ಎಸ್ಬಿಐ ನೇಮಕಾತಿ 2021: 452 ಹುದ್ದೆಗಳಿವೆ ಅರ್ಜಿ ಹಾಕಿ
ನವದೆಹಲಿ, ಜನವರಿ 12: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. Specialist Cadre Officers ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.ೀ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಅರ್ಜಿ ವಿವರಗಳನ್ನು ನೀಡಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಲು ಜನವರಿ 27, 2021 ಕೊನೆಯ ದಿನವಾಗಿದೆ.
ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಒಟ್ಟು ಹುದ್ದೆಗಳು: 452
ಹುದ್ದೆ ಹೆಸರು: Specialist Cadre Officers
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 27, 2021.
ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಟೆಕ್/ ಬಿ. ಇ ಕಂಪ್ಯೂಟರ್ ಸೈನ್ಸ್/ ಎಂಸಿಎ/ಎಂಬಿಎ /ಪಿಜಿಡಿಎಂ ಅಥವ ಐಸಿಡಬ್ಲ್ಯೂಎ. ಸಿಎಫ್ ಎ.
ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 25 ರಿಂದ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಕೆ ದಿನಾಂಕಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ.
ಅರ್ಜಿ ಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 750.ಗಳು. ಎಸ್ ಸಿ, ಎಸ್ಟಿ ಇನ್ನುಳಿದ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ.
ನೇಮಕಾತಿ ಪ್ರಕ್ರಿಯೆ : ಅರ್ಜಿ ಪರಿಶೀಲಿಸಿ ಆಯ್ಕೆಯಾದವರ ಪಟ್ಟಿ ಪ್ರಕಟಿಸಲಾಗುವುದು ಹಾಗೂ ವೈಯಕ್ತಿಕ ಸಂದರ್ಶನವಿರಲಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27/01/2021
ಅರ್ಜಿ ಸಲ್ಲಿಸುವ ವಿಧಾನ, ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ