• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಂಥಾಲಯ ಸಹಾಯಕ ಹುದ್ದೆಗೆ ನೇರ ಸಂದರ್ಶನ

|

ಬೆಂಗಳೂರು, ಜನವರಿ 17: ರಾಣೆಬೆನ್ನೂರು ತಾಲೂಕು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜನವರಿ 18ರಂದು ನೇರ ಸಂದರ್ಶನವಿದ್ದು, ಆಸಕ್ತರು ಹಾಜರಾಗಬಹುದು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಬೆಳಗಾವಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿ; ನೋಂದಣಿ ಮಾಡಿಸಿ

ಅಭ್ಯರ್ಥಿಗಳು ಎಂಎಸ್ಸಿ ಇನ್ ಲೈಬ್ರರಿ ಸೈನ್ಸ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಆಸಕ್ತರು ಅರ್ಜಿ ನಮೂನೆಯಲ್ಲಿ ಸ್ವ ವಿವರಗಳನ್ನು ಭರ್ತಿ ಮಾಡಿ, ಎರಡು ದೃಢೀಕೃತ ಪ್ರತಿಯ ಝೆರಾಕ್ಸ್‌ಗಳೊಂದಿಗೆ ಜನವರಿ 18ರಂದು ನೇರ ಸಂದರ್ಶನಕ್ಕೆ ಹಾಜರಾಹಬಹುದು.

ಎಸ್ಬಿಐ ನೇಮಕಾತಿ 2021: 452 ಹುದ್ದೆಗಳಿವೆ ಅರ್ಜಿ ಹಾಕಿ

ವಿದ್ಯಾರ್ಹತೆಯ ಎಲ್ಲಾ ಸಂಬಂಧಪಟ್ಟ ಮೂಲ ದಾಖೆಲೆಗಳನ್ನು ಸಂದರ್ಶನದ ಸಮಯದಲ್ಲಿ ಹಾಜರುಪಡಿಸಬೇಕು. ಅರ್ಜಿಗಳನ್ನು ಮುಂಗಡವಾಗಿ ಕಳಿಸುವ ಅಗತ್ಯವಿಲ್ಲ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ನೇಮಕಾತಿ; ಜ.20ರೊಳಗೆ ಅರ್ಜಿ ಹಾಕಿ

ನೇರ ಸಂದರ್ಶನ ನಡೆಯುವ ವಿಳಾಸ; ಡೀನ್ (ಕೃಷಿ) ರವರ ಕಾರ್ಯಾಲಯ, ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ. ಬೆಳಗ್ಗೆ 10.30ಕ್ಕೆ.

English summary
Walk in interview for library assistant post at College of Agriculture, Hanumanamatti, Haveri. Candidates can attend interview on January 18, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X