ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಡೂರು ತಾಲೂಕು ಪಂಚಾಯಿತಿಗಳಿಗೆ ‘ಗ್ರಾಮ ಕಾಯಕ ಮಿತ್ರ’ ನೇಮಕ:ಅರ್ಜಿ ಆಹ್ವಾನ

|
Google Oneindia Kannada News

ಬಳ್ಳಾರಿ, ಮೇ 20: ಸಂಡೂರು ತಾಲೂಕಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2020-21ನೇ ಸಾಲಿನಲ್ಲಿ 20ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ "ಗ್ರಾಮ ಕಾಯಕ ಮಿತ್ರ" ರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.

ಅದರಂತೆ ಈಗಾಗಲೇ 21 ಗ್ರಾಮ ಪಂಚಾಯಿತಿಗಳ ಪೈಕಿ 11 ಗ್ರಾಮ ಪಂಚಾಯಿತಿಗಳಲ್ಲಿ "ಗ್ರಾಮ ಕಾಯಕ ಮಿತ್ರರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಉಳಿದ 10 ಗ್ರಾಮ ಪಂಚಾಯಿತಿಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಡೂರು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತೆಗಳು: ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ವಿದ್ಯಾರ್ಹತೆ-ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಯು 01.01.2022ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ಕ್ರಿಯಾ ಶೀಲ ಜಾಬ್ ಕಾರ್ಡ್ ಹೊಂದಿರಬೇಕು. ಅಭ್ಯರ್ಥಿಯು ಕಳೆದ 03 ವರ್ಷಗಳಲ್ಲಿ (2019-20, 2020-21 ಹಾಗೂ 2021-22) ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು. ವಯೋಮಿತಿ 01.01.2022ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು. ಓದು ಬರಹ ಚೆನ್ನಾಗಿ ತಿಳಿದಿರಬೇಕು.

ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಇರಬೇಕು

ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಇರಬೇಕು

ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಹಾಗೂ ಸದರಿಯವರ ಉದ್ಯೋಗ ಚೀಟಿ ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಇರಬೇಕು. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು.

ಆಯ್ಕೆ ವಿಧಾನ

ಆಯ್ಕೆ ವಿಧಾನ

ಅಭ್ಯರ್ಥಿಗಳು ಅರ್ಜಿಯನ್ನು ತಮ್ಮ ಗ್ರಾಮ ಪಂಚಾಯಿತಿಗೆ ಸಲ್ಲಿಸುವುದು. 10ನೇ ತರಗತಿಯಲ್ಲಿ ಗಳಿಸಿದ ಶೇಕಡವಾರು ಅಂಕಗಳಲ್ಲಿ ಶೇ.50ರಷ್ಟನ್ನು ಪರಿಗಣಿಸುವುದು. ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ ಅಕುಶಲ ಕೂಲಿ ನಿರ್ವಹಿಸಿದ ಸರಾಸರಿ ಮಾನವದಿನಗಳಿಗೆ 20 ಅಂಕಗಳನ್ನು ನೀಡಲಾಗುವುದು.

ವಿಶೇಷ ಸೂಚನೆ

ವಿಶೇಷ ಸೂಚನೆ

ವಸತಿ ಯೋಜನೆಯ ಫಲಾನುಭವಿಗಳಿಗೆ ನರೇಗಾ ಯೋಜನೆಯಡಿ ನೀಡಲಾಗುವ ಮಾನವದಿನಗಳನ್ನು ಗ್ರಾಮ ಕಾಯಕ ಮಿತ್ರರ ಆಯ್ಕೆಯ ಉದ್ದೇಶಕ್ಕಾಗಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಿದ ದಿನಗಳೆಂದು ಪರಿಗಣಿಸತಕ್ಕದ್ದಲ್ಲ. ಅಭ್ಯರ್ಥಿಯು ಯೋಜನೆಯಡಿ ಕಾಯಕ ಬಂಧುವಾಗಿ ಕಾರ್ಯನಿರ್ವಹಿಸಿದಲ್ಲಿ ಪ್ರತಿ ವರ್ಷ ಅನುಭವಕ್ಕೆ ತಲಾ 05 ಅಂಕಗಳಂತೆ ಗರಿಷ್ಟ-20 ಅಂಕಗಳು.(ಕಾಯಕ ಬಂಧು ಆಗಿ ಅನುಭವ ಹೊಂದಿರುವ ವರ್ಷಗಳು ಅಥವಾ 04 ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪರಿಗಣಿಸುವುದು). ಅಭ್ಯರ್ಥಿಯು ಕಾಯಕ ಬಂಧುವಾಗಿ ಕಾರ್ಯನಿರ್ವಹಿಸಿರುವ ಕುರಿತು ಪಿಡಿಒಗಳಿಂದ ನಮೂನೆ 01ರಲ್ಲಿ ದೃಢೀಕರಣ ಸಲ್ಲಿಸುವುದು.

 ಪ್ರೋತ್ಸಾಹಧನದ ವಿವರಣೆ

ಪ್ರೋತ್ಸಾಹಧನದ ವಿವರಣೆ

ಅಭ್ಯರ್ಥಿಯು ಪ.ಜಾ ಅಥವಾ ಪ.ಪಂಗಡಕ್ಕೆ ಸೇರಿದ್ದಲ್ಲಿ 10 ಅಂಕಗಳು. ಅಭ್ಯರ್ಥಿಯು ವಿಧವೆ ಅಥವಾ ಸಿಂಗಲ್ ಪೇರೆಂಟ್ ಆಗಿದ್ದಲ್ಲಿ 05 ಅಂಕಗಳು. ಅಭ್ಯರ್ಥಿಯು ವಿಕಲಚೇತನರಾಗಿದ್ದಲ್ಲಿ 05 ಅಂಕಗಳು. ಗೌರವಧನ ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ ರೂ.6 ಸಾವಿರ ನಿಗದಿತ ಗೌರವಧನ ನೀಡಲಾಗುವುದು. ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ ರೂ.5 ಸಾವಿರದವರೆಗೆ ಪ್ರೋತ್ಸಾಹಧನ ಪಡೆಯಬಹುದಾಗಿದ್ದು, ಪ್ರೋತ್ಸಾಹಧನದ ವಿವರಣೆಯನ್ನು ನೇಮಕಾತಿಯ ನಂತರ ನೀಡಲಾಗುವುದು. ಸರಕಾರದ ಮಾರ್ಗದರ್ಶನ ಹಾಗೂ ನಿರ್ದೇಶನಗಳಂತೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Recommended Video

Kohli ಈ ಬಾರಿ ಮೊದಲ ಬಾರಿ ಪಂದ್ಯ ಶ್ರೇಷ್ಠರಾಗಿ ಹೇಳಿದ್ದೇನು? | Oneindia Kannada
ಅರ್ಜಿಯನ್ನು ಮೇ 27ರೊಳಗಾಗಿ ಸಲ್ಲಿಸಬೇಕು

ಅರ್ಜಿಯನ್ನು ಮೇ 27ರೊಳಗಾಗಿ ಸಲ್ಲಿಸಬೇಕು

ಅರ್ಜಿಯನ್ನು ಮೇ 27ರೊಳಗಾಗಿ ಸಲ್ಲಿಸಬೇಕು. ತದನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ. ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಪೈಕಿ 10 ಗ್ರಾಮ ಪಂಚಾಯಿತಿಗಳಾದ ಅಗ್ರಹಾರ, ತಾರಾನಗರ, ಬಂಡ್ರಿ, ತಾಳೂರು, ಸೋವೇನಹಳ್ಳಿ, ಅಂತಾಪುರ, ಭುಜಂಗನಗರ, ಹೆಚ್.ಕೆ.ಹಳ್ಳಿ, ಮೆಟ್ರಿಕಿ, ದರೋಜಿ ಈ ಗ್ರಾಮ ಪಂಚಾಯಿತಿಗಳಲ್ಲಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಸಂಡೂರು ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬುದು ಎಂದು ಅವರು ತಿಳಿಸಿದ್ದಾರೆ.

English summary
Apply for grama kayaka mitra post in Ballari district Sandur under under MGNREGA. Women candidates can submit applications before May 04, 2022. Application also invited for Day Nulm scheme resource person post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X