ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್‌, ಐಪಿಎಸ್ ಆಕಾಂಕ್ಷಿಗಳಿಗೆ ಶುಭಸುದ್ದಿ: ಯುಪಿಎಸ್‌ಸಿಗೆ ನಡೆಯಲಿದೆ ನೇಮಕಾತಿ

|
Google Oneindia Kannada News

ನವದೆಹಲಿ, ಫೆಬ್ರವರಿ 20: ಕೇಂದ್ರ ನಾಗರಿಕ ಸೇವಾ ಆಯೋಗದಿಂದ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಸುದ್ದಿ ದೊರೆತಿದೆ. 2014ರ ಬಳಿಕ ಇದೇ ಮೊದಲ ಬಾರಿಗೆ ಅತ್ಯಧಿಕ ನೇಮಕಾತಿಗೆ ಯುಪಿಎಸ್‌ಸಿ ಮುಂದಾಗಿದೆ.

ದೇಶದ ಪ್ರತಿಷ್ಠಿತ ನಾಗರಿಕ ಸೇವೆಗಳಾದ ಭಾರತೀಯ ಆಡಳಿತ ಸೇವೆ (ಐಎಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗಳಿಗೆ ನೇಮಕಾತಿ ನಡೆಸಲು ಪರೀಕ್ಷೆಗಳು ನಡೆಯಲಿವೆ.

ಬೆಂಗಳೂರಲ್ಲಿ ಕೆಲಸ, ಫೆ.21ರಂದು ಸಂದರ್ಶನದಲ್ಲಿ ಪಾಲ್ಗೊಳ್ಳಿ ಬೆಂಗಳೂರಲ್ಲಿ ಕೆಲಸ, ಫೆ.21ರಂದು ಸಂದರ್ಶನದಲ್ಲಿ ಪಾಲ್ಗೊಳ್ಳಿ

ಪ್ರಸಕ್ತ ವರ್ಷ 896 ನಾಗರಿಕ ಸೇವಾ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 2014ರಲ್ಲಿ 1,291 ಖಾಲಿ ಹುದ್ದೆಗಳಿಗೆ ಯುಪಿಎಸ್‌ಸಿ ಪರೀಕ್ಷೆ ನಡೆಸಿತ್ತು. 2018ರಲ್ಲಿ 783ಕ್ಕೂ ಅಧಿಕ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಕಳೆದ ಕೆಲವು ವರ್ಷಗಳಿಂದ ಯುಪಿಎಸ್‌ಸಿ 180 ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡಿದೆ.

upsc notification for recruitment ias ips civil services vacancies

ನೇಮಕಾತಿ ಸಂಬಂಧ ಯುಪಿಎಸ್‌ಸಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು 2019ರ ಮಾರ್ಚ್ 18 ಕೊನೆಯ ದಿನವಾಗಿದೆ.

ಇಂಡಿಯನ್ ಆಯಿಲ್ ನಲ್ಲಿ 466 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಇಂಡಿಯನ್ ಆಯಿಲ್ ನಲ್ಲಿ 466 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನರೇಂದ್ರ ಮೋದಿ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯ ಜನರಿಗೆ ಉದ್ಯೋಗದಲ್ಲಿ ಶೇ 10ರ ಮೀಸಲಾತಿ ನೀಡುವ ನಿಯಮವು ಇಲ್ಲಿ ಅನ್ವಯವಾಗಲಿದೆ. ಆನ್‌ಲೈನ್‌ನಲ್ಲಿ ಸವಿವರವಾದ ಅರ್ಜಿಯೊಂದಿಗೆ ಆದಾಯ ಮತ್ತು ಆಸ್ತಿಯ ಪ್ರಮಾಣಪತ್ರಗಳನ್ನು ಆಕಾಂಕ್ಷಿಗಳು ಒದಗಿಸಬೇಕು.

ಸೆಂಟ್ರಲ್‌ವೇರ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆ ಖಾಲಿ ಇದೆ ಸೆಂಟ್ರಲ್‌ವೇರ್ ಹೌಸಿಂಗ್ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆ ಖಾಲಿ ಇದೆ

ಪ್ರತಿವರ್ಷ ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ 10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಕೇಡರ್ ನಿಯಂತ್ರಣ ಪ್ರಾಧಿಕಾರಗಳು ತಮ್ಮ ಅಗತ್ಯಗಳಲ್ಲಿ ಬದಲಾವಣೆಗಳನ್ನು ತಂದರೆ ಖಾಲಿ ಇರುವ ಹುದ್ದೆಗಳಲ್ಲಿಯೂ ಬದಲಾವಣೆಗಳಾಗಬಹುದು ಎಂದು ಅಧಿಸೋಚನೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಸುಮಾರು 1,500 ಐಎಎಸ್‌ ಅಧಿಕಾರಿಗಳ ಕೊರತೆ ಇದೆ. ಅದರಲ್ಲಿಯೂ ಅನೇಕ ಮಹತ್ವದ ಹುದ್ದೆಗಳು ಖಾಲಿ ಇವೆ. ಈ ಬಾರಿ ನೇಮಕಾತಿಯಲ್ಲಿ ಏರಿಕೆ ಮಾಡಿದ್ದರೂ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ ಎನ್ನಲಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Union Public Service Commission (UPSC) notified for the 2019 civil service examination for 896 vacancies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X