ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ನೇಮಕಾತಿ: 4103 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 07: ದಕ್ಷಿಣ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ 2021ನೇ ಸಾಲಿನ ನೇಮಕಾತಿ ಮುಂದುವರೆಸಲಾಗಿದೆ. ಈ ಕುರಿತಂತೆ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 4103 ವಿವಿಧ ಅಪ್ರೆಂಟಿಸ್ ಟ್ರೇಡ್ ಹುದ್ದೆಗಳ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ನವೆಂಬರ್ 03ರೊಳಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: South Eastern Railways
ಹುದ್ದೆ ಹೆಸರು: Apprentice
ಒಟ್ಟು ಹುದ್ದೆ: 4103
ಉದ್ಯೋಗ ತಾಣ: ದಕ್ಷಿಣ ಸೆಂಟ್ರಲ್ ರೈಲ್ವೆ ವಿಭಾಗ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 03, 2021.

ನೈಋತ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆ ಭರ್ತಿ; 904 ಹುದ್ದೆಗಳಿವೆನೈಋತ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆ ಭರ್ತಿ; 904 ಹುದ್ದೆಗಳಿವೆ

ಯಾವ ಟ್ರೇಡ್‌ಗಳು-ಎಷ್ಟು ಹುದ್ದೆ
ಎಸಿ ಮೆಕ್ಯಾನಿಕ್- 250,
ಕಾರ್ಪೆಂಟರ್-18,
ಡೀಸೆಲ್ ಮೆಕ್ಯಾನಿಕ್-531
ಎಲೆಕ್ಟ್ರಿಷಿಯನ್- 1019,
ಎಲೆಕ್ಟ್ರಾನಿಕ್ ಮೆಕ್ಯಾನಿಕ್-92 13,
ಫಿಟ್ಟರ್-1460
ಮಷಿನಿಸ್ಟ್-71
ಎಂಎಂಡಬ್ಲ್ಯೂ-24
ಎಂಎಂಟಿಎಂ-05
ಪೈಂಟರ್-80
ವೆಲ್ಡರ್ - 553

South Central Railway Recruitment 2021 apply for 4103 Various Post

ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ, ಮೆಟ್ರಿಕ್, ಐಟಿಐ, ಎಚ್ಎಸ್ ಸಿ, 12ನೇ ತರಗತಿ, ಪದವಿ ಅಥವಾ ತತ್ಸಮಾನ ಅರ್ಹತೆ. ಕನಿಷ್ಠ 50% ಅಂಕಗಳೊಂದಿಗೆ ಪಾಸ್, ಐಟಿಐ ಪ್ರಮಾಣ ಪತ್ರ ಹೊಂದಿರ ತಕ್ಕದ್ದು.

ವಯೋಮಿತಿ:
ಮೀಸಲಾತಿ ರಹಿತ: 15 ರಿಂದ 24 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ
ಸಾಮಾನ್ಯ/ಹಿಂದುಳಿದ ವರ್ಗ: 100 ರು
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಂಡ/ದಿವ್ಯಾಂಗ/ಮಹಿಳಾ ಅಭ್ಯರ್ಥಿ: ಯಾವುದೇ ಶುಲ್ಕವಿಲ್ಲ
ಶುಲ್ಕ ಪಾವತಿ: ಆನ್ ಲೈನ್ ಮೂಲಕ.

ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 3261 ಹುದ್ದೆಗಳಿವೆಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 3261 ಹುದ್ದೆಗಳಿವೆ

ಆನ್‌ಲೈನ್‌ನಲ್ಲಿ BHIM ಯುಪಿಐ, ನೆಟ್ ಬ್ಯಾಂಕಿಂಗ್, ವೀಸಾ, ಮಾಸ್ಟರ್ ಕಾರ್ಡ್, ಮಾಸ್ಟ್ರೋ, ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬಹುದು. ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರ್ಯಾಂಚ್ ಮೂಲಕ ಎಸ್ ಬಿ ಐ ಚಲನ್ ಪಡೆದುಕೊಳ್ಳಬಹುದು.

ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಟೈಪಿಂಗ್ ಟೆಸ್ಟ್ (ಜ್ಯಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಹಾಗೂ ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್ ಹುದ್ದೆಗೆ) ದಾಖಲೆಗಳ ಪರಿಶೀಲನೆ.

ಪ್ರಮುಖ ದಿನಾಂಕ;
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 04/10/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 03/11/2021

ಅರ್ಜಿ ಸಲ್ಲಿಸುವ ವಿಧಾನ:
* South Central Railways ನೇಮಕಾತಿ ಅಧಿಸೂಚನೆ 2021ರಲ್ಲಿ ನೀಡಿರುವಂಥ ವಿಭಾಗದ ಪ್ರಕಟಣೆಯನ್ನು ತಪ್ಪದೇ ಓದಿ ನಂತರ ಅರ್ಜಿ ಭರ್ತಿ ಮಾಡಿ
* ಅರ್ಹತೆ ಇದ್ದ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. ಇದಕ್ಕೂ ಮೊದಲು ನೋಂದಯಿಸಿಕೊಂಡು ಲಾಗಿನ್ ಆಗುವುದು ಅಗತ್ಯ.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಐಟಿಐ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* ರೈಲ್ವೆ (https://scr.indianrailways.gov.in/) ವೆಬ್ ತಾಣದಲ್ಲಿ ಸಂಬಂಧಪಟ್ಟ ಹುದ್ದೆಯ ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
South Central Railway recruitment 2021 notification has been released on official website for the recruitment of 4103 vacancies at South Eastern Railway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X