ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ನೇಮಕಾತಿ; 1.4 ಲಕ್ಷ ಹುದ್ದೆಗೆ 2.4 ಕೋಟಿ ಅರ್ಜಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 25 : ಭಾರತೀಯ ರೈಲ್ವೆ 1.4 ಲಕ್ಷ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ರೈಲ್ವೆ ನೇಮಕಾತಿ ಮಂಡಳಿ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

1.4 ಲಕ್ಷ ಹುದ್ದೆಗಳಿಗೆ 2.4 ಕೋಟಿ ಅರ್ಜಿಗಳು ಬಂದಿವೆ ಎಂದು ರೈಲ್ವೆ ಸಚಿವಾಲಯ ಹೇಳಿದೆ. ಒಟ್ಟು ಮೂರು ಹಂತದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆರ್‌ಆರ್‌ಬಿ ಅರ್ಜಿ ಕರೆದಿತ್ತು.

ರೈಲ್ವೆ ನೇಮಕಾತಿ; ಲಿಖಿತ ಪರೀಕ್ಷೆ ಡಿಸೆಂಬರ್ 15ರಿಂದರೈಲ್ವೆ ನೇಮಕಾತಿ; ಲಿಖಿತ ಪರೀಕ್ಷೆ ಡಿಸೆಂಬರ್ 15ರಿಂದ

ಮೂರು ಹಂತಗಳಲ್ಲಿ ತಾಂತ್ರಿಕೇತರ ಪಾಲ್ಯುಲರ್ ಕ್ಯಾಟಗರಿ, ಐಸೋಲೇಟೆಡ್ & ಮಿನಿಸ್ಟಿರಿಯಲ್, ಲೆವೆಲ್ 1 (ಟ್ರಾಕ್ ಮೈಂಟೇನರ್ಸ್, ಪಾಯಿಂಟ್ಸ್ ಮೆನ್) ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಇದಕ್ಕಾಗಿ 2.4 ಕೋಟಿ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.

ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ ಯಶವಂತಪುರ-ಪ್ರಯಾಗ್ ರಾಜ್ ಹಬ್ಬದ ವಿಶೇಷ ರೈಲು, ವೇಳಾಪಟ್ಟಿ

RRB Received 2 Crore Applications For 1.4 Lakh Jobs

ಜೂನ್‌ನಿಂದ ಸೆಪ್ಟೆಂಬರ್ ತನಕ ಈ ಹುದ್ದೆಗಳ ಭರ್ತಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಡಿಸೆಂಬರ್ 15ರಿಂದ ಪರೀಕ್ಷೆಗಳು ನಡೆಯಲಿವೆ.

ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ ಎಕ್ಸ್‌ಪ್ರೆಸ್ ವೇಗಳ ಜೊತೆ ರೈಲು ಮಾರ್ಗ; ಕೇಂದ್ರ ಹೊಸ ಚಿಂತನೆ

35,208 ತಾಂತ್ರಿಕೇತರ ಹುದ್ದೆಗಳು, 1,663 ಐಸೋಲೇಟೆಡ್ & ಮಿನಿಸ್ಟಿರಿಯಲ್ ದರ್ಜೆಯ ಹುದ್ದೆ, 1,03,769 1ನೇ ವರ್ಗದ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಹುದ್ದೆಗಳಿಗಾಗಿ ಕೋಟ್ಯಾಂತರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.

ಡಿಸೆಂಬರ್ 15ರಿಂದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿ, ಮುಂದಿನ ಹಂತಕ್ಕಾಗಿ ಕಳಿಸಲಾಗಿದೆ.

English summary
Railway Recruitment Board (RRB) invited applications for 1.4 lakh post. 2.4 crore applications received. Exam will be held on December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X