• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 8 ರಂದು ವಿವಿಧ ಟೆಕ್ನಿಷಿಯನ್ಸ್ ಹುದ್ದೆಗೆ ನೇರ ಸಂದರ್ಶನ

|

ಮೈಸೂರು, ಮೇ.04: ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವಿವಿಧ ತಜ್ಞ ವೈದ್ಯರ ಹುದ್ದೆಗೆ ಮೇ 8ರಂದು ನೇರ ಸಂದರ್ಶನ ನಿಗದಿಯಾಗಿದೆ.

ಮೇ 8ರಂದು ಬೆಳಗ್ಗೆ ಬೆಳಗ್ಗೆ 7.30 ರಿಂದ ಬೆಳಗ್ಗೆ 9.30ರವರೆಗೆ ಐಸಿಯು ಟೆಕ್ನಿಷಿಯನ್ಸ್ ( 14 ಹುದ್ದೆಗಳು), ಎಮರ್ಜೆನ್ಸಿ ಮೆಡಿಷನ್/ಇನ್‌ಟೆಂಸಿವಿಸ್ಟ್ (11 ಹುದ್ದೆಗಳು), ಎಕೋ ಟೆಕ್ನಿಷಿಯನ್ಸ್ (4 ಹುದ್ದೆಗಳು) , ಎಕ್ಸ್ ರೇ ಟೆಕ್ನಿಷಿಯನ್ಸ್ (15 ಹುದ್ದೆಗಳು), ಸೈಸಿಯೋಥರೋಪಿಸ್ಟ್ (8 ಹುದ್ದೆಗಳು), ರೆಸ್ಪಿರೆಟರಿ ಕೆರ್ ಟೆಕ್ನಿಷಿಯನ್ಸ್ (8 ಹುದ್ದೆಗಳು), ವೆಂಟಿಲೇಟರ್ ಟೆಕ್ನಿಷಿಯನ್ಸ್ (8 ಹುದ್ದೆಗಳು), ಆಕ್ಸಿಜನ್ ಟೆಕ್ನಿಷಿಯನ್ಸ್ (3 ಹುದ್ದೆಗಳು), ಸ್ವಾಬ್ ಕಲೆಕ್ಟರ್ಸ್ (11 ಹುದ್ದೆಗಳು), ಸ್ಟಾಫ್ ನರ್ಸ್ (337) ಹಾಗೂ ಡಾಟಾ ಆಪರೇಟರ್ಸ್ (22 ಹುದ್ದೆಗಳು) ಹುದ್ದೆಗಾಗಿ ನೇಮಕಾತಿ ನಡೆಯಲಾಗುತ್ತಿದೆ.

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಮೂಲ ಅಂಕ ಪಟ್ಟಿಗಳು, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ಪುರಾವೆ ಮತ್ತು ಗುರುತಿನ ಚೀಟಿಗಳ 2 ಜೆರಾಕ್ಸ್ ಪ್ರತಿಗಳೊಂದಿಗೆ ಮೇಲ್ಕಂಡ ದಿನಾಂಕದಂದು ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2520512 ನ್ನು ಸಂಪರ್ಕಿಸಬಹುದು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Walk in Interview for Specialist Doctors and various post for Mysuru Health and family department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X