.

* ಶುಶ್ರೂಷಕ ಅಧಿಕಾರಿಗಳ ಹುದ್ದೆಗೆ ಮಾತ್ರ ಜನವರಿ 18ರಂದು ಸಂದರ್ಶನ ನಡೆಯಲಿದೆ. ಉಳಿದ ಹುದ್ದೆಗಳಿಗೆ ಜನವರಿ 17ರಂದು ಸಂದರ್ಶನ ನಡೆಯುತ್ತದೆ.

ಸಮುದಾಯ ಸಂಪನ್ಮೂಲ ವ್ಯಕ್ತಿ ಹುದ್ದೆ; ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯ ವತಿಯಿಂದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಅಡಿಯಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಲ್ಲಿ ಹಗರಿಬೊಮ್ಮನಹಳ್ಳಿ ಪುರಸಭೆಯ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಗೌರವಧನ ಆಧಾರದ ಮೇಲೆ ತಾತ್ಕಾಲಿಕವಾಗಿ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಸ್ವ-ಸಹಾಯ ಸಂಘ(ಗುಂಪು)ಗಳ ಸದಸ್ಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತಿದ್ದು, ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ.

ಆಸಕ್ತರು ಕಛೇರಿಯ ಅವಧಿಯಲ್ಲಿ ಕಛೇರಿಯ ಸಮುದಾಯ ಸಂಘಟನಾಧಿಕಾರಿ ಅವರನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಒಟ್ಟು ಹುದ್ದೆಗಳ ಸಂಖ್ಯೆ 2. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ 8000 ರೂ. ಆಗಿದೆ. ಪ್ರಯಾಣ ಭತ್ಯೆ 2000 ರೂ. ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳಿಗೆ ಜನವರಿ 29ರ ತನಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಹಾಗೂ ಹೆಚ್ಚಿನ ವಿದ್ಯಾರ್ಹತೆಗೆ ಆದ್ಯತೆ ನೀಡಲಾಗುವುದು, ಕಂಪ್ಯೂಟರ್ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರತಕ್ಕದ್ದು).

ಹಗರಿಬೊಮ್ಮನಹಳ್ಳಿ ಪುರಸಭೆಯ ವ್ಯಾಪ್ತಿಯಲ್ಲಿ ಖಾಯಂ ವಾಸವಿದ್ದು, ಕನಿಷ್ಠ 3 ವರ್ಷಗಳಿಂದ ಸ್ವ-ಸಹಾಯ ಸಂಘದ (ಗುಂಪಿನಲ್ಲಿ) ಸದಸ್ಯೆಯಾಗಿರತಕ್ಕದ್ದು. ಆಂತರಿಕ ಸಾಲ ಪಡೆದು ಮರು ಪಾವತಿಸಿರಬೇಕು / ಚಾಲ್ತಿಯಲ್ಲಿರಬೇಕು ಸಾಲ ಮರು ಪಾವತಿಸದೇ ಸುಸ್ತಿದಾರರಾಗಿರಬಾರದು.

ಸರ್ಕಾರಿ/ ಅರೇ ಸರ್ಕಾರಿ/ ಎನ್.ಜಿ.ಓ. ಗಳಲ್ಲಿ ಉದ್ಯೋಗಸ್ಥರಾಗಿರಬಾರದು, ಉತ್ತಮ ಸಂವಹನ ಕೌಶಲ್ಯ ಜೊತೆಗೆ ಸಮುದಾಯ ಚಟುವಟಿಕೆ ತರಬೇತಿಗಳಲ್ಲಿ ಭಾಗವಹಿಸುವಂತಿರಬೇಕು, ಸ್ವ-ಸಹಾಯ ಸಂಘ ನಿರ್ವಹಿಸಬೇಕಿರುವ ಪುಸ್ತಕಗಳು ಹಾಗೂ ವಹಿಗಳ ಬಗ್ಗೆ ಜ್ಞಾನವನ್ನು ಹೊಂದಿರಬೇಕು.

ಕಾರ್ಯನಿಮಿತ್ತ ಅಗತ್ಯವಿದ್ದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ/ ಜಿಲ್ಲೆಗಳಲ್ಲಿ/ ಹೊರ ರಾಜ್ಯಗಳಲ್ಲಿ ನೀಡುವ ತರಬೇತಿ ಅಥವಾ ಕಾರ್ಯದ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ದರಿರಬೇಕು. ಹಗರಿಬೊಮ್ಮನಹಳ್ಳಿ ಪುರಸಭೆಯ ವ್ಯಾಪ್ತಿಯ ಸ್ವ-ಸಹಾಯ ಸಂಘಗಳ (ಗುಂಪಿನ) ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

English summary
Walk in interview in Kolar on January 17 and 18 for 59 post. Candidates can attend walk in interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X