ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯಲ್ಲಿ ಕೆಲಸ ಬೇಕೆ? 89 ಸಾವಿರ ಹುದ್ದೆ ನಿಮಗಾಗಿ

By Prasad
|
Google Oneindia Kannada News

Recommended Video

ರೈಲ್ವೆ ಇಲಾಖೆಯಲ್ಲಿ 89,000 ಹುದ್ದೆಗಳು ನಿಮಗಾಗಿ ಕಾಯುತ್ತಿವೆ | Oneindia Kannada

ಬೆಂಗಳೂರು, ಫೆಬ್ರವರಿ 15 : ಹೈಸ್ಕೂಲ್ ಪಾಸಾದವರಿಂದ ಹಿಡಿದು ಇಂಜಿನಿಯರಿಂಗ್ ಪದವಿ ಪಡೆದವರವರೆಗೆ 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ತಿಯಾಗಬೇಕಿವೆ. ಹುದ್ದೆಗಳು ನಿಮಗಾಗಿ ಕಾದಿವೆ, ನಮ್ಮ ಯಾನದೊಂದಿಗೆ ನಿಮ್ಮ ಜೀವನವೂ ಆರಂಭಗೊಳ್ಳಲಿ.

ಹೀಗೆಂದು ಸಂದೇಶವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲು ಸಚಿವ ಪಿಯೂಶ್ ಗೋಯಲ್ ಅವರು ಭಾರತದ ಜನತೆಗೆ ಟ್ವಿಟ್ಟರ್ ಮೂಲಕ ನೀಡಿದ್ದಾರೆ. ಫೆಬ್ರವರಿ 10ರಂದು ಈ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸಲಾಗಿದೆ.

ರೈಲ್ವೆಯಲ್ಲಿ 62907 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನರೈಲ್ವೆಯಲ್ಲಿ 62907 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ರೈಲು ಇತಿಹಾಸದಲ್ಲೇ ಅತೀದೊಡ್ಡದಾದ ಉದ್ಯೋಗಮೇಳ ನಡೆಯುತ್ತಿದ್ದು, ಗ್ರೂಪ್ ಸಿ ಮತ್ತು ಡಿ ಸೇರಿದಂತೆ, ಲೋಕೋ ಪೈಲಟ್, ತಂತ್ರಜ್ಞರು, ಗ್ಯಾಂಗ್ ಮೆನ್, ಸ್ವಿಚ್ ಮೆನ್, ಟ್ರಾಕ್ ಮೆನ್, ಕ್ಯಾಬಿನ್ ಮೆನ್, ವೆಲ್ಡರ್ಸ್, ಹೆಲ್ಪರ್ಸ್, ಪೋರ್ಟರ್ಸ್ ಮುಂತಾದ 89,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಡಿ ಉದ್ಯೋಗಿಗಳಿಗೆ 62,907 ಹುದ್ದೆಗಳನ್ನು ಮೀಸಲಿಡಲಾಗಿದೆ.

ಹೆಸರು ಹೇಳಲಿಚ್ಛಿಸದ ಅಧಿಕಾರಿಯ ಪ್ರಕಾರ, ಭದ್ರತಾ ವಿಭಾಗದಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯಲಿದ್ದು, ಹೆಚ್ಚುವರಿ ನೇಮಕಾತಿಯಿಂದ ರೈಲ್ವೆ ಇಲಾಖೆಯ ಬೊಕ್ಕಸಕ್ಕೆ 3 ಸಾವಿರದಿಂದ 4 ಸಾವಿರ ಕೋಟಿ ರುಪಾಯಿ ಹೊರೆ ಬೀಳಲಿದೆ. 2018-19ರ ಬಜೆಟ್ಟಿನಲ್ಲಿ ರೈಲ್ವೆ ನೇಮಕಾತಿಗೆ ಅನುಮೋದನೆಯನ್ನೂ ನೀಡಲಾಗಿದೆ.

ಭದ್ರತಾ ವಿಭಾಗದಲ್ಲಿಯೇ 1 ಲಕ್ಷ 22 ಸಾವಿರ ಹುದ್ದೆಗಳು ಖಾಲಿಯಿದ್ದು, ಪ್ರತಿವರ್ಷ 40 ಸಾವಿರದಿಂದ 50 ಸಾವಿರ ಉದ್ಯೋಗಿಗಳು ನಿವೃತ್ತಿಯಾಗುತ್ತಾರೆ. ಇದೇ ಹಣಕಾಸು ವರ್ಷದಲ್ಲಿ 56 ಸಾವಿರ ಉದ್ಯೋಗಿಗಳು ನಿವೃತ್ತಿಯಾಗಲಿದ್ದಾರೆ. ಈ ಹುದ್ದೆಗಳನ್ನು ಪರ್ಮನೆಂಟ್ ಬದಲು ಕಾಂಟ್ರಾಕ್ಟ್ ಆಧಾರದ ಮೇಲೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

ವಿದ್ಯಾರ್ಹತೆ ಏನು, ಸಂಬಳ ಮತ್ತು ಭತ್ಯೆ ಎಷ್ಟು

ವಿದ್ಯಾರ್ಹತೆ ಏನು, ಸಂಬಳ ಮತ್ತು ಭತ್ಯೆ ಎಷ್ಟು

ಎಸ್ಸೆಸ್ಸೆಲ್ಸಿ ಪಾಸಾದವರು, ಐಟಿಐ ಡಿಪ್ಲೋಮಾ ಪಡೆದವರು ಗ್ರೂಪ್ ಡಿ ಹುದ್ದೆಗೆ ಅರ್ಜಿ ಗುಜರಾಯಿಸಬಹುದು. ಈ ಪರೀಕ್ಷೆಯನ್ನು ತೆಗೆದುಕೊಂಡು ಇನ್ನೂ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹುದ್ದೆಗೆ ಆಯ್ಕೆಯಾದವರು ಏಳನೇ ಕೇಂದ್ರ ವೇತನ ಆಯೋಗ(ಹಂತ 1)ದ ಪ್ರಕಾರ ತಿಂಗಳಿಗೆ 18 ಸಾವಿರ ರುಪಾಯಿ ಸಂಬಳ ಮತ್ತು ಭತ್ಯೆ ದೊರೆಯಲಿದೆ.

ಯಾರು ಅರ್ಜಿ ಹಾಕಬಹುದು?

ಯಾರು ಅರ್ಜಿ ಹಾಕಬಹುದು?

ನೇಮಕಾತಿಯನ್ನು ರೈಲ್ವೆ ರಿಕ್ರ್ಯೂಟ್ಮೆಂಟ್ ಸೆಲ್ ನಡೆಸಲಿದ್ದು, 18ರಿಂದ 31 ವರ್ಷದೊಳಗಿನ ಅರ್ಹ ಉದ್ಯೋಗಾರ್ಥಿಗಳು ಗ್ರೂಪ್ ಡಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರಿಗೆ ಮತ್ತಿತರ ವಿಭಾಗದವರಿಗೆ ವಯೋಮಿತಿಯ ರಿಯಾಯಿತಿಯನ್ನೂ ನೀಡಲಾಗಿದೆ.

ಕಡೆಯ ದಿನಾಂಕ ಮಾರ್ಚ್ 12

ಕಡೆಯ ದಿನಾಂಕ ಮಾರ್ಚ್ 12

ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 12. ಗ್ರೂಪ್ ಡಿ ಹುದ್ದೆಯ ಜೊತೆಗೆ ಗ್ರೂಪ್ ಸಿ ವಿಭಾಗದಲ್ಲಿ 26,502 ಹುದ್ದೆಗಳು ಕೂಡ ಭರ್ತಿಯಾಗಲಿವೆ. ಇದಕ್ಕೂ ಕೂಡ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಮಾರ್ಚ್ 12.

ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ

ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ

ಅರ್ಹತೆ ಇರುವ ಉದ್ಯೋಗಾರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಸರ್ಟಿಫಿಕೇಟ್ ಆಗಲಿ, ಅರ್ಜಿಯನ್ನಾಗಲಿ ಪ್ರಿಂಟೌಟ್ ತೆಗೆದುಕೊಂಡು ಕಳಿಸುವ ಅಗತ್ಯವಿಲ್ಲ. ಅಲ್ಲದೆ, ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ ಸರಿಯಾಗಿರಬೇಕು. ಮಾಹಿತಿ ಸರಿಯಾಗಿರದಿದ್ದ ಪಕ್ಷ ಅರ್ಜಿಯನ್ನು ತಿರಸ್ಕರಿಸಲಾಗುವುದು.

ಕನ್ನಡ ಭಾಷೆಯ ಆಯ್ಕೆ ನೀಡಲಾಗಿದೆ

ಕನ್ನಡ ಭಾಷೆಯ ಆಯ್ಕೆ ನೀಡಲಾಗಿದೆ

ಅರ್ಜಿ ಮತ್ತು ಎಲ್ಲ ಪ್ರಮಾಣಪತ್ರಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿಯೇ ಇರಬೇಕು. ಬೇರೆ ಭಾಷೆಯಲ್ಲಿದ್ದರೆ ಅವರನ್ನು ಇಂಗ್ಲಿಷ್ ಅಥವಾ ಹಿಂದಿಗೆ ಬದಲಾಯಿಸಿ, ಸೆಪ್ಫ್ ಅಟೆಸ್ಟ್ ಮಾಡಿದ ಕಾಪಿ ನೀಡಬೇಕು. ಆದರೆ, ಬೆಂಗಳೂರು ಕೇಂದ್ರದವರಿಗೆ ಕನ್ನಡದ ಆಯ್ಕೆ ನೀಡಿರುವುದು ಸ್ವಾಗತಾರ್ಹ. ಬೆಂಗಳೂರಿನಲ್ಲಿ ಪರೀಕ್ಷೆ ಬರೆಯುವವರು ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಕೊಂಕಣಿ ಭಾಷೆಯನ್ನು ಆಯ್ಕೆ ಮಾಡಬಹುದು. ಮುಂಬೈ, ಸಿಕಂದ್ರಾಬಾದ್ ನಲ್ಲಿ ಪರೀಕ್ಷೆ ತೆಗೆದುಕೊಳ್ಳುವವರು ಕೂಡ ಕನ್ನಡ ಆಯ್ಕೆ ಮಾಡಬಹುದು.

ಪರೀಕ್ಷೆ ಯಾವ ರೀತಿ ನಡೆಸಲಾಗುತ್ತದೆ?

ಪರೀಕ್ಷೆ ಯಾವ ರೀತಿ ನಡೆಸಲಾಗುತ್ತದೆ?

ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು, ಇದರಲ್ಲಿ ಪಾಸಾದವರು ದೈಹಿಕ ಸಕ್ಷಮತೆಯ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕು. ಕಂಪ್ಯೂಟರ್ ಆದಾರಿತ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳೂ ಇರಲಿದ್ದು, ಪ್ರಶ್ನೆಗೆ ತಪ್ಪು ಉತ್ತರ ನೀಡಿದಲ್ಲಿ ಮೂರನೇ ಒಂದಂಶ ಅಂಕವನ್ನು ಕಡಿಯಲಾಗುವುದು.

ಬೆಂಗಳೂರಿನಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ

ಬೆಂಗಳೂರಿನಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ

ಬೆಂಗಳೂರಿನಲ್ಲಿ ಒಟ್ಟು 2293 ಹುದ್ದೆಗಳು ಖಾಲಿಯಿದ್ದು, ಮೀಸಲಾತಿ ಇಲ್ಲದ ಜನರಲ್ ಉದ್ಯೋಗಾರ್ಥಿಗಳಿಗೆ 1184, ಪರಿಶಿಷ್ಟ ಜಾತಿಗೆ 346 ಮತ್ತು ಪರಿಶಿಷ್ಟ ಪಂಗಡದವರಿಗೆ 167 ಮತ್ತು ಹಿಂದುಳಿದ ವರ್ಗದವರಿಗೆ 596 ಹುದ್ದೆಗಳನ್ನು ಮೀಸಲಿಡಲಾಗಿದೆ. ಮಾಜಿ ಸೈನಿಕರಿಗೆ ಮತ್ತು ಇತರೆ ವಿಭಾಗದಲ್ಲೂ ಕೆಲ ಹುದ್ದೆಗಳಿವೆ.

English summary
Indian Railways to hire 89,000 Group C and D employees, including assistant loco pilots, technicians, gangmen, switchmen, trackmen, cabinmen, welders, helpers and porters. In Bengaluru also more than 2 thousand vacancies are open. March 12 is the last date to submit application.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X