ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI Recruitment: 2,000 ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

|
Google Oneindia Kannada News

ನವದೆಹಲಿ, ನವೆಂಬರ್ 18: ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2000 ಪ್ರೊಬೇಷನರಿ ಆಫೀಸರ್‌ (ಪಿಓ) ನೇಮಕಾತಿಗಾಗಿ ಆನ್‌ಲೈನ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆಸಕ್ತ ಅಭ್ಯರ್ಥಿಗಳು bank.sbi/careers or sbi.co.in. ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್ ನೋಂದಣಿ ನವೆಂಬರ್ 14 ರಂದು ಪ್ರಾರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 4 ರವರೆಗೆ ಅರ್ಜಿಗಳನ್ನು ಭರ್ತಿ ಮಾಡಬಹುದು. ಎಸ್‌ಬಿಐನ ವಿವಿಧ ಕಚೇರಿಗಳಲ್ಲಿ 2000 ಪಿಒ ನೇಮಕ ಮಾಡಲು ಎಸ್‌ಬಿಐ ಪಿಒ 2020 ಅಧಿಸೂಚನೆಯನ್ನು ನವೆಂಬರ್ 13 ರಂದು ಬಿಡುಗಡೆ ಮಾಡಿತು. ಮೂರು ಸುತ್ತಿನ ಆಯ್ಕೆಗಳು, ಪ್ರಿಲಿಮ್ಸ್‌, ಮುಖ್ಯ ಪರೀಕ್ಷೆ ಮತ್ತು ಅಂತಿಮ ಸಂದರ್ಶನದ ಸುತ್ತಿನಲ್ಲಿ ನಡೆಯಲಿದೆ.

ಕಲಬುರಗಿ; ಕೆಲಸ ಖಾಲಿ ಇದೆ, ಅರ್ಜಿ ಹಾಕಲು ಡಿ. 17 ಕೊನೆ ದಿನ ಕಲಬುರಗಿ; ಕೆಲಸ ಖಾಲಿ ಇದೆ, ಅರ್ಜಿ ಹಾಕಲು ಡಿ. 17 ಕೊನೆ ದಿನ

"ಭಾರತದ ಅತಿದೊಡ್ಡ ಬ್ಯಾಂಕಿನಲ್ಲಿ ಕೆಲಸ ಮಾಡಲು ಇಲ್ಲಿ ಅವಕಾಶವಿದೆ. ಎಸ್‌ಬಿಐ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದೆ" ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

ವಯಸ್ಸಿನ ಮಿತಿ ಎಷ್ಟು?

ವಯಸ್ಸಿನ ಮಿತಿ ಎಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು (01.04.2020 ರಂತೆ) 21 ರಿಂದ 30 ವರ್ಷ ವಯಸ್ಸಿನವರಾಗಿರಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

ಎಸ್‌ಬಿಐ ಪ್ರೊಬೇಷನರಿ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯಗಳಲ್ಲಿ ಪದವಿ ಪಡೆಯುವುದು ಕಡ್ಡಾಯವಾಗಿದೆ. ಇದಲ್ಲದೆ ಅಭ್ಯರ್ಥಿಗಳು ತಮ್ಮ ಪದವಿಯ ಅಂತಿಮ ವರ್ಷ / ಸೆಮಿಸ್ಟರ್‌ನಲ್ಲಿರುವವರು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಸಂದರ್ಶನಕ್ಕೆ ಕರೆದರೆ, ಅವರು 01.07.2020 ಅಥವಾ ಅದಕ್ಕೂ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ಸಲ್ಲಿಸಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ. ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣೀಕರಣ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ಎಸ್‌ಬಿಐ ಪಿಒ ಖಾಲಿ ಹುದ್ದೆಗಳ ವರ್ಗವಾರು ವಿಂಗಡಣೆ

ಎಸ್‌ಬಿಐ ಪಿಒ ಖಾಲಿ ಹುದ್ದೆಗಳ ವರ್ಗವಾರು ವಿಂಗಡಣೆ

ಎಸ್‌ಸಿ- 300

ಎಸ್ಟಿ- 150

ಒಬಿಸಿ- 540

ಇಡಬ್ಲ್ಯೂಎಸ್- 200

ಸಾಮಾನ್ಯ- 810

ಒಟ್ಟು - 2000

ಪರೀಕ್ಷೆಯ ವೇಳಾಪಟ್ಟಿ

ಪರೀಕ್ಷೆಯ ವೇಳಾಪಟ್ಟಿ

ಪ್ರಿಲಿಮ್ಸ್ ಪರೀಕ್ಷೆಯನ್ನು 31 ಡಿಸೆಂಬರ್ 2020 ಮತ್ತು 2, 4, 5 ಜನವರಿ 2021 ರಂದು ನಡೆಸಲಾಗುವುದು ಮತ್ತು ಮುಖ್ಯ ಪರೀಕ್ಷೆಯನ್ನು 2021 ಜನವರಿ 29 ರಂದು ನಡೆಸಲು ನಿರ್ಧರಿಸಲಾಗಿದೆ.

ಎಷ್ಟು ಶುಲ್ಕ ಪಾವತಿಸಬೇಕು?

ಎಷ್ಟು ಶುಲ್ಕ ಪಾವತಿಸಬೇಕು?

ಅಭ್ಯರ್ಥಿಗಳು 750 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.

ವೇತನ ಎಷ್ಟು?

ವೇತನ ಎಷ್ಟು?

ಇತ್ತೀಚಿನ ಸೂಚನೆಯ ಪ್ರಕಾರ, ಎಸ್‌ಬಿಐ ಪ್ರೊಬೇಷನರಿ ಅಧಿಕಾರಿಗಳಿಗೆ ಆರಂಭಿಕ ಮೂಲ ವೇತನ ನಾಲ್ಕು ಮುಂಗಡ ಏರಿಕೆಗಳೊಂದಿಗೆ, 27,620 ಆಗಿದೆ. ಡಿಎ, ಸಿಸಿಎ, ಎಚ್‌ಆರ್‌ಡಿ ಮುಂತಾದ ವಿವಿಧ ಸವಲತ್ತುಗಳಿಗೆ ಅಭ್ಯರ್ಥಿಗಳು ಅರ್ಹರು. ಅಭ್ಯರ್ಥಿಗಳು ಬ್ಯಾಂಕಿನೊಂದಿಗೆ ಎರಡು ವರ್ಷಗಳ ಬಾಂಡ್ ಅನ್ನು ಸಹ ಪೂರೈಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಮತ್ತು ಅವಶ್ಯಕತೆಗಳು

ಅರ್ಜಿ ಸಲ್ಲಿಕೆ ಮತ್ತು ಅವಶ್ಯಕತೆಗಳು

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು. ಯಾವುದೇ ಇತರ ಅಪ್ಲಿಕೇಶನ್ ವಿಧಾನವನ್ನು ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಇಮೇಲ್ / ಎಸ್‌ಎಂಎಸ್ ಮೂಲಕ ಬ್ಯಾಂಕಿನಿಂದ ಯಾವುದೇ ಸಂವಹನ / ಕರೆ ಪತ್ರಗಳು / ಸಲಹೆಗಳನ್ನು ಸ್ವೀಕರಿಸಲು ಇದು ಅಗತ್ಯವಾಗಿರುತ್ತದೆ.

ಅಭ್ಯರ್ಥಿಗಳು ಬ್ಯಾಂಕಿನ 'careers' ವೆಬ್‌ಸೈಟ್ ಅಥವಾ ಎಸ್‌ಬಿಐ ವೆಬ್‌ಸೈಟ್ ಮೂಲಕ ತಮ್ಮನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ನೋಂದಣಿ ಅಭ್ಯರ್ಥಿಗಳು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್ ಮೂಲಕ ಅಗತ್ಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

English summary
State bank of India (SBI) has started the online registration process for recruitment at 2000 vacancies at the post of Probationary officer. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X