ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17; ಕರ್ನಾಟಕದಲ್ಲಿನ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ & ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಹುದ್ದೆ, ಖಾಲಿ ಇರುವ ಹುದ್ದೆ, ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಸಚಿವರು ವಿಧಾನ ಪರಿಷತ್ತಿನಲ್ಲಿ ಉತ್ತರ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಉತ್ತರ ಕೊಟ್ಟಿದ್ದಾರೆ. ವಿಧಾನಮಂಡಲದ ಅಧಿವೇಶನದಲ್ಲಿ ಶಿಕ್ಷಣ ಸಚಿವರು ಈ ಕುರಿತು ಲಿಖಿತ ಉತ್ತರ ನೀಡಿದ್ದಾರೆ.

ಶಿಕ್ಷಕರ ದಿನಾಚರಣೆ ವಿಶೇಷ; ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿದ ಶಿಕ್ಷಕ ಶಿಕ್ಷಕರ ದಿನಾಚರಣೆ ವಿಶೇಷ; ಸರ್ಕಾರಿ ಶಾಲೆ ಅಭಿವೃದ್ಧಿಗೊಳಿಸಿದ ಶಿಕ್ಷಕ

ಭರ್ತಿಯಾದ ಹುದ್ದೆಗಳೆಷ್ಟು?, ಖಾಲಿ ಇರುವ ಹುದ್ದೆಗಳೆಷ್ಟು? ಹಾಗೂ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು? ಎಂಬುದರ ಕುರಿತು ಸಚಿವರು ವಿವರಣೆ ನೀಡಿದ್ದಾರೆ.

Teacher And Lecturer Recruitment In Karnataka Minister Written Reply

ಕೆ. ಟಿ. ಶ್ರೀಕಂಠೇಗೌಡರು ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ ಒಟ್ಟು ಶಿಕ್ಷಕರು, ಉಪನ್ಯಾಸಕರ ಹುದ್ದೆಗಳು ಎಷ್ಟು?. ಇದರಲ್ಲಿ ಭರ್ತಿಯಾದ ಹುದ್ದೆಗಳು ಎಷ್ಟು, ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ಪ್ರಶ್ನಿಸಿದ್ದರು.

ಕೊಡಗು: ನೆಟ್‌ವರ್ಕ್‌ಗಾಗಿ ಅಟ್ಟಣಿಗೆ ಕ್ಲಾಸ್‌ ರೂಂ ನಿರ್ಮಿಸಿದ ಶಿಕ್ಷಕ ಕೊಡಗು: ನೆಟ್‌ವರ್ಕ್‌ಗಾಗಿ ಅಟ್ಟಣಿಗೆ ಕ್ಲಾಸ್‌ ರೂಂ ನಿರ್ಮಿಸಿದ ಶಿಕ್ಷಕ

ಈ ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ? ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗಳಿಗೆ ಸಚಿವರು ಉತ್ತರ ಕೊಟ್ಟಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 3503 ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ನಿರ್ದೇಶಕರಿಂದ ಪ್ರಸ್ತಾವನೆ ಪಡೆದು ಪರಿಶೀಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಎತ್ತಿನಗಾಡಿ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ ಎತ್ತಿನಗಾಡಿ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ರೇಷನ್ ವಿತರಿಸಿದ ಶಿಕ್ಷಕ

ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಲ್ಲಿ ಮಂಜೂರಾದ, ಖಾಲಿ ಇರುವ ಒಟ್ಟು ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ವಿವರಗಳು.

ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಒಟ್ಟು ವೃಂದ ಬಲ 1,88,540. ಶಾಲೆಗಳಲ್ಲಿನ ಕಾರ್ಯನಿರತ ಹುದ್ದೆಗಳ ಸಂಖ್ಯೆ 1,62,727 ಹಾಗೂ ಖಾಲಿ ಇರುವ ಹುದ್ದೆಗಳ ಸಂಖ್ಯೆ 25,813.

ಸರ್ಕಾರಿ ಪ್ರೌಢ ಶಾಲೆಗಳಿಗೆ ಮಂಜೂರಾದ ಒಟ್ಟು ವೃಂದ ಬಲ 52,630. ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರತ ಹುದ್ದೆಗಳು 36,453. ಖಾಲಿ ಇರುವ ಹುದ್ದೆಗಳು 15,907.

ಇನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮಂಜೂರಾದ ಒಟ್ಟು ವೃಂದಬಲ 12,857. ಕಾಲೇಜಗಳಲ್ಲಿ ಕಾರ್ಯನಿರತ ಹುದ್ದೆಗಳು 9,354. ಖಾಲಿ ಇರುವ ಹುದ್ದೆಗಳು 3,503.

ಖಾಲಿ ಹುದ್ದೆಗಳ ಭರ್ತಿ; ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 25,813 ಹುದ್ದೆಗಳಲ್ಲಿ ಪ್ರಸ್ತುತ ಸಾಲಿನಲ್ಲಿ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡುವ ಸಂಬಂಧ ಪರಿಶೀಲನೆಯಲ್ಲಿದೆ.

ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಒಟ್ಟು 5,500 ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ.

ಇನ್ನು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 3503 ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ನಿರ್ದೇಶಕರಿಂದ ಪ್ರಸ್ತಾವನೆ ಪಡೆದು ಪರಿಶೀಲನೆ ನಡೆಸಲಾಗುತ್ತದೆ.

ವೇತನ ತಾರತಮ್ಯ ನಿವಾರಣೆಗೆ ಸಭೆ; ಪ್ರಾಥಮಿಕ ಶಾಲಾ ಶಿಕ್ಷಕರಿಂದ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಮತ್ತು ಪ್ರೌಢ ಶಾಲಾ ಹಂತದಿಂದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ಹೊಂದಿದವರಿಗೆ ಕಾಲಮಿತಿ ವೇತನ ನೀಡಲು ಹಲವಾರು ತೊಡಕುಗಳಿವೆ.

"ವೇತನ ತಾರತಮ್ಯ ನಿವಾರಣೆಗೆ ಇರುವ ತೊಡಕುಗಳನ್ನು ಪರಿಹರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಆಯೋಜಿಸಲಾಗುತ್ತದೆ" ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ ಹೇಳಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಾಗ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್, "ಬಡ್ತಿ ಪಡೆದಿರುವರಿಗೆ ಸಹಜವಾಗಿಯೇ ವೇತನ ಮತ್ತು ಭತ್ಯೆಗಳು ಹೆಚ್ಚಾಗಬೇಕು. ಶಿಕ್ಷಕರು ಮತ್ತು ಉಪನ್ಯಾಸಕರ ವಿಚಾರದಲ್ಲಿ ಇದು ತದ್ವಿರುದ್ಧ. ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಬಡ್ತಿ ಪಡೆದಿರುವವರಿಗೆ ವೇತನ ನಿಗದಿ ಮಾಡಲು ಇರುವ ನಿಯಮಗಳೇ ಅವೈಜ್ಞಾನಿಕ" ಎಂದು ಹೇಳಿದರು.

Recommended Video

IPL ತಂಡಗಳ ಕೋಚ್ ಇವ್ರೆ ನೋಡಿ | Oneindia Kannada

English summary
Karnataka minister of primary & secondary education B. C. Nagesh written reply for the question on teacher and lecturer recruitment in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X