ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ವಿವಿಧ ಜಿಲ್ಲೆಯಲ್ಲಿ ಸಮಾಲೋಚಕರ ಹುದ್ದೆ ಖಾಲಿ ಇದೆ

|
Google Oneindia Kannada News

ಬೆಂಗಳೂರು, ಮೇ 26 : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಅಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

Recommended Video

ದೇವಸ್ಥಾನಕ್ಕೆ ಹೋಗ್ಬೆಕಾಗಿಲ್ಲ ಇನ್ಮುಂದೆ ದೇವ್ರೇ ನಿಮ್ಮ ಮನೆಗೆ ಬರ್ತಾನೆ | Oneindia Kannada

ಸ್ವಚ್ಛ ಭಾರತ್ ಮಿಷನ್ (ಗಾಮೀಣ) ಕೇಂದ್ರ ಕಚೇರಿ ಮತ್ತು ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ ಪಂಚಾಯತ್ ರಾಜ್ ಇಲಾಖೆ ನೇಮಕಾತಿ; 7000 ಹುದ್ದೆ

ಎಲ್ಲಾ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿವೆ. ಒಂದು ವರ್ಷದ ಗುತ್ತಿಗೆ ಅವಧಿ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ನಂತರ ಕಾಲಕಾಲಕ್ಕೆ ಅವರ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿ ನವೀಕರಿಸಲಾಗುತ್ತದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಸಂದರ್ಶನ ರದ್ದು

ನೈರ್ಮಲ್ಯ ಅಭಿಯಂತರರು, ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಕಡ್ಡಾಯವಾಗಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವ 3 ಆದ್ಯತೆಯ ಜಿಲ್ಲೆಗಳನ್ನು ನೀಡುವುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪೊಲೀಸ್ ನೇಮಕಾತಿ; ಹುದ್ದೆಗಳ ವಿವರಗಳು ಕರ್ನಾಟಕ ಪೊಲೀಸ್ ನೇಮಕಾತಿ; ಹುದ್ದೆಗಳ ವಿವರಗಳು

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ದಾಖಲೆ ತಜ್ಞರು 1, ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ತಜ್ಞರು 1, ಮಾಹಿತಿ ನಿರ್ವಹಣಾ ವ್ಯವಸ್ಥೆ ತಜ್ಞರು 1, ನೈರ್ಮಲ್ಯ ಅಭಿಯಂತರರು 1, ಜಿಲ್ಲಾ ಯೋಜನಾ ವ್ಯವಸ್ಥಾಪಕ 30 ಮತ್ತು ಜಿಲ್ಲಾ ಎಂಐಎಸ್ ಸಮಾಲೋಕಚರು 32 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷ ಮೀರಿರಬಾರದು. ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣ ಮುಖಾಂತರ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

ಆಯ್ಕೆಯಾದ ಅಭ್ಯರ್ಥಿಯುವ ನಿಗದಿತ ನಮೂನೆಯಲ್ಲಿ ಕರಾರು ಒಪ್ಪಂದವನ್ನು ಮಾಡಿಕೊಳ್ಳಬೇಕು ಹಾಗೂ ಅನುಭವದ ಆಧಾರದ ಮೇಲೆ ಮಾಸಿಕ ಸಮಾಲೋಚನಾ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ.

ಕರಾರು ಒಪ್ಪಂದ ಮಾಡಿಕೊಂಡ ಅಭ್ಯರ್ಥಿಗೆ ಇಲಾಖೆಯಲ್ಲಿನ ಯಾವುದೇ ಹುದ್ದೆಗಳಲ್ಲಿ ವಿಲೀನಗೊಳ್ಳಲು/ಮುಂದುವರೆಯಲು ಯಾವುದೇ ಹಕ್ಕು ಇರುವುದಿಲ್ಲ.

ಸಂದರ್ಶನ ನಡೆಸಲಾಗುತ್ತದೆ

ಸಂದರ್ಶನ ನಡೆಸಲಾಗುತ್ತದೆ

ಶಾರ್ಟ್‌ ಲಿಸ್ಟ್ ಆದ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಕೇಂದ್ರ ಕಚೇರಿ ಹಾಗೂ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವಿಡಿಯೋ ಸಂವಾದದ ಮೂಲಕ ನಡೆಸಲಾಗುತ್ತದೆ. ನಿಗದಿಪಡಿಸಿದ ದಿನಾಂಕ, ಸಮಯಕ್ಕೆ ಅಭ್ಯರ್ಥಿಗಳು ಹಾಜರಾಗಬೇಕು.

ನೇಮಕಾತಿಯನ್ನು ಪೂರ್ಣವಾಗಿ ಮತ್ತು ಭಾಗಶಃ ರದ್ದು ಮಾಡುವ/ಮುಂದೂಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ. ಜಿಲ್ಲಾವಾರು ಖಾಲಿ ಇರುವ ಹುದ್ದೆಗಳ ಸಂಖ್ಯೆಯು ಹೆಚ್ಚು ಕಡಿಮೆ ಆಗಬಹುದು.

ಹುದ್ದೆಯು ಜಿಲ್ಲಾಮಟ್ಟದ್ದಾಗಿರುವುದರಿಂದ ಆಯ್ಕೆಯಾದ ಅಭ್ಯರ್ಥಿ ಜಿಲ್ಲಾ ಮಟ್ಟದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವುದು ಹೇಗೆ?

http://rdpr.kar.nic.in/ ವೆಬ್ ಸೈಟ್‌ನಲ್ಲಿ ಅರ್ಜಿಗಳು ಲಭ್ಯವಿದೆ. ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ನಿಗದಿತ ನಮೂನೆಯಲ್ಲಿ ತುಂಬಿ ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, ರೆಸ್ಯೂಮ್ ಅರ್ಜಿ ಜೊತೆಗೆ ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತವಾಗಿದ್ದೇನೆ ಎಂಬುದನ್ನು ಒಂದು ಟಿಪ್ಪಣೆ ಬರೆದು ಕಳಿಸಬೇಕು.

ಅರ್ಜಿ ಕಳಿಸಲು ವಿಳಾಸ : ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯಇಲಾಖೆ, 2ನೇ ಮಹಡಿ, ಕೆ. ಹೆಚ್‌. ಬಿ. ಕಟ್ಟಡ, ಕಾವೇರಿ ಭವನ, ಕೆ. ಜಿ. ರಸ್ತೆ, ಬೆಂಗಳೂರು 56009 ಇಲ್ಲಿಗೆ ತಲುಪುವಂತೆ 9/6/2020ರ ಸಂಜೆ 5.30ರೊಳಗೆ ಸಲ್ಲಿಸಬೇಕು.

English summary
Rural drinking water and sanitation department hiring eligible and dynamic consultants on consultancy basis. Candidates can apply before 9/6/2020 5.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X