ಆಗ್ನೇಯ ರೈಲ್ವೆ ವಿಭಾಗದಲ್ಲಿ ಭರ್ಜರಿ ಉದ್ಯೋಗ ಅವಕಾಶ
ನವದೆಹಲಿ, ಮೇ 15: ಭಾರತೀಯ ರೈಲ್ವೆ ಇಲಾಖೆಯಿಂದ 2022ರಿಂದ ನೇಮಕಾತಿ ಮುಂದುವರೆಸಿದೆ. ಆಗ್ನೇಯ ರೈಲ್ವೆ ಕೇಂದ್ರೀಯ ವಿಭಾಗ(SECR) ನಾಗ್ಪುರ್ ಕೇಂದ್ರದಿಂದ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಜೂನ್ 03, 2022ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಆಗ್ನೇಯ ರೈಲ್ವೆ ಕೇಂದ್ರೀಯ ವಿಭಾಗ(SECR)
ಹುದ್ದೆ ಹೆಸರು: ಟ್ರೇಡ್ ಅಪ್ರೆಂಟಿಸ್ ಹುದ್ದೆ
ಒಟ್ಟು ಹುದ್ದೆ: 1044
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 03, 2022
ವೇತನ ಶ್ರೇಣಿ: ಅಪ್ರೆಂಟಿಸ್ ನಿಯಮಾವಳಿಗೆ ಅನ್ವಯ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ಉದ್ಯೋಗ ಅವಕಾಶ
ಒಟ್ಟು ಹುದ್ದೆ:
ನಾಗ್ಪುರ್ ವಿಭಾಗ: 980
ಮೋತಿ ಬಾಗ್ ವರ್ಕ್ ಶಾಪ್ ನಾಗ್ಪುರ್: 64
ಒಟ್ಟು: 696
ವಿದ್ಯಾರ್ಹತೆ
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10 ಪರೀಕ್ಷೆ, 10+2 ಪರೀಕ್ಷೆಯಲ್ಲಿ ಪಾಸಾಗಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಪಟ್ಟ ಟ್ರೇಡ್ ಜೊತೆಗೆ ಐಟಿಐ ಕೋರ್ಸ್ ಮುಗಿಸಿರಬೇಕು.
ವಯೋಮಿತಿ: 15 ವರ್ಷ ರಿಂದ 24 ವರ್ಷ
ಅರ್ಜಿ ಸಲ್ಲಿಸುವ ವಿಧಾನ: ಆಗ್ನೇಯ ರೈಲ್ವೆ ಕೇಂದ್ರೀಯ ವಿಭಾಗ(SECR) ನಾಗ್ಪುರ್ ಕೇಂದ್ರದಲ್ಲಿ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ (secr.indianrailways.gov.in) ಕ್ಕೆ ಭೇಟಿ ಕೊಡಿ. ಸಂಬಂಧಪಟ್ಟ ಟ್ರೇಡ್ ಆಯ್ಕೆ ಮಾಡಿಕೊಳ್ಳಿ, ಅಗತ್ಯ ದಾಖಲೆ ಒದಗಿಸಿ, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಿ.
ಆಗ್ನೇಯ ರೈಲ್ವೆ ಕೇಂದ್ರೀಯ ವಿಭಾಗದ ಟ್ರೇಡ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ
ಆನ್ ಲೈನ್ ಅರ್ಜಿ ಸಲ್ಲಿಸಲು ಸಲ್ಲಿಸಲು ಆರಂಭ ದಿನಾಂಕ: ಮೇ 4, 2022
ಆನ್ ಲೈನ್ ಅರ್ಜಿ ಸಲ್ಲಿಸಲು ಸಲ್ಲಿಸಲು ಕೊನೆ ದಿನಾಂಕ: ಜೂನ್ 03, 2022
ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಆಯ್ಕೆಯು ಕೌಶಲ್ಯ, ವಿದ್ಯಾರ್ಹತೆ ಆಧಾರದ ಮೇಲೆ ಆಯ್ಕೆ.
ಅರ್ಜಿ ಸಲ್ಲಿಸುವ ವಿಧಾನ:
* South East Central Railway ನೇಮಕಾತಿ ಅಧಿಸೂಚನೆ 2022ರಲ್ಲಿ ನೀಡಿರುವಂಥ ವಿಭಾಗದ ಪ್ರಕಟಣೆಯನ್ನು ತಪ್ಪದೇ ಓದಿ ನಂತರ ಅರ್ಜಿ ಭರ್ತಿ ಮಾಡಿ
* ಅರ್ಹತೆ ಇದ್ದ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. ಇದಕ್ಕೂ ಮೊದಲು ನೋಂದಯಿಸಿಕೊಂಡು ಲಾಗಿನ್ ಆಗುವುದು ಅಗತ್ಯ.
* ಆನ್ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಐಟಿಐ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* ರೈಲ್ವೆ ವೆಬ್ ತಾಣದಲ್ಲಿ ಸಂಬಂಧಪಟ್ಟ ಹುದ್ದೆಯ ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ