ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಲೋಕಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ನವದೆಹಲಿ, ಆಗಸ್ಟ್ 16: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) ಯು ಕೊರೊನಾವೈರಸ್ ಸಂಕಷ್ಟದ ನಡುವೆಯೂ 2021-22ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದೆ. ಈ ಕುರಿತಂತೆ ಯುಪಿಎಸ್‌ಸಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಪ್ರಿನ್ಸಿಪಾಲ್, ಉಪ ನಿರ್ದೇಶಕ ಹಾಗೂ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಸೆಪ್ಟೆಂಬರ್ 02, 2021ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Union Public Service Commission (UPSC)

ಹುದ್ದೆ ಹೆಸರು: Assistant Keeper, Principal ಇನ್ನಿತರ ಹುದ್ದೆ
ಒಟ್ಟು ಹುದ್ದೆ: 155
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 02, 2021

ಯಾವ ಯಾವ ಇಲಾಖೆಗಳಲ್ಲಿ ಹುದ್ದೆಗಳಿವೆ:
ಉದ್ಯೋಗಿಗಳ ರಾಜ್ಯ ವಿಮೆ ನಿಗಮ, ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ, ಮೀನುಗಾರಿಕೆ ಸಂಶೋಧನಾ ಇಲಾಖೆ, ಪಶು ಸಂಗೋಪಣಾ ಹಾಗೂ ಹೈನುಗಾರಿಕೆ, ಪ್ರಿನ್ಸಿಪಾಲ್ ಅಧಿಕಾರಿ (ಇಂಜಿನಿಯರಿಂಗ್), ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಅಡಿಯಲ್ಲಿರುವ ಶಿಪ್ಪಿಂಗ್ ನಿರ್ದೇಶನಾಲಯದಲ್ಲಿ ಜಂಟಿ ನಿರ್ದೇಶಕ ಜನರಲ್ (ತಾಂತ್ರಿಕ) ಹುದ್ದೆ.

UPSC Recruitment 2021: Applications invited for Assistant Keeper & Others post

ನೇಮಕಾತಿ ಅರ್ಹತೆ:
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ.
ಐಎಂಎ ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿಯ ಹುದ್ದೆಗಳಿಗೆ ಪದವಿ ಪಡೆದಿರಬೇಕು.
ಭಾರತೀಯ ನೌಕಾಪಡೆ ಅಕಾಡೆಮಿಯ ಹುದ್ದೆಗಳಿಗೆಇಂಜಿನಿಯರಿಂಗ್ ಪದವಿ ಪಡೆದಿರಬೇಕು.
ವಾಯುಪಡೆ ಅಕಾಡೆಮಿ ಹುದ್ದೆಗಳಿಗೆ ಆಯ್ಕೆಯಾಗಬಯಸುವ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಹಾಗೂ 10+2ರಲ್ಲಿ ಭೌತಶಾಸ್ತ್ರ ಹಾಗೂ ಗಣಿತ ವಿಷಯ ವ್ಯಾಸಂಗ ಮಾಡಿರತಕ್ಕದ್ದು.

ಸಂಸ್ಕೃತಿ ಇಲಾಖೆಯಡಿಯಲ್ಲಿರುವ ಅಂಥ್ರೋಪಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ ಸಹಾಯಕ ಕೀಪರ್ ಹುದ್ದೆಗಳಿಗೆ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಎಫ್ ಎಸ್ ಸಿ ಅಥವಾ ಮರೇನ್ ಬಯೋಲಜಿಯಲ್ಲಿ ಎಂಎಸ್ಸಿ, ಆಕ್ವಾಕಲ್ಚರ್ ವಿಷಯದಲ್ಲಿ ಎಂಎಸ್ಸಿ, ಮೀನುಗಾರಿಕೆ ವಿಜ್ಞಾನದಲ್ಲಿ ಎಂಎಸ್ಸಿ. ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ 1958 ಸೆಕ್ಷನ್ 78ರ ಅನ್ವಯ ಮರೇನ್ ಇಂಜಿನಿಯರ್ ಅಧಿಕಾರಿ ಶ್ರೇಣಿ 1 ಪ್ರಮಾಣ ಪತ್ರ ಪಡೆದಿರಬೇಕು

ವಯೋಮಿತಿ:
ಕನಿಷ್ಠ ವಯೋಮಿತಿ: 35 ವರ್ಷ
ಗರಿಷ್ಠ ವಯೋಮಿತಿ: 50 ವರ್ಷ
ಐಎಂಎ ಹಾಗೂ ಭಾರತೀಯ ನೌಕಾಪಡೆ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು 02/07/1998 ರಿಂದ 01/07/2003ರ ಅವಧಿಯಲ್ಲಿ ಜನಿಸಿದರು ಅರ್ಹತೆ ಹೊಂದಿರುತ್ತದೆ.
ವಾಯುಪಡೆ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು 02/07/1998 ರಿಂದ 01/07/2002ರ ಅವಧಿಯಲ್ಲಿ ಜನಿಸಿದರು ಅರ್ಹತೆ ಹೊಂದಿರುತ್ತದೆ.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್ ಸಿ, ಎಸ್ಟಿ, ಮಾಜಿ ಯೋಧ ಅಭ್ಯರ್ಥಿಗಳಿಗೆ 5 ವರ್ಷಗಳ ತನಕ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.

ಅರ್ಜಿಶುಲ್ಕ:
ಸಾಮಾನ್ಯ/ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ: 200 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ/ ಮಹಿಳೆ: ಯಾವುದೇ ಶುಲ್ಕವಿಲ್ಲ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ವೇತನ ಆಯೋಗ: 7ನೇ ವೇತನ ಆಯೋಗದ ಪೇ ಮ್ಯಾಟ್ರಿಕ್ಸ್ ಅನ್ವಯ ಲೆವಲ್ 07ರಂತೆ ವೇತನ ಸಿಗಲಿದೆ.

ಪ್ರಮುಖ ದಿನಾಂಕ:
ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13/08/2021
ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03/09/2021

ಯುಪಿಎಸ್‌ಸಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
ಯುಪಿಎಸ್‌ಸಿ ಅಧಿಕೃತ ವೆಬ್ ತಾಣಕ್ಕೆ upsc.gov.in ಭೇಟಿ ನೀಡಿ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್(ORA) ಕ್ಲಿಕ್ ಮಾಡಿ, ಸೂಕ್ತವಾದ ಇಲಾಖೆ ಹಾಗೂ ಹುದ್ದೆಯ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿ ಭರ್ತಿ ಮಾಡಿ.
ಭರ್ತಿ ಮಾಡಿದ ಅರ್ಜಿಯ ಜೊತೆಗೆ ಅಗತ್ಯ ದಾಖಲೆ, ಶುಲ್ಕ ಪಾವತಿಸಿ, ಅರ್ಜಿ ಸಲ್ಲಿಸಿದ ಬಳಿಕ ಪ್ರಿಂಟ್ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಯುಪಿಎಸ್‌ಸಿ ತಾಣಕ್ಕೆ ಭೇಟಿ ನೀಡಿ.

English summary
UPSC Recruitment 2021: Applications Open For 155 Vacancies in Posts of Assistant Keeper, Principal & Others | Eligibility And Salary Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X