ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ; ಅಕ್ಟೋಬರ್ 25ರಂದು ವಾಕ್ ಇನ್ ಇಂಟರ್‌ ವ್ಯೂ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23 : ಚಿತ್ರದುರ್ಗ ಉದ್ಯೋಗ ವಿನಿಮಯ ಕೇಂದ್ರ ಅಕ್ಟೋಬರ್ 25ರಂದು ವಾಕ್ ಇನ್ ಇಂಟರ್‌ ವ್ಯೂ ಆಯೋಜಿಸಿದೆ. ನಿರುದ್ಯೋಗಿ ಯುವಕ/ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯೆಸ್ ಕೇಂದ್ರ ಚಿತ್ರದುರ್ಗ ಜಂಟಿಯಾಗಿ ವಾಕ್ ಇನ್ ಇಂಟರ್ ವ್ಯೂ ಆಯೋಜನೆ ಮಾಡಿವೆ. ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಬೆಳಗ್ಗೆ 10 ರಿಂದ ಸಂಜೆ 5 ಗಂಟೆ ತನಕ ಸಂದರ್ಶನ ನಡೆಯಲಿದೆ.

ನೈಋತ್ಯ ರೈಲ್ವೆ ನೇಮಕಾತಿ: 386 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನನೈಋತ್ಯ ರೈಲ್ವೆ ನೇಮಕಾತಿ: 386 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್‌ಎಸ್‌ಎಲ್‌ಸಿ ಪಾಸು/ಫೇಲ್, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೊಮಾ ಯಾವುದೇ ಪದವಿ ಪಾಸು/ಫೇಲ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಚಿತ್ರದುರ್ಗದ ಉದ್ಯೋಗ ವಿನಿಮಯ ಕಚೇರಿಯಲ್ಲಿ ವಾಕ್ ಇನ್ ಇಂಟರ್‌ ವ್ಯೂ ನಡೆಯಲಿದೆ.

ಬಳ್ಳಾರಿ ಹಾಲು ಉತ್ಪಾದಕರ ಸಂಘದಲ್ಲಿ ಕೆಲಸ ಖಾಲಿ ಇದೆಬಳ್ಳಾರಿ ಹಾಲು ಉತ್ಪಾದಕರ ಸಂಘದಲ್ಲಿ ಕೆಲಸ ಖಾಲಿ ಇದೆ

jobs

ವಾಕ್ ಇನ್ ಇಂಟರ್‌ ವ್ಯೂ ನಲ್ಲಿ ಪಾಲ್ಗೊಳ್ಳುವವರು ಬಯೋಡಾಟಾ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಕರ್ನಾಟಕ ಪೊಲೀಸ್ ನೇಮಕಾತಿ; 300 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳುಕರ್ನಾಟಕ ಪೊಲೀಸ್ ನೇಮಕಾತಿ; 300 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳು

ವಿಳಾಸ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸ್ಟೇಡಿಯಂ ತಿರುವು, ಹಳೇ ವೈಶಾಲಿ ಗೇಟ್ ಹತ್ತಿರ, ಚಿತ್ರದುರ್ಗ.

ಹಾಸನದಲ್ಲಿ ನೇರ ಸಂದರ್ಶನ : ಹಾಸನದ ಹೆಸರಾಂತ ಕಂಪನಿಗಳು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅ.24 ರಂದು ನೇಮಕಾತಿ ಮಾಡಿಕೊಳ್ಳಲಿವೆ. ಬೆಳಗ್ಗೆ 10 ಗಂಟೆಯಿಂದ ಐಟಿಐ ಮತ್ತು ಡಿಪ್ಲೊಮೋ ನಲ್ಲಿ ತೇರ್ಗಡೆ ಹೊಂದಿದ 18 - 30 ವರ್ಷ ವಯೋಮಿತಿಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ನೇರ ನೇಮಕಾತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ನಿರುದ್ಯೋಗಿ ಯುವಕ/ಯುವತಿಯರು ತಮ್ಮ ಮೂಲ ದಾಖಲಾತಿಯ ಜೆರಾಕ್ಸ್ ಪ್ರತಿಗಳು ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬಹುದು.

English summary
Chitradurga district employment exchange office organized walk in interview on October 25, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X