ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ; ಶಿಕ್ಷಕರ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ

|
Google Oneindia Kannada News

ಬೆಳಗಾವಿ, ಮಾರ್ಚ್ 08; ಕೇಂದ್ರಿಯ ವಿದ್ಯಾಲಯ ಬೆಳಗಾವಿ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮಾರ್ಚ್ 14, 15 ಮತ್ತು 16ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಬೆಳಗಾವಿಯ ಮಿಲಿಟರಿ ಹಾಸ್ಪಿಟಲ್ ಕ್ಯಾಂಪ್ ಬಳಿ ಇರುವ ಕೇಂದ್ರಿಯ ವಿದ್ಯಾಲಯ ಗುತ್ತಿಗೆ ಆಧಾರದ ಮೇಲೆ ವಿವಿಧ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆದಿದೆ. ಆಸಕ್ತರು ಲಿಖಿತ ಪರೀಕ್ಷೆ, ನೇರ ಸಂದರ್ಶನಕ್ಕೆ ಅಗತ್ಯ ದಾಖಲಾಲಾತಿಗಳ ಜೊತೆ ಹಾಜರಾಗಬೇಕಿದೆ.

15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಒಪ್ಪಿಗೆ

ಮಾರ್ಚ್ 10ರಂದು ಮಧ್ಯಾಹ್ನ 12.30 ರಿಂದ 1.30ರ ತನಕ ಪಿಜಿಟಿ ಕಾಮರ್ಸ್, ಫಿಸಿಕ್ಸ್, ಕೆಮಿಸ್ಟ್ರಿ, ಗಣಿತ, ಇಂಗ್ಲಿಶ್, ಬಯೋಲಜಿ, ಎಕಾನಾಮಿಕ್ಸ್, ಹಿಂದಿ, ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 27,500 ರೂ. ಆಗಿದೆ.

ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ ಎನ್‌ಎಚ್‌ಎಐ ನೇಮಕಾತಿ; 15 ಜನರಲ್ ಮ್ಯಾನೇಜರ್‌ ಹುದ್ದೆಗೆ ಅರ್ಜಿ ಹಾಕಿ

Teachers Recruitment At Kendriya Vidyalaya Belagavi

ಮಾರ್ಚ್ 10ರಂದು 10.30 ರಿಂದ 12 ಗಂಟೆಯ ತನಕ ಟಿಜಿಟಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಇಂಗ್ಲಿಶ್, ಹಿಂದಿ ಸಂಸ್ಕೃತ ವಿಷಯಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 26,250 ರೂ. ನಿಗದಿ ಮಾಡಲಾಗಿದೆ.

1095 ಹುದ್ದೆಗೆ ಅರ್ಜಿ ಕರೆದ ಐಜಿಐ ಏವಿಯೇಷನ್ 1095 ಹುದ್ದೆಗೆ ಅರ್ಜಿ ಕರೆದ ಐಜಿಐ ಏವಿಯೇಷನ್

ಮಾರ್ಚ್ 10ರಂದು ಬೆಳಗ್ಗೆ 8.30 ರಿಂದ 10 ಗಂಟೆಯ ತನಕ ಪ್ರೈಮರಿ ಟೀಚರ್ (ವೇತನ 21,250 ರೂ.), ಕಂಪ್ಯೂಟರ್ ಇನ್‌ಸ್ಟಕ್ಟ್ರರ್ (ಸೆಕೆಂಡರಿ), ಕಂಪ್ಯೂಟರ್ ಇನ್‌ಸ್ಟಕ್ಟ್ರರ್ (ಪ್ರೈಮರಿ) ವೇತನ 21,250. ಕನ್ನಡ ಭಾಷೆ ಇನ್‌ಸ್ಟಕ್ಟ್ರರ್ ಸಿಟಿಇಟಿ ಅಥವ ಟಿಇಟಿ ಕ್ವಾಲಿಫೈಡ್. ವೇತನ ಶ್ರೇಣಿ 18,750 ರೂ.ಗಳು.

ಕೌನ್‌ಸೋಲರ್, ಕ್ರೀಡಾ ತರಬೇತುದಾರ ಪುರುಷ ಮತ್ತು ಮಹಿಳೆ, ಯೋಗ ಟೀಚರ್, ಡ್ಯಾನ್ಸ್ ಟೀಚರ್, ಮ್ಯುಸಿಕ್ ಟೀಚರ್, ನರ್ಸ್, ಡೇಟಾ ಎಂಟ್ರಿ ಆಪರೇಟರ್ (ಟ್ಯಾಲಿ ಜ್ಞಾನ ಕಡ್ಡಾಯ) ಹುದ್ದೆಗಳಿಗೆ 16/3/2022ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯ ತನಕ ನೇರ ಸಂದರ್ಶನ ನಡೆಯಲಿದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ http://no2belagavicantt.ac.in ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ತರಬೇತಿಗೆ ಅರ್ಜಿ ಆಹ್ವಾನ; ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ಆಸಕ್ತ ಅರ್ಹ ರೈತ ಮಕ್ಕಳಿಗೆ ಕೊಪ್ಪಳ ತಾಲೂಕಿನ ಮುನಿರಾಬಾದಿನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆಯಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.

ಸಾಮಾನ್ಯ ಅಭ್ಯರ್ಥಿ 17 (ಮಹಿಳೆ-07), ಪರಿಶಿಷ್ಠ ಜಾತಿ 3 ಗಳಂತೆ ಒಟ್ಟು 20 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ ಇತರರಿಗೆ ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ಕನ್ನಡ ವಿಷಯದೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಚೆನ್ನಾಗಿ ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು.

ಈ ತರಬೇತಿಯು ರೈತರ ಮಕ್ಕಳಿಗಾಗಿರುವುದರಿಂದ ಅಭ್ಯರ್ಥಿಯ ತಂದೆ/ ತಾಯಿ ಅಥವಾ ಪೋಷಕರು (ತಂದೆ/ ತಾಯಿ ಇಲ್ಲದ ಪಕ್ಷದಲ್ಲಿ) ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು.

ಸಾಮಾನ್ಯ ಅಭ್ಯರ್ಥಿಗಳು 30 ರೂ., ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು 15 ರೂ. ಗಳ ಶುಲ್ಕವನ್ನು ಪೋಸ್ಟಲ್ ಆರ್ಡರ್ ಅಥವಾ ಡಿಮ್ಯಾಂಡ್ ಡ್ರಾಫ್ಟ್‌ ಮೂಲಕ ತೋಟಗಾರಿಕೆ ಉಪ ನಿರ್ದೇಶಕರು (ಜಿ. ಪಂ) ಕೊಪ್ಪಳ ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.

ಮಾರ್ಚ್ 15ರಿಂದ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅರ್ಜಿಗಳನ್ನು ಉಪನಿರ್ದೇಶಕರು (ಜಿ.ಪಂ) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ) ಕೊಪ್ಪಳ ರವರ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಏಪ್ರಿಲ್ 16 ರ ಸಂಜೆ 5 ಗಂಟೆಯೊಳಗೆ ಕಚೇರಿಗೆ ಸಲ್ಲಿಸಬೇಕು.

ಅರ್ಜಿಗಳನ್ನು ಇಲಾಖಾ ವೆಬ್‌ಸೈಟ್ www.horticulture.kar.nic.in ನಲ್ಲಿಯೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಏಪ್ರಿಲ್ 18 ರಂದು ಬೆಳಗ್ಗೆ 11 ಗಂಟೆಗೆ ತೋಟಗಾರಿಕೆ ಉಪ ನಿರ್ದೇಶಕರು, (ಜಿ.ಪಂ) ಕೊಪ್ಪಳ ಕಛೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರವನ್ನು ಕಳುಹಿಸಲಾಗುವುದಿಲ್ಲ.

English summary
Kendriya Vidyalaya Belagavi invited applications for the teachers post. Candidates can write written test and attend walk in interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X