ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1226ಕ್ಕೂ ಅಧಿಕ ಹುದ್ದೆಗಳಿವೆ
ಬೆಂಗಳೂರು, ಡಿಸೆಂಬರ್ 10: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸರ್ಕಲ್ ಆಧಾರಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 29ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳು: 1226
ಹುದ್ದೆ ಹೆಸರು: Circle Based Officer
ಸಂಬಳ ನಿರೀಕ್ಷೆ: 36,000-63,840/ ಪ್ರತಿ ತಿಂಗಳು
ಹುದ್ದೆಗಳ ವಿವರ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ರಾಜ್ಯದ ಹೆಸರು: ಒಟ್ಟು ಹುದ್ದೆ
ಗುಜರಾತ್: 354
ಕರ್ನಾಟಕ: 278
ಮಧ್ಯಪ್ರದೇಶ: 162
ಛತ್ತೀಸ್ ಗಢ: 52
ತಮಿಳುನಾಡು: 276
ರಾಜಸ್ಥಾನ: 104
ವಿದ್ಯಾರ್ಹತೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೇಮಕಾತಿಯ ಅಧಿಸೂಚನೆಯಂತೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ವಿದ್ಯಾರ್ಹತೆ ಜೊತೆಗೆ ಅನುಭವ ಹೊಂದಿರ ತಕ್ಕದ್ದು, ಆರ್ ಬಿ ಐ ಮಾನ್ಯತೆ ಪಡೆದಿರುವ ವಾಣಿಜ್ಯ ಬ್ಯಾಂಕ್ ಅಥವಾ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ನಲ್ಲಿ 2 ವರ್ಷಗಳ ಅನುಭವ ಹೊಂದಿರತಕ್ಕದ್ದು.
ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ (ಡಿಸೆಂಬರ್ 1, 2021ರಂತೆ). ಅಭ್ಯರ್ಥಿಗಳು 02/12/1991 ರಿಂದ 01/12/2000ರೊಳಗೆ ಜನಿಸಿದವರಾಗಬೇಕು.
ದಿವ್ಯಾಂಗರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ10 ವರ್ಷ, ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 15 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ, ಮಾಜಿ ಯೋಧ 05, ಹಿಂದುಳಿದ ವರ್ಗ 03 ವರ್ಷಗಳ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗ: 750 ರು
ಎಸ್ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಶುಲ್ಕಪಾವತಿ ವಿಧಾನ: ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್
ನೇಮಕಾತಿ ಪ್ರಕ್ರಿಯೆ: ಪ್ರಾಥಮಿಕ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ, ಸಂದರ್ಶನ.
ಪ್ರಮುಖ ದಿನಾಂಕ:
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನ: 09/12/2021
ಆನ್ಲೈನ್ನಲ್ಲಿಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29/12/2021
ಆನ್ಲೈನ್ನಲ್ಲಿ ಪರೀಕ್ಷೆ ಜನವರಿ ತಿಂಗಳಲ್ಲಿ ನಡೆಸುವ ಸಾಧ್ಯತೆಯಿದೆ.
ಅರ್ಜಿ ಸಲ್ಲಿಸುವ ವಿಧಾನ:
* ಎಸ್ಬಿಐ ನೇಮಕಾತಿ ಅಧಿಸೂಚನೆ 2021ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಐಬಿಪಿಎಸ್ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
* ಆನ್ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* SBI Circle Based Officer Apply Online ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ (https://ibpsonline.ibps.in/sbircbonov21/)