ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಡವಾಗಿ ಬಂದಿದ್ದಕ್ಕೆ 7 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಯನ್ನು ವಜಾಮಾಡಿದ ಸಂಸ್ಥೆ!

|
Google Oneindia Kannada News

ಕೆಲವು ಕಂಪನಿಗಳೇ ಹಾಗೇ, ಉದ್ಯೋಗಿ ಎಷ್ಟು ಪ್ರತಿಭಾವಂತ ಎನ್ನುವದರ ಜೊತೆಗೆ ಆತನ ಶಿಸ್ತು ಕೂಡ ಕಂಪನಿಗಳಿಗೆ ಮುಖ್ಯವಾಗಿರುತ್ತದೆ. ಕೆಲಸ ಮಾಡಲು ತಡವಾಗಿ ಬರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದನ್ನು ಕೆಲವು ಕಂಪನಿಗಳಲ್ಲಿ ನೋಡಬಹುದಾಗಿದೆ. ಆದರೆ ಇಲ್ಲೊಂದು ಸಂಸ್ಥೆ ತಡವಾಗಿ ಬಂದ ಉದ್ಯೋಗಿಯನ್ನು ಕೆಲಸದಿಂದಲೇ ವಜಾ ಮಾಡಿದೆ.

ರೆಡ್ಡಿಟ್‌ನಲ್ಲಿ ಈ ಕುರಿತು ಹಂಚಿಕೊಂಡಿರುವ ಪೋಸ್ಟ್‌ ಇದೀಗ ವೈರಲ್ ಆಗಿದೆ. ಕಳೆದ ಏಳು ವರ್ಷಗಳಿಂದ ಆತ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆತನ ಏಳು ವರ್ಷದ ಸೇವಾವಧಿಯಲ್ಲಿ ಒಮ್ಮೆಯೂ ತಡವಾಗಿ ಬಂದಿರಲಿಲ್ಲ ಎನ್ನಲಾಗಿದೆ. ಆದರೆ ಮೊದಲ ಬಾರಿಗೆ 20 ನಿಮಿಷ ತಡವಾಗಿ ಬಂದಿದ್ದಕ್ಕೆ ಕೆಲಸವನ್ನೇ ಕಳೆದುಕೊಂಡಿದ್ದಾನೆ.

ಈ ಘಟನೆಯನ್ನು ರೆಡ್ಡಿಟ್‌ನಲ್ಲಿ ಅವರ ಸಹೋದ್ಯೋಗಿಯೊಬ್ಬರು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "7 ವರ್ಷಗಳಲ್ಲಿ ಎಂದಿಗೂ ತಡವಾಗದ ಸಹೋದ್ಯೋಗಿ, ಮೊದಲ ಬಾರಿಗೆ ತಡವಾಗಿ ಬಂದಿದ್ದಕ್ಕೆ ವಜಾಗೊಳಿಸಲಾಗಿದೆ" ಎಂದು ಹೇಳಿದ್ದಾರೆ.

The Company Fired The Employee For Being Late Who Had Been Working For 7 Years

ಏಳು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದರೂ ಒಂದು ದಿನ ತಡವಾಗಿ ಬಂದಿದ್ದಕ್ಕೆ ಉದ್ಯೋಗಿಯನ್ನು ವಜಾಗೊಳಿಸಿದ ಕಂಪವಿ ವಿರುದ್ಧ ನೌಕರರು ತಿರುಗಿಬಿದ್ದಿದ್ದಾರೆ.

ಪ್ರತಿಭಟನೆ ಮಾಡಲು ಮುಂದಾದ ಉದ್ಯೋಗಿಗಳು

ನೌಕರನನ್ನು ವಜಾಗೊಳಿಸಿದ ಕಂಪನಿಯ ನಿರ್ಧಾರವನ್ನು ವಿರೋಧಿಸಿರುವ ಸಹೋದ್ಯೋಗಿಗಳು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ವಜಾಗೊಳಿಸಿದ ನೌಕರನನ್ನು ಮರು ನೇಮಕ ಮಾಡಿಕೊಳ್ಳುವವರೆಗೆ ಎಲ್ಲಾ ಉದ್ಯೋಗಿಗಳು ಕಚೇರಿಗೆ ತಡವಾಗಿ ಬರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಕಂಪನಿಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ.

"ನಾಳೆ, ನಾನು ಮತ್ತು ನನ್ನ ಎಲ್ಲಾ ಸಹೋದ್ಯೋಗಿಗಳು ತಡವಾಗಿ ಬರುತ್ತೇವೆ ಮತ್ತು ಅವರು ಅವನನ್ನು ಪುನಃ ನೇಮಿಸಿಕೊಳ್ಳುವವರೆಗೆ ತಡವಾಗಿ ಬರುತ್ತೇವೆ" ಎಂದು ಸಹೋದ್ಯೋಗಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

The Company Fired The Employee For Being Late Who Had Been Working For 7 Years

ತಡವಾಗಿ ಬಂದಿದ್ದಕ್ಕೆ ಕೋಪಗೊಂಡ ಮ್ಯಾನೇಜರ್

ಅದರಂತೆ ಮರುದಿನ ಎಲ್ಲಾ ಉದ್ಯೋಗಿಗಳು ತಡವಾಗಿ ಬಂದಿದ್ದಾರೆ. "ನಾನು 22 ನಿಮಿಷ ತಡವಾಗಿ ಬಂದೆ ನಮ್ಮ ಮ್ಯಾನೇಜರ್ ಸಿಟ್ಟುಗೊಂಡಿದ್ದರು. ಎಲ್ಲರೂ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದೀರಾ, ಅಥವಾ ಯಾವುದಾದರೂ ಕೆಲಸದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರು" ಎಂದು ಬರೆದುಕೊಂಡಿದ್ದಾರೆ.

ಸಹೋದ್ಯೋಗಿಗಳ ಪ್ರತಿಭಟನೆಗೆ ಮಣಿದಿರುವ ಮ್ಯಾನೇಜರ್ ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಯನ್ನು ವಾಪಸ್ ಕೆಲಸಕ್ಕೆ ಕರೆತರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಮ್ಯಾನೇಜರ್ ಉದ್ಯೋಗಿಯನ್ನು ಸಂಪರ್ಕಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಆದರೆ ಆ ಕಂಪನಿ ಯಾವುದು, ಘಟನೆ ಎಲ್ಲಿ ನಡೆದಿದೆ ಎನ್ನುವುದು ತಿಳಿದುಬಂದಿಲ್ಲ.

English summary
The Company Fired The Employee For Being Late Who Had Been Working For 7 Years. The man had been working in the company for over seven years and it was for the first time that he was late to work, according to a Reddit post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X