ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ; ವಿವಿಧ ಯೋಜನೆಗಳ ಅಡಿ ಅರ್ಜಿ ಆಹ್ವಾನ

|
Google Oneindia Kannada News

ಶಿವಮೊಗ್ಗ, ಜೂನ್ 16; ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2021-22ನೇ ಸಾಲಿನ ಜಿಲ್ಲಾ ವಲಯದ ಕಾರ್ಯಕ್ರಮದಡಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಸೃಜನಯೋಜನೆ (ಸಾಮಾನ್ಯ) ಅಡಿ ಗ್ರಾಮೀಣ ಪ್ರದೇಶದಲ್ಲಿ ಸ್ವಉದ್ಯೋಗದಲ್ಲಿ ತೊಡಗುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನ ಘಟಕ (ಗರಿಷ್ಠ ಯೋಜನಾ ವೆಚ್ಚ ರೂ. 10.00 ಲಕ್ಷ) ಸೇವಾ ವಲಯದ ಘಟಕ (ಗರಿಷ್ಠ ಯೋಜನಾ ವೆಚ್ಚ ರೂ. 5.00 ಲಕ್ಷ)ಗಳನ್ನು ಪ್ರಾರಂಭಿಸಲು ಹಣಕಾಸು ಸಂಸ್ಥೆ/ಬ್ಯಾಂಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ಶೇ.25 (ಗರಿಷ್ಠ ರೂ. 2.50 ಲಕ್ಷ) ಹಾಗೂ ವಿಶೇಷ ವರ್ಗದವರಿಗೆ ಶೇ.35 ರಂತೆ (ಗರಿಷ್ಠ ರೂ. 3.50 ಲಕ್ಷ) ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.

ಉಬರ್ ನೇಮಕಾತಿ: ಬೆಂಗಳೂರು, ಹೈದರಾಬಾದ್‌ನಲ್ಲಿ ವಿವಿಧ ಹುದ್ದೆ ಉಬರ್ ನೇಮಕಾತಿ: ಬೆಂಗಳೂರು, ಹೈದರಾಬಾದ್‌ನಲ್ಲಿ ವಿವಿಧ ಹುದ್ದೆ

ಸ್ವಯಂ ಉದ್ಯೋಗ ಸೃಜನಯೋಜನೆ (ವಿಶೇಷ ಘಟಕ ಮತ್ತುಗಿರಿಜನ ಉಪಯೋಜನೆ) ಅಡಿ ಗ್ರಾಮೀಣ ಪ್ರದೇಶದಲ್ಲಿ ಸ್ವಉದ್ಯೋಗದಲ್ಲಿ ತೊಡಗುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನ ಮತ್ತು ಸೇವಾ ವಲಯಘಟಕ (ಗರಿಷ್ಠ ಯೋಜನಾ ವೆಚ್ಚ ರೂ. 10.00 ಲಕ್ಷ)ಗಳನ್ನು ಪ್ರಾರಂಭಿಸಲು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಹಣಕಾಸು ಸಂಸ್ಥೆ/ಬ್ಯಾಂಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಶೇ.60 ರಂತೆ ಗರಿಷ್ಠ ರೂ. 5.00 ಲಕ್ಷಗಳವರೆಗೆ ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.

ಕೋಲಾರ; ಕೆಲಸ ಖಾಲಿ ಇದೆ, ಜೂನ್ 30ರೊಳಗೆ ಅರ್ಜಿ ಹಾಕಿ ಕೋಲಾರ; ಕೆಲಸ ಖಾಲಿ ಇದೆ, ಜೂನ್ 30ರೊಳಗೆ ಅರ್ಜಿ ಹಾಕಿ

 Self Employment Scheme Apply For Subsidy In Shivamogga district

ಕುಶಲಕರ್ಮಿ ತರಬೇತಿ ಸಂಸ್ಥೆ, ಸಾಗರ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿ/ ಉದಯೋನ್ಮುಖ ಉದ್ದಿಮೆದಾರರುಗಳಿಗೆ ಪ್ರಸ್ತುತ ಸಾಲಿಗೆ 3 ತಿಂಗಳ ಅವಧಿಯ ಇಂಡಸ್ಟ್ರಿಯಲ್ ಸೀವಿಂಗ್ ಮಷಿನ್ ಆಪರೇಟರ್, 3 ತಿಂಗಳ ಅವಧಿಯ ಕಂಪ್ಯೂಟರ್ ಬೇಸಿಕ್ ತರಬೇತಿ, 10 ತಿಂಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ವಸತಿ/ ವಸತಿಯೇತರವಾಗಿ ಉಚಿತವಾಗಿ ನೀಡಲಾಗುತ್ತದೆ.

KCET 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ KCET 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ವೃತ್ತಿನಿರತ ಕುಶಲಕರ್ಮಿ/ ವೃತ್ತಿಪರರಿಗೆ ಉಚಿತ ಸುಧಾರಿತ ಉಪಕರಣ ಯೋಜನೆ ಅನ್ವಯ ಪ್ರಸ್ತುತ ಸಾಲಿಗೆ ಗ್ರಾಮೀಣ ಪ್ರದೇಶದ ವೃತ್ತಿಪರ/ ವೃತ್ತಿನಿರತ ಬಡಗಿ, ಮೇಸನ್ (ಗಾರೆ), ಹೊಲಿಗೆ (ಮಹಿಳೆಯರಿಗೆ) ವೃತ್ತಿಗಳಲ್ಲಿ ತೊಡಗಿರುವವರಿಗೆ ತಲಾ ಗರಿಷ್ಠ ರೂ. 8000 ಗಳ ಮೊತ್ತದ ಸುಧಾರಿತ ಉಪಕರಣಗಳ ಕಿಟ್ ಉಚಿತವಾಗಿ ನೀಡಲು ಅವಕಾಶವಿರುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್/ ಹಣಕಾಸು ಸಂಸ್ಥೆ ಮೂಲಕ ಸಾಲ ಸೌಲಭ್ಯ ಪಡೆದು ಸ್ಥಾಪಿಸಲಾಗಿರುವ ಸೂಕ್ಷ್ಮ ಗ್ರಾಮೀಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಅತೀ ಸಣ್ಣ ಕೈಗಾರಿಕೆಗಳು ಕುಶಲ ಕರ್ಮಿ ವೃತ್ತಿಗಳಿಗೆ ಹಣಕಾಸು ಸಂಸ್ಥೆ, ಬ್ಯಾಂಕ್‍ಗಳು ವಿಧಿಸುವ ಅವಧಿ ಸಾಲದ ಬಡ್ಡಿಯ ಮೇಲೆ ಇತರೆ ವರ್ಗದವರಿಗೆ ಶೇ. 5ರಂತೆ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಮಹಿಳೆ, ಅಲ್ಪ ಸಂಖ್ಯಾತರು, ಹಿಂದುಳಿ ವರ್ಗ-1 ಹಾಗೂ ವರ್ಗ -2, ಅಂಗವಿಕಲರು ಮತ್ತು ಮಾಜಿ ಸೈನಿಕ ಉದ್ದಿಮೆದಾರರುಗಳಿಗೆ ಶೇ 6ರಂತೆ ಬಡ್ಡಿ ಸಹಾಯಧನವನ್ನು ನೀಡಬಹುದಾಗಿರುತ್ತದೆ.

ಜಿಲ್ಲೆಯ ಪ್ರತಿ ಉದ್ದಿಮೆಗೆ ಸೊರಬ ತಾಲ್ಲೂಕಿಗೆ 6 ವರ್ಷ, ಹೊಸನಗರ ತಾಲ್ಲೂಕಿಗೆ 5 ವರ್ಷ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ತಾಲ್ಲೂಕುಗಳಿಗೆ 4 ವರ್ಷದ ಅವಧಿಗಳಿಗೆ ಬಡ್ಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಕಚೇರಿಯಿಂದ ಅರ್ಜಿ ಪಡೆದು ನಿಗಧಿತ ನಮೂನೆಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ 30/6/2021ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಳಿಗಾಗಿ 08182-223376/295689 ಕಚೇರಿಯನ್ನು ಸಂಪರ್ಕಿಸಬಹುದು.

English summary
Applications invited from candidates for subsidy under self employment scheme in Shivamogga district. Candidates can apply till June 30, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X