ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2500 ಉದ್ಯೋಗಿಗಳ ನೇಮಕಕ್ಕೆ ಸಿದ್ಧವಾದ ಯುಎಸ್ ಮೂಲದ ಕಂಪನಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಅಮೇರಿಕನ್ ಸಾಫ್ಟ್‌ವೇರ್ ಕಂಪನಿ ಸೇಲ್ಸ್‌ಫೋರ್ಸ್ 2022ರ ಅಂತ್ಯದ ವೇಳೆಗೆ ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚಿಸುವ ಸುಳಿವು ನೀಡಿದೆ. ಮುಂದಿನ ಜನವರಿ ಹೊತ್ತಿಗೆ ಸುಮಾರು ಮೂರನೇ ಒಂದರಷ್ಟು ಭಾಗ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಕಂಪನಿಯು ಯೋಜನೆ ಹಾಕಿಕೊಂಡಿದೆ.

ಕಳೆದ ಏಪ್ರಿಲ್ 2020ರಲ್ಲಿ ಯುಎಸ್ ಮೂಲದ ಸೇಲ್ಸ್‌ಫೋರ್ಸ್ ಕಂಪನಿಯಲ್ಲಿ 2,500ರಷ್ಟಿದ್ದ ಉದ್ಯೋಗಿಗಳ ಸಂಖ್ಯೆಯನ್ನು 7,500ಕ್ಕೆ ಅಂದರೆ ಮೂರು ಪಟ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಮುಂದಿನ 3 ತಿಂಗಳಲ್ಲಿ ಸುಮಾರು 2,500 ಉದ್ಯೋಗಗಳನ್ನು ಸೃಷ್ಟಿಸಲು ಕಂಪನಿಯು ಸಜ್ಜಾಗಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಲ್ಲಿ 56 ಹುದ್ದೆಗಳಿವೆಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಲ್ಲಿ 56 ಹುದ್ದೆಗಳಿವೆ

ಭಾರತದಲ್ಲಿ ಸೇಲ್ಸ್‌ಫೋರ್ಸ್‌ನ ಕೇಂದ್ರೀಕೃತ ಕ್ಷೇತ್ರಗಳಾದ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ಉತ್ಪಾದನೆ, ಸೇವೆಗಳು ಮತ್ತು ಸಾಮಾಜಿಕ ಸೇವೆಗಳು, ಆದ್ಯತೆಯ ಕ್ರಮಗಳ ಬಗ್ಗೆ ಸೇಲ್ಸ್‌ಫೋರ್ಸ್ ಅಧ್ಯಕ್ಷೆ ಮತ್ತು CEO ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

US software company will increase its workforce in India from 7,500 to 10,000 by January 2023

2023ರ ಜನವರಿ ಹೊತ್ತಿಗೆ 10 ಸಾವಿರಕ್ಕೆ ಏರಿಕೆ:

"ಸೇಲ್ಸ್‌ಫೋರ್ಸ್ ಇಂಡಿಯಾದ ಹೆಡ್‌ಕೌಂಟ್ ಸುಮಾರು 7,500 ಉದ್ಯೋಗಿಗಳನ್ನು ಹೊಂದಿದ್ದೇವೆ. ನಾವು 2023ರ ಆರ್ಥಿಕ ವರ್ಷದ ಅಂತ್ಯಗೊಳಿಸುವ ಬಗ್ಗೆ ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಮಗೆ 2023ರ ಜನವರಿ ಹೊತ್ತಿಗೆ ನಮ್ಮ ವ್ಯಾಪ್ತಿಯು 10,000 ಗಡಿ ತಲುಪಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಸೇಲ್ಸ್‌ಫೋರ್ಸ್ ಅಧ್ಯಕ್ಷೆ ಮತ್ತು CEO ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ದೇಶದ ಆರು ನಗರಗಳಲ್ಲಿ ಕಚೇರಿ ಹೊಂದಿರುವ ಕಂಪನಿ:

ಭಾರತದ ಆರು ನಗರಗಳಲ್ಲಿ "ಸೇಲ್ಸ್‌ಫೋರ್ಸ್ ಇಂಡಿಯಾ ಕಂಪನಿಯು ತನ್ನ ಕಚೇರಿಯನ್ನು ಹೊಂದಿದೆ. ಪ್ರಸ್ತುತ ಮುಂಬೈ, ಹೈದರಾಬಾದ್, ಬೆಂಗಳೂರು, ಪುಣೆ, ಗುರುಗ್ರಾಮ್ ಮತ್ತು ಜೈಪುರ ನಗರಗಳಲ್ಲಿ ಈ ಸಂಸ್ಥೆಯು ತನ್ನ ಶಾಖೆಗಳನ್ನು ಹೊಂದಿದೆ.

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ವರ್ಕ್ ಫ್ರಾಮ್ ಹೋಮ್ ಮತ್ತು ಫ್ಲೆಕ್ಸಿಬಲ್ ವರ್ಕಿಂಗ್ ವ್ಯವಸ್ಥೆಗೆ ಹೊಂದಿಕೊಂಡಿದ್ದ ಉದ್ಯೋಗಿಗಳು ಇದೀಗ ಮತ್ತೆ ಕಚೇರಿಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಉದ್ಯೋಗಿಗಳು ಕಚೇರಿಗೆ ಆಗಮಿಸುತ್ತಿರುವುದುನ್ನು ನಾವು ನೋಡುತ್ತಿದ್ದೇವೆ. ಹೀಗಿ ಉದ್ಯೋಗಿಗಳು ಕಚೇರಿಗೆ ಮರಳಿದ ಸಂದರ್ಭದಲ್ಲಿ ಸ್ನೇಹ ಮತ್ತು ಸಹಯೋಗದ ಭಾವನೆಯು ಹೆಚ್ಚಾಗಿದೆ," ಎಂಬುದನ್ನು ಸೇಲ್ಸ್‌ಫೋರ್ಸ್ ಅಧ್ಯಕ್ಷೆ ಮತ್ತು CEO ಅರುಂಧತಿ ಭಟ್ಟಾಚಾರ್ಯ ಒತ್ತಿ ಹೇಳಿದ್ದಾರೆ.

English summary
US software company will increase its workforce in India from 7,500 to 10,000 by January 2023. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X