ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: UPSC ಹುದ್ದೆಗಳ ಸಂಖ್ಯೆ ಏರಿಕೆ, KPSCಯಲ್ಲಿ ನೇಮಕಾತಿ ಅಂಕ ಇಳಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 19: ಕೇಂದ್ರ ಲೋಕಸೇವಾ ಆಯೋಗ (UPSC) ಈ ವರ್ಷದ ನಾಗರಿಕ ಸೇವೆಗಳ ಹುದ್ದೆಗಳ ಸಂಖ್ಯೆಯನ್ನು 1,011ಕ್ಕೆ ಹೆಚ್ಚಿಸಿದ್ದು, ಆರು ವರ್ಷಗಳ ಬಳಿಕ ಯುಪಿಎಸ್‌ಸಿ ನೇಮಕಾತಿ ಹುದ್ದೆಗಳ ಸಂಖ್ಯೆ ಸಾವಿರದ ಗಡಿ ದಾಟಿದೆ.

ಈ ಕುರಿತಂತೆ ಯುಪಿಎಸ್‌ಸಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, 861 ಅಧಿಸೂಚಿತ ಹುದ್ದೆಗಳ ಸಂಖ್ಯೆಯನ್ನು ಇದೀಗ 1,011ಕ್ಕೆ ಹೆಚ್ಚಿಸಲಾಗಿದೆ.

ಸಹಾಯಕ ಪ್ರಾಧ್ಯಾಪಕರ ಹುದ್ದೆ: ಮಾರ್ಚ್ 12ರಿಂದ ಪರೀಕ್ಷೆಸಹಾಯಕ ಪ್ರಾಧ್ಯಾಪಕರ ಹುದ್ದೆ: ಮಾರ್ಚ್ 12ರಿಂದ ಪರೀಕ್ಷೆ

ನಾಗರಿಕ ಸೇವೆಗಳ ಪರೀಕ್ಷೆ-2022ರ ಮೂಲಕ ಭಾರತೀಯ ರೈಲ್ವೆ ನಿರ್ವಹಣಾ ಸೇವೆ, ಗ್ರೂಪ್ 'ಎ'ನಲ್ಲಿ 150 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಯುಪಿಎಸ್‌ಸಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

UPSC Civil Services Vacancy Increased, KPSC viva voce marks Decreased

"ದಿನಾಂಕ ಫೆಬ್ರವರಿ 02, 2022ರ ಪರೀಕ್ಷಾ ನೋಟಿಸ್‌ನಲ್ಲಿ ಸೂಚಿಸಿದಂತೆ ಖಾಲಿ ಹುದ್ದೆಗಳ ತಾತ್ಕಾಲಿಕ ಸಂಖ್ಯೆ ಅಂದರೆ 861 ಅನ್ನು ಇದೀಗ 1011ಕ್ಕೆ ಮಾರ್ಪಡಿಸಲಾಗಿದೆ" ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. ಆರು ವರ್ಷಗಳ ನಂತರ ಯುಪಿಎಸ್ಸಿಯ ನೇಮಕಾತಿ ಹುದ್ದೆಗಳ ಸಂಖ್ಯೆ 1,000 ಗಡಿ ದಾಟಿವೆ.

ನಾಗರಿಕ ಸೇವಾ ಪರೀಕ್ಷೆಯ ಮೂಲಕ ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಐಆರ್ಎಂಎಸ್), ಗ್ರೂಪ್ 'ಎ' ಅಧಿಕಾರಿಗಳ ನೇಮಕಾತಿಗೆ ಹೆಚ್ಚುವರಿ 150 ಹುದ್ದೆಗಳನ್ನು ಸೇರಿಸಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಇದಕ್ಕೆ ಅನುಗುಣವಾಗಿ, ಸರ್ಕಾರವು (ಸಿಬ್ಬಂದಿ ಮತ್ತು ತರಬೇತಿ ಇಲಾಖೆ) ನಾಗರಿಕ ಸೇವೆಗಳ ಪರೀಕ್ಷೆ-2022ರ ಮೂಲಕ ನೇಮಕಾತಿಗಾಗಿ ಸೇವೆಗಳ ಪಟ್ಟಿಯಲ್ಲಿ ಐಆರ್ಎಂಎಸ್, ಗ್ರೂಪ್ 'ಎ' ಅನ್ನು ಸೇರಿಸುವ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ; ಆರ್. ಅಶೋಕ14 ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ; ಆರ್. ಅಶೋಕ

ಕೇಂದ್ರ ಸರ್ಕಾರವು ಈ ಹಿಂದೆ 2019ರಲ್ಲಿ ನಾಗರಿಕ ಸೇವೆಗಳಲ್ಲಿ ಐಆರ್ಎಂಎಸ್ ಸೇರ್ಪಡೆಯನ್ನು ನಿಲ್ಲಿಸಿತ್ತು. ಎಂಜಿನಿಯರಿಂಗ್ ಸೇವೆಗಳ ಪರೀಕ್ಷೆಯ ಮೂಲಕ ಈ ಪರೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ.

UPSC Civil Services Vacancy Increased, KPSC viva voce marks Decreased

ಈ ಹಿಂದೆ ಡಿಸೆಂಬರ್ 2019ರಲ್ಲಿ, ಕೇಂದ್ರ ರೈಲ್ವೆ ಸಚಿವಾಲಯವು ಭಾರತೀಯ ರೈಲ್ವೆ ನಿರ್ವಹಣಾ ಸೇವೆಗಾಗಿ (ಐಆರ್ಎಂಎಸ್) ಎಲ್ಲಾ ಹಂತಗಳಲ್ಲಿ ಭಾರತೀಯ ರೈಲ್ವೆಯ ಎಂಟು ಸೇವೆಗಳನ್ನು ಏಕೀಕರಣಗೊಳಿಸುವುದಾಗಿ ಘೋಷಿಸಿತ್ತು.

ಕೆಪಿಎಸ್‌ಸಿ ನೇಮಕಾತಿ ಅಂಕ ಇಳಿಕೆ
ಕರ್ನಾಟಕ ಲೋಕಸೇವಾ ಆಯೋಗದ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿನ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಗೆಜೆಟೆಡ್ ಪ್ರೊಬೇಷನರೀಸ್ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) (ತಿದ್ದುಪಡಿ) ನಿಯಮ 2022ಕ್ಕೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯಂತೆ ಗ್ರೂಪ್ "ಎ' ಮತ್ತು "ಬಿ' ಹುದ್ದೆಗಳ ನೇಮಕಾತಿ ವಿಧಾನ ಬದಲಾವಣೆ ಆಗಿದ್ದು, ನೇಮಕಾತಿ ಅಂಕಗಳನ್ನು ಇಳಿಕೆ ಮಾಡಲಾಗಿದೆ.

ಈ ಸಂಬಂಧ ಶುಕ್ರವಾರದಂದು ಅಧಿವೇಶನದಲ್ಲಿ ಸರ್ಕಾರದಿಂದ ಕೆಪಿಎಸ್ಸಿ ತಿದ್ದುಪಡಿ ಮಸೂದೆ ಮಂಡನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ತಿದ್ದುಪಡಿ ಮಸೂದೆಯಂತೆ ಮುಖ್ಯ ಪರೀಕ್ಷೆಯ ಎರಡು ಐಚ್ಛಿಕ ವಿಷಯಗಳನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಪೂರ್ವಭಾವಿ ಪರೀಕ್ಷೆಯ 400 ಅಂಕಗಳ ಪತ್ರಿಕೆ ಮುಂದುವರೆಸಿದೆ.

ಎರಡು ಐಚ್ಛಿಕ ಪರೀಕ್ಷೆ ಕೈ ಬಿಟ್ಟಿರುವ ಕಾರಣ, ಒಟ್ಟು ಅಂಕಗಳನ್ನು 1750ರಿಂದ 1250ಕ್ಕೆ ಇಳಿಕೆ ಆಗಿದೆ. ಇದಲ್ಲದೇ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 50ಕ್ಕೆ ಇಳಿಸಲಾಗಿತ್ತು. ಇದೀಗ ಈ ಅಂಕಗಳನ್ನು 50 ರಿಂದ 25ಕ್ಕೆ ಇಳಿಸಲಾಗಿದೆ. ಇನ್ಮುಂದೆ 25 ಅಂಕಗಳಿಗೆ ಮಾತ್ರವೇ ವ್ಯಕ್ತಿತ್ವ ಸಂದರ್ಶನ ನಡೆಯಲಿದೆ.

English summary
The Union Public Service Commission (UPSC) has increased the number of civil services vacancies to 1011 for this year. Karnataka Cabinet approved reduction of the viva voce marks from 50 to 25 in the Karnataka Administrative Service (KAS) final interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X