• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 7 ರಂದು ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ

|

ಮಡಿಕೇರಿ ಮೇ.04: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ ನಿಗದಿಯಾಗಿದೆ.

ಎಂಬಿಬಿಎಸ್ ವೈದ್ಯರ 7 ಹುದ್ದೆ ಮತ್ತು ತಜ್ಞ ವೈದ್ಯರಲ್ಲಿ ಮಕ್ಕಳ ತಜ್ಞರ 1 ಹುದ್ದೆ ಮತ್ತು ಅರಿವಳಿಕೆ ತಜ್ಞರು 1 ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಖಾಲಿ ಇರುವ ಎದುರು ಹುದ್ದೆಯಡಿ ನೇಮಕಾತಿ ನಡೆಸಲಾಗುತ್ತಿದೆ. ಕೋವಿಡ್ ನಿರ್ವಹಣೆಯ ಸಂಬಂಧ 6 ತಿಂಗಳ ಅವಧಿಗೆ ಜನರಲ್ ಮೆಡಿಸಿನ್-3, ಸ್ತ್ರೀ ರೋಗ ತಜ್ಞರು-4, ಅರಿವಳಿಕೆ ತಜ್ಞರು-8, ಮಕ್ಕಳ ತಜ್ಞರು-7, ಚರ್ಮರೋಗ ತಜ್ಞರು-1, ರೇಡಿಯೋಲಾಜಿಸ್ಟ್-1 ಹುದ್ದೆಯನ್ನು ಭರ್ತಿ ಮಾಡಲು ಮೇ 7 ರಂದು ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.

ನೇರ ಸಂದರ್ಶನಕ್ಕೆ ಆಗಮಿಸುವ ಸಂದರ್ಭ ಪೊಲೀಸರು ತಡೆದಲ್ಲಿ ಅಭ್ಯರ್ಥಿಗಳು ಪತ್ರಿಕಾ ಪ್ರಕಟಣೆಯ ಪ್ರತಿ ಮತ್ತು ತಮ್ಮ ಶೈಕ್ಷಣಿಕ ಅರ್ಹತೆಯ ದಾಖಲಾತಿಗಳನ್ನು ತೋರಿಸಿ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗೆ 08272-225443 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

English summary
Walk in Interview for Specialist Doctors and various post for Kodagu Health and family department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X