ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ

|
Google Oneindia Kannada News

ಕಾರವಾರ, ಸೆಪ್ಟೆಂಬರ್ 11: ಉತ್ತರ ಕನ್ನಡ ಜಿಲ್ಲೆಯ 11 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಇರುವ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಮಹಿಳಾ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 14, 2021 ರವರೆಗೆ ಅವಕಾಶ ನೀಡಲಾಗಿದೆ.

ಹುದ್ದೆಗಳ ಹೆಸರು
ಅಂಗನವಾಡಿ ಕಾರ್ಯಕರ್ತೆ
ಅಂಗನವಾಡಿ ಸಹಾಯಕಿ

Recruitment Of 11 Anganawadi Posts In Uttara Kannada District

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-09-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-10-2021ರ ಸಂಜೆ 5-30ರವರೆಗೆ
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://anganwadirecruit.kar.nic.in/

ವಿದ್ಯಾರ್ಹತೆ
ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 10ನೇ ತರಗತಿ ಪಾಸ್.
ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಪಾಸ್‌. ಗರಿಷ್ಟ 9ನೇ ತರಗತಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಯಾವುದೇ ಹುದ್ದೆಗಳಿಗೆ 10ನೇ ತರಗತಿ ನಂತರ ಹೆಚ್ಚಿನ ಶಿಕ್ಷಣ ಪಡೆದವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ವಯೋಮಿತಿ:
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು.

ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?
anganwadirecruit.kar.nic.in ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ.
ನೇಮಕಾತಿ ಬಯಸುವ ಜಿಲ್ಲೆ ಮತ್ತು ನೇಮಕಾತಿ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ, "ಸಲ್ಲಿಸಿ' ಎಂಬಲ್ಲಿ ಕ್ಲಿಕ್ ಮಾಡಿ.
ತೆರೆದ ಹೊಸ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ಟೈಪಿಸಿ ಅರ್ಜಿ ಸಲ್ಲಿಸಬಹುದು. ಪ್ರಮಾಣ ಪತ್ರಗಳನ್ನು ಆಯಾ ಹೆಸರಿನ ಮುಂದೆ ಇರುವ ಆಯ್ಕೆ ಬಟನ್‌ ಕ್ಲಿಕ್‌ ಮಾಡಿ ಅಪ್‌ಲೋಡ್ ಮಾಡಬೇಕು.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
1. ಜನನ ಪ್ರಮಾಣ ಪತ್ರ / ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.

2. ವಾಸಸ್ಥಳ ದೃಢೀಕರಣ ಪತ್ರ.

3. ವಿದ್ಯಾರ್ಹತೆ ಬಗ್ಗೆ ಪ್ರಮಾಣ ಪತ್ರ.

4. ಅಂಗನವಾಡಿ ಕಾರ್ಯಕರ್ತೆ ನೇಮಕಾತಿಗಳಲ್ಲಿ ವಿಕಲಚೇತನರಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.

5. ಮೀಸಲಾತಿ ಮತ್ತು ಜಾತಿ ಪ್ರಮಾಣ ಪತ್ರ.

6. ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ.

7. ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ.

8. ಯೋಜನಾ ನಿರಾಶ್ರಿತರಾಗಿದ್ದಲ್ಲಿ ಪ್ರಮಾಣ ಪತ್ರ.

9. ವಿಚ್ಛೇದಿತರಾಗಿದ್ದಲ್ಲಿ ಪ್ರಮಾಣ ಪತ್ರ.

10. ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ.

English summary
Applications have been invited to fill the vacancies in the Anganwadi Centers in 11 Child Development Schemes in Uttara Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X