ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ; ನಿರುದ್ಯೋಗಿಗಳಿಗೆ ಉಚಿತ ತರಬೇತಿ

|
Google Oneindia Kannada News

ದಾವಣಗೆರೆ, ಜುಲೈ 31; ಗ್ರಾಮಾಂತರ ಕೈಗಾರಿಕಾ ವಿಭಾಗ, ದಾವಣಗೆರೆ ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರದ ವತಿಯಿಂದ 2022-23ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಉಚಿತ ತರಬೇತಿ ಆಯೋಜನೆ ಮಾಡಲಾಗಿದೆ.

ಮೊಬೈಲ್ ರಿಪೇರಿ, ಮೋಟಾರ್ ರಿವೈಂಡಿಂಗ್, ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ ವಿಷಯಗಳ ತರಬೇತಿ ನೀಡಲಾಗುತ್ತದೆ. ದಾವಣಗೆರೆ ತಾಲ್ಲೂಕಿನ ತೋಳಹುಣಸೆ ಕೆನರಾ ಬ್ಯಾಂಕ್‍ನ ಆರ್-ಸೆಟಿ ತರಬೇತಿ ಸಂಸ್ಥೆ ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿಯನ್ನು ಆಯೋಜನೆ ಮಾಡಲಾಗಿದೆ.

 ಇನ್ಫೋಸಿಸ್ ಸಂಸ್ಥೆಯಲ್ಲಿ 50 ಸಾವಿರ ಹೊಸ ನೇಮಕಾತಿ! ಇನ್ಫೋಸಿಸ್ ಸಂಸ್ಥೆಯಲ್ಲಿ 50 ಸಾವಿರ ಹೊಸ ನೇಮಕಾತಿ!

ತರಬೇತಿಯ ನಂತರ ಪ್ರತಿ ಅಭ್ಯರ್ಥಿಗೆ ರೂ. 5,000 ಮೊತ್ತದ ಉಚಿತ ಉಪಕರಣಗಳ ಕಿಟ್‍ ಅನ್ನು ನೀಡಲಾಗುವುದು. 18 ರಿಂದ 45 ವರ್ಷದ ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.

ಕೊಪ್ಪಳ; ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಕೊಪ್ಪಳ; ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

Training For Unemployed Youth At Davanagere

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರ್‍ಸೆಟಿ ತರಬೇತಿ ಸಂಸ್ಥೆ ಅಥವಾ ಉಪ ನಿರ್ದೇಶಕರು (ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿಸಿ, ಕಚೇರಿ ಪಕ್ಕ, ದಾವಣಗೆರೆ ಇಲ್ಲಿ ಸಂಪರ್ಕಿಸಬಹುದು. ಈ ತರಬೇತಿಯು 30 ದಿನಗಳದ್ದಾಗಿದೆ.

ಜಲಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ ಜಲಸಂಪನ್ಮೂಲ ಇಲಾಖೆಯಲ್ಲಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448929717, 9845691958, 7019980484, 9964111314ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನ; ಹೊಸಪೇಟೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (ಜಿ.ಟಿ ಮತ್ತು ಟಿ.ಸಿ) ಮತ್ತು ಟೊಯೋಟಾ ಕಾರು ಉತ್ಪಾದನಾ ಕಂಪನಿಯ ಸಹಯೋಗದೊಂದಿಗೆ 2022-23ನೇ ಸಾಲಿನಲ್ಲಿ ಎ.ಎಸ್.ಡಿ.ಸಿ ಪ್ರಮಾಣೀಕರದ ಆಟೋಮೊಬೈಲ್ ವಲಯಗಳ ಪ್ರಾಯೋಗಿಕ ಆಧಾರಿತ ತರಬೇತಿ ಕೋರ್ಸುಗಳನ್ನು ಜಿಟಿಟಿಸಿ ಎಲ್ಲ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿದೆ.

ಮೊದಲ 2 ರಿಂದ 3 ತಿಂಗಳು ಬೇಸಿಕ್ ತರಬೇತಿಯನ್ನು ಜಿಟಿಟಿಸಿ ಕೇಂದ್ರಗಳಲ್ಲಿನ ನಂತರ 22 ತಿಂಗಳು ಟೊಯೋಟಾ ಕಾರು ಉತ್ಪಾದನಾ ಕಂಪನಿಯ ಗುರುಕುಲ ಸೌಲಭ್ಯದಲ್ಲಿ ಮತ್ತು ಉತ್ಪಾದನಾ ಘಟಕದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ತರಬೇತುದಾರರಿಂದ ಸ್ಟೈಪಂಡ್ ಸಹಿತ ಆಟೋಮೊಬೈಲ್‍ನ ಸೆಕ್ಟರ್‌ ತರಬೇತಿ ನೀಡಲಾಗುತ್ತಿದ್ದು, ಅಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ: ಐಟಿಐ ಪಾಸ್/ ಫೇಲ್, ಡಿಪ್ಲೋಮಾ ಪಾಸ್/ ಫೇಲ್, ಪಿಯುಸಿ ಪಾಸ್/ ಫೇಲ್, ಅಥವಾ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು ಹಾಗೂ ಅವರ ವಯಸ್ಸು 18ರಿಂದ 23ವರ್ಷದೊಳಗಿರಬೇಕು.

ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಜಿಟಿಟಿಸಿ (ಆಟೋಮೊಬೈಲ್ ಸ್ಕಿಲ್ ಡೆವಲಪ್‍ಮೆಂಟ್ ಕೌನ್ಸಿಲ್)ವತಿಯಿಂದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಸೌಲಭ್ಯಗಳು: ಟಿಕೆಮ್ ವತಿಯಿಂದ ಮಾಸಿಕ ಸ್ಟೈಪಂಟ್ ರೂ.12255 ಸೇರಿದಂತೆ ಪೌಷ್ಟಿಕ ಆಹಾರವುಳ್ಳ ಉಚಿತ ಕ್ಯಾಂಟಿನ್ ಸೌಲಭ್ಯ, ಉಚಿತ ಸಮವಸ್ತ್ರ ಹಾಗೂ ಸಾರಿಗೆ ಸೌಲಭ್ಯ, ಸುರಕ್ಷಿತ ಮತ್ತು ಆರೋಗ್ಯಕರ ತರಬೇತಿ ಪರಿಸರ ಹೊಂದಿರುತ್ತದೆ.

ಆಸಕ್ತ ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ/ ಐಟಿಐ/ ಪಿಯುಸಿ ಅಂಕಪಟ್ಟಿಗಳು ಮತ್ತು ಆಧಾರ್ ಕಾರ್ಡ್‌ ಸೇರಿದಂತೆ ಮೂಲ ಪ್ರತಿಗಳು ಹಾಗೂ ಇತ್ತಿಚಿನ ಒಂದು ಪಾಸ್ ಪೋರ್ಟ್‌ ಅಳತೆಯ ಫೋಟೋ ತೆಗೆದುಕೊಂಡು ಆ.12ರಂದು ಮರಿಯಮ್ಮನಹಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಲಿರುವ ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಮರಿಯಮ್ಮನಹಳ್ಳಿಯ ಜಿಟಿಟಿಸಿಯ ಪ್ರಾಂಶುಪಾಲರನ್ನು ಭೇಟಿ ಮಾಡಬಹುದು. ಮೊಬೈಲ್ ಸಂಖ್ಯೆ 8073979750 ಹಾಗೂ ಜಿಟಿಟಿಸಿಯ ಕೌಶಲ್ಯ ಅಭಿವೃದ್ಧಿ ವಿಭಾಗ ಮುಖ್ಯಸ್ಥರು ಸಂಖ್ಯೆ 9902397658.

English summary
Training organized in Davanagere for unemployed youth. Interested candidates can submit applications.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X