ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಜಿನಿಯರ್ ಗಳು ಅರ್ಜಿ ಹಾಕುತ್ತಿದ್ದಾರೆ ಎಸ್ಸೆಸ್ಸೆಲ್ಸಿ ಹುದ್ದೆಗಳಿಗೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಭಾರತೀಯ ರೈಲ್ವೆಯಲ್ಲಿ ಈ ಹಿಂದೆ ಡಿ ಗ್ರೂಪ್ ಹುದ್ದೆಗಳು ಎಂದು ಕರೆಯಲಾಗುತ್ತಿದ್ದ, ಈಗ 'ಲೆವೆಲ್ 1' ಎಂದು ಕರೆಯುವ ಹುದ್ದೆಗಳಿಗಾಗಿ ಸೆಪ್ಟೆಂಬರ್ ಹದಿನೇಳನೆ ತಾರೀಕು ಪರೀಕ್ಷೆ ನಡೆಯಲಿದೆ. ಒಟ್ಟು ಖಾಲಿ ಇರುವ ಹುದ್ದೆಗಳು 62,907. ಅವುಗಳಿಗಾಗಿ ಅರ್ಜಿ ಹಾಕಿಕೊಂಡಿದ್ದವರು 1.9 ಕೋಟಿ ಮಂದಿ.

ಅಂದರೆ ಪ್ರತಿ ಹುದ್ದೆಗೆ 302 ಅಭ್ಯರ್ಥಿಗಳು. ರೈಲ್ವೆ ಇಲಾಖೆಯಲ್ಲೇ ಇದು ತೀರಾ ಆರಂಭದ ಅಥವಾ ಕನಿಷ್ಠ ವಿದ್ಯಾಭ್ಯಾಸ ನಿರೀಕ್ಷಿಸುವ ಕೆಲಸ. ರೈಲು ಹಳಿಗಳ ನಿರ್ವಹಣೆ ಮಾಡುವ ಗ್ಯಾಂಗ್ ಮನ್, ಗೇಟ್ ಮಾನ್, ಪಾಯಿಂಟ್ಸ್ ಮ್ಯಾನ್, ಎಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಎಂಜಿನಿಯರಿಂಗ್/ ಸಿಗ್ನಲ್/ ಟೆಲಿ ಕಮ್ಯೂನಿಕೇಷನ್ಸ್, ಪೋರ್ಟರ್ ಇತ್ಯಾದಿ ಸಹಾಯಕ ಹುದ್ದೆಗಳನ್ನು ಇವು ಒಳಗೊಂಡಿವೆ.

21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ

ಇವುಗಳಿಗೆ ಕನಿಷ್ಠ ವಿದ್ಯಾಭ್ಯಾಸ ಹತ್ತನೇ ತರಗತಿ ಅಥವಾ ನ್ಯಾಷನಲ್ ಕೌನ್ಸಿಲ್ ಆನ್ ವೊಕೇಷನಲ್ ಟ್ರೇನಿಂಗ್ ಅಥವಾ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ ಸ್ಟಿಟ್ಯೂಟ್ಸ್ ಅಥವಾ ನ್ಯಾಷನಲ್ ಅಪ್ರೆಂಟಿಸ್ ಷಿಪ್ ಸರ್ಟಿಫಿಕೇಟ್ಸ್. ಆದರೆ ಈ ಸಲ ಕೆಲಸಕ್ಕಾಗಿ ಅರ್ಜಿ ಹಾಕಿಕೊಂಡವರಲ್ಲಿ ಪದವೀಧರರಿದ್ದಾರೆ, ಸ್ನಾತಕೋತ್ತರ ಪದವೀಧರರಿದ್ದಾರೆ ಮತ್ತು ಎಂಜಿನಿಯರಿಂಗ್ ಪದವೀಧರರಿದ್ದಾರೆ ಎಂಬುದನ್ನು ರೈಲ್ವೆ ನೇಮಕಾತಿ ಮಂಡಳಿ ಮೂಲಗಳು ತಿಳಿಸಿವೆ.

Scarcity of job creation post-graduates and engineers apply to be railway gangmen

ಇದೊಂದೇ ಉದಾಹರಣೆಯಲ್ಲ. ಕಳೆದ ಆಗಸ್ಟ್ 31ರಂದು 1.27 ಲಕ್ಷ ಹುದ್ದೆಗಾಗಿ ನಡೆದ ಪರೀಕ್ಷೆಗೆ 2.35 ಕೋಟಿ ಮಂದಿ ಅರ್ಜಿ ಹಾಕಿಕೊಂಡಿದ್ದರು. ಆಗ ದೊಡ್ಡ ಸಂಖ್ಯೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸದವರೇ ಅರ್ಜಿ ಹಾಕಿಕೊಂಡಿದ್ದರು. ಭಾರತದಲ್ಲಿ ಉದ್ಯೋಗ ಸಮಸ್ಯೆ ಜಾಸ್ತಿ ಇದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎನ್ನುತ್ತಾರೆ ವಿಶ್ಲೇಷಕರು.

ಎಸ್‌ಎಸ್‌ಎಲ್‌ಸಿ ಆದವರಿಗೆ ಕೊಂಕಣ ರೈಲ್ವೆಯಲ್ಲಿ ಕೆಲಸವಿದೆಎಸ್‌ಎಸ್‌ಎಲ್‌ಸಿ ಆದವರಿಗೆ ಕೊಂಕಣ ರೈಲ್ವೆಯಲ್ಲಿ ಕೆಲಸವಿದೆ

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ನರೇಂದ್ರ ಮೋದಿ 2014ರ ಚುನಾವಣೆ ವೇಳೆ ಭರವಸೆ ನೀಡಿದ್ದರು. ಅವರು ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬ ಬಗ್ಗೆ ಅಂಕಿ-ಅಂಶ ದೊರೆತಿಲ್ಲ.

English summary
On September 17th 1.9 crore applicants will appear for the Railway Recruitment Board (RRB) examination to fill 62,907 vacancies at ‘Level 1’, earlier called ‘Group D’. That is, 302 applicants for every job — jobs that are at the lowest level in the railways, including posts such as gangman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X