ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಚೆ ಇಲಾಖೆ ಗದಗ ವಿಭಾಗದಲ್ಲಿ ಕೆಲಸ ಖಾಲಿ ಇದೆ

|
Google Oneindia Kannada News

ಗದಗ, ಜುಲೈ 29; ಅಂಚೆ ಇಲಾಖೆಯ ಗದಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ನೇರ ಸಂದರ್ಶನ ನಡೆಸಲಾಗುತ್ತದೆ.

ಆಗಸ್ಟ್ 3ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ನೇರ ಸಂದರ್ಶನದಲ್ಲಿ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ 18 ರಿಂದ 50 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ಬೆಂಗಳೂರು ಸ್ಮಾರ್ಟ್‌ ಸಿಟಿ ನೇಮಕಾತಿ; ಆಗಸ್ಟ್‌ 5ರೊಳಗೆ ಅರ್ಜಿ ಹಾಕಿ ಬೆಂಗಳೂರು ಸ್ಮಾರ್ಟ್‌ ಸಿಟಿ ನೇಮಕಾತಿ; ಆಗಸ್ಟ್‌ 5ರೊಳಗೆ ಅರ್ಜಿ ಹಾಕಿ

ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. ನೇರ ಸಂದರ್ಶನಕ್ಕೆ ಬರುವಾಗ ಇತ್ತೀಚಿನ ಭಾವಚಿತ್ರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲು ಹಾಗೂ ಸ್ವ ವಿವರಗಳೊಂದಿಗೆ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ.

Nainital ಬ್ಯಾಂಕ್ ನೇಮಕಾತಿ; 150 ಹುದ್ದೆಗೆ ಅರ್ಜಿ ಹಾಕಿ Nainital ಬ್ಯಾಂಕ್ ನೇಮಕಾತಿ; 150 ಹುದ್ದೆಗೆ ಅರ್ಜಿ ಹಾಕಿ

 Walk In Interview For Postal Agent Post At Gadag

ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಪ್ರಧಾನ ಮತ್ತು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಅಂಚೆ ವಿಭಾಗದ ಮುಖ್ಯಸ್ಥರಿಗೆ ಸಮಂಜಸವೆಂದು ಕಂಡುಬರುವ ಯಾವುದೇ ಅಭ್ಯರ್ಥಿಗಳಿಗೆ ಆಯ್ಕೆಯಾದ ಪಕ್ಷದಲ್ಲಿ ಅವಕಾಶ ನೀಡಲಾಗುತ್ತದೆ.

KUIDFC ನೇಮಕಾತಿ; ಬೆಂಗಳೂರಿನಲ್ಲಿ ಕೆಲಸKUIDFC ನೇಮಕಾತಿ; ಬೆಂಗಳೂರಿನಲ್ಲಿ ಕೆಲಸ

ಆಯ್ಕೆಯಾದ ಅಭ್ಯರ್ಥಿಗಳು 5000 ರೂ.ಗಳನ್ನು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ಭದ್ರತಾ ಠೇವಣಿಯನ್ನು ಇಡಬೇಕು. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ನಿಗದಿತ ವೇತನ ಇರುವುದಿಲ್ಲ, ಅವರು ಮಾಡಿದ ವ್ಯವಹಾರಕ್ಕೆ ತಕ್ಕಂತೆ ಸೂಕ್ತ ಕಮೀಷನ್ ನೀಡಲಾಗುವುದು.

ಅಭ್ಯರ್ಥಿಗಳು ಬೇರೆ ಯಾವುದೇ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ನೇರ ಸಂದರ್ಶನ ನಡೆಯುವ ಸ್ಥಳ; ಗದಗ ಎಪಿಎಂಸಿ ಯಾರ್ಡ್ ಛೇಂಬರ್ ಆಫ್ ಕಾಮರ್ಸ್ ಎದುರಿನ ಅಂಚೆ ಅಧೀಕ್ಷಕರ ಕಾರ್ಯಾಲಯ. ಆಗಸ್ಟ್ 3ರ ಬೆಳಗ್ಗೆ 10 ಗಂಟೆಗೆ.

English summary
Apply for agent post at Gadag postal circle to sell postal insurance. Walk in interview organized on August 3, 2021 at Gadag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X