• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವಮೊಗ್ಗ; ಸಿಮ್ಸ್ ನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿ ಹಾಕಿ...

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 26: ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಅಧೀನ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್, ಫಿಸಿಯೋಥೆರಪಿಸ್ಟ್, ಡಯಾಲಿಸಿಸ್ ಟೆಕ್ನೀಷಿಯನ್, ಇ.ಸಿ.ಜಿ. ಟೆಕ್ನೀಷಿಯನ್ ಸೇರಿದಂತೆ 9 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

94 ಸ್ಟಾಫ್ ನರ್ಸ್ ಹುದ್ದೆಗಳು (ಅರ್ಹತೆ, ಬಿಎಸ್ಸಿ, ನರ್ಸಿಂಗ್/ಡಿಪ್ಲೊಮಾ ನರ್ಸಿಂಗ್), 1 ಫಿಸಿಯೋಥೆರಪಿಸ್ಟ್ ಹುದ್ದೆಯಿದ್ದು, ಡಿಪ್ಲೊಮಾ ಅಥವಾ ಡಿಗ್ರಿ (ಫಿಸಿಯೋಥೆರಪಿ) ಅರ್ಹತೆ ಹೊಂದಿರಬೇಕು. 8 ಡಯಾಲಿಸಿಸ್ ಟೆಕ್ನೀಷಿಯನ್ ಹುದ್ದೆ ಖಾಲಿ ಇದ್ದು, sslc/ಪಿಯುಸಿ ತೇರ್ಗಡೆ ಜೊತೆಗೆ ಡಯಾಲಿಸಿಸ್ ತಂತ್ರಜ್ಞತೆಯಲ್ಲಿ ಡಿಪ್ಲೊಮಾ ಹೊಂದಿರಬೇಕು.

ಶಿವಮೊಗ್ಗ ಜಿಲ್ಲೆಯ ಅಂಗನವಾಡಿ ಖಾಲಿ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

2 ಇಸಿಜಿ ಟೆಕ್ನೀಷಿಯನ್ ಹುದ್ದೆಗೆ sslc/ಪಿಯುಸಿ ತೇರ್ಗಡೆ ಜೊತೆಗೆ ಇ.ಸಿ.ಜಿ ತಂತ್ರಜ್ಞತೆಯಲ್ಲಿ ಡಿಪ್ಲೊಮಾ ಅರ್ಹತೆ ಹೊಂದಿರಬೇಕಿದೆ. ಕಿರಿಯ ಫಾರ್ಮಾಸಿಸ್ಟ್ ಹುದ್ದೆಗೆ 4 ಸ್ಥಾನ ಖಾಲಿಯಾಗಿದ್ದು, ಈ ಹುದ್ದೆಗೆ ಸೇರಬಯಸುವವರು ಡಿಪ್ಲೊಮಾ ಇನ್ ಫಾರ್ಮಸಿ ಅರ್ಹತೆ ಹೊಂದಿರಬೇಕಿದೆ.

5 ಜನ ವಾಹನ ಚಾಲಕರು ಬೇಕಿದ್ದು, sslc ತೇರ್ಗಡೆ ಮತ್ತು ವಾಹನ ಚಾಲನೆಯ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಪಡೆದ ವಾಹನ ಚಾಲನಾ ಪರವಾನಗಿ ಹಾಗೂ ವಾಹನ ಚಾಲನೆಯ ಬಗ್ಗೆ ಅನುಭವ ಹೊಂದಿರಬೇಕಿದೆ.

ಐಟಿಐ ಕೋರ್ಸ್ ಅಥವಾ sslc ಮತ್ತು ಸಂಬಂಧಿಸಿ ಅರ್ಹತೆಯುಳ್ಳವರಿಗೆ ವರ್ಕ್ ಷಾಪ್ ವರ್ಕರ್ ಬೇಕಿದ್ದು ಇಲ್ಲಿ 6 ಹುದ್ದೆಗಳು ಖಾಲಿಯಿವೆ. ಡಾರ್ಕ್ ರೂಂ ಅಸಿಸ್ಟೆಂಟ್ ಗೆ 4 ಹುದ್ದೆಗಳಿದ್ದು, sslc ತೇರ್ಗಡೆ ಮತ್ತು ಡಾರ್ಕ್ ರೂಂ ನಲ್ಲಿ 1 ವರ್ಷದ ಅನುಭವ ಹೊಂದಿರಬೇಕಿದೆ. ಡಿಸೆಕ್ಷನ್ ಹಾಲ್ ಅಟೆಂಡರ್ ಗೆ 4 ಸ್ಥಾನ ಖಾಲಿಯಿದ್ದು, ಲ್ಯಾಬ್ ಅಟೆಂಡರ್/ಡಿ ಗ್ರೂಪ್/ಪಿಯೋನ್ ಗೆ 78 ಸ್ಥಾನ ಖಾಲಿಯಿದೆ. ಈ ಎರಡೂ ಹುದ್ದೆಗೂ sslc ತೇರ್ಗಡೆ ಹೊಂದಿರಬೇಕಿದೆ.

English summary
Shivamogga Medical Sciences Institute called for an applications for 9 different posts,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X