ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಈ ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆ ಭರ್ತಿಗೆ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮೇ 06; ಗ್ರಾಮ ಲೆಕ್ಕಿಗರ ನೇಮಕಾತಿ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿವಿಧ ಜಿಲ್ಲೆಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮೋದನೆ ನೀಡಲಾಗಿದೆ. ಈ ಕುರಿತು ಆಯಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯಿಂದ ಪತ್ರ ಬರೆಯಲಾಗಿದೆ.

ದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿದಾವಣಗೆರೆ; ಬ್ಯಾಂಕಿನಲ್ಲಿ ಕೆಲಸ ಖಾಲಿ ಇದೆ, 48 ಹುದ್ದೆಗೆ ಅರ್ಜಿ ಹಾಕಿ

ಜಿಲ್ಲಾಡಳಿತದಿಂದ ಪಡೆದ ಉಲ್ಲೇಖಿತ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾವಾರು ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ. ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮೋದನೆ ನೀಡಿದೆ.

ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ಮೇ 30ರೊಳಗೆ ಅರ್ಜಿ ಹಾಕಿ

Various Districts Village Accountant Recruitment Soon

ಯಾವ-ಯಾವ ಜಿಲ್ಲೆ; ಕೋಲಾರ 11, ತುಮಕೂರು 13, ಚಿಕ್ಕಬಳ್ಳಾಪುರ 10, ಕೊಡಗು 13, ಚಿತ್ರದುರ್ಗ 11 ಮತ್ತು ಉತ್ತರ ಕನ್ನಡದಲ್ಲಿ 26 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ.

ಕಲಬುರಗಿ; ಕೆಲಸ ಖಾಲಿ ಇದೆ, ಮೇ 16ರ ತನಕ ಅರ್ಜಿ ಹಾಕಿ ಕಲಬುರಗಿ; ಕೆಲಸ ಖಾಲಿ ಇದೆ, ಮೇ 16ರ ತನಕ ಅರ್ಜಿ ಹಾಕಿ

Various Districts Village Accountant Recruitment Soon

ಇನ್ನು ಮುಂದೆ ಯಾವುದೇ ಜಿಲ್ಲೆಗಳಲ್ಲಿ ಮಂಜೂರಾಗಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಪೈಕಿ ಶೇ.85ರಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರದ ಸಹಮತಿ ಇದೆ ಎಂದು ಭಾವಿಸಿ ಭರ್ತಿ ಮಾಡಲು ಕ್ರಮ ವಹಿಸುವಂತೆ ಹಾಗೂ ನೇಮಕಾತಿ ಆದೇಶ ನೀಡುವ ಮುನ್ನ ಆಯವ್ಯಯದಲ್ಲಿ ಅನುದಾನ ಒದಗಿಸುವ ಸಲುವಾಗಿ ಸರ್ಕಾರದ ಸಹಮತಿ ಪಡೆಯುವಂತೆ ತಿಳಿಸಲಾಗಿದೆ.

English summary
Karnataka government approved for the village accountant recruitment in various districts. Deputy commissioner lead committee will announce notification for the post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X