ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಐ ನೇಮಕಾತಿ; ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಲಿದೆ ಸರ್ಕಾರ

|
Google Oneindia Kannada News

ಬೆಂಗಳೂರು, ಫೆಬ್ರವರಿ 02 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಪಿಎಸ್‌ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ವಯೋಮಿತಿಯನ್ನು ಎರಡು ವರ್ಷಗಳಿಗೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ.

ಕರ್ನಾಟಕ ರಾಜ್ಯ ಪೊಲೀಸ್ ನಿಯಮಗಳು 2003ಕ್ಕೆ ತಿದ್ದುಪಡಿ ತಂದು ಪಿಎಸ್‌ಐ ಹುದ್ದೆ ನೇಮಕಾತಿಗೆ ನಿಗದಿ ಪಡಿಸಲಾಗಿರುವ ಗರಿಷ್ಠ ವಯೋಮಿತಿಯನ್ನು 2 ವರ್ಷಕ್ಕೆ ಹೆಚ್ಚಿಸಲಾಗುತ್ತದೆ. ಇದರಿಂದಾಗಿ ಪಿಎಸ್‌ಐ ಹುದ್ದೆಯ ಆಕಾಂಕ್ಷಿಗಳ ಬಹು ವರ್ಷಗಳ ಬೇಡಿಕೆಗೆ ಮನ್ನಣೆ ಸಿಕ್ಕಿದೆ.

ಕೆಪಿಎಸ್‌ಸಿ ನೇಮಕಾತಿ; 1112 ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಕೆಪಿಎಸ್‌ಸಿ ನೇಮಕಾತಿ; 1112 ಎಫ್‌ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರದ (ಒಳಾಡಳಿತ) ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲ್ ಅಧ್ಯಕ್ಷತೆಯಲ್ಲಿ ನಡೆದ ವೃಂದ ಪರಿಶೀಲನಾ ಉಪ ಸಮಿತಿ ಸಭೆಯಲ್ಲಿ ವಯೋಮಿತಿ ಮರು ನಿಗದಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಈ ಕುರಿತು ಶಿಫಾರಸು ಮಾಡಲಾಗಿದೆ.

ಕೋಲಾರದಲ್ಲಿ ಫೆಬ್ರವರಿ 11, 12ರಂದು ಉದ್ಯೋಗ ಮೇಳ ಕೋಲಾರದಲ್ಲಿ ಫೆಬ್ರವರಿ 11, 12ರಂದು ಉದ್ಯೋಗ ಮೇಳ

ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯನ್ನು ಸಹ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲಿಗೆ ಲಿಖಿತ ಪರೀಕ್ಷೆ, ನಂತರ ದೈಹಿಕ ಪರೀಕ್ಷೆ ಬಳಿಕ ಸಂದರ್ಶನ ನಡೆಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಈಗ ಮೊದಲು ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಯುತ್ತಿದೆ.

ನೂತನ ಡಿಜಿ & ಐಜಿಪಿ ಪ್ರವೀಣ್ ಸೂದ್ ಪರಿಚಯ ನೂತನ ಡಿಜಿ & ಐಜಿಪಿ ಪ್ರವೀಣ್ ಸೂದ್ ಪರಿಚಯ

ವಯೋಮಿತಿ ಬದಲಾವಣೆ ಏಕೆ?

ವಯೋಮಿತಿ ಬದಲಾವಣೆ ಏಕೆ?

ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಬೇರೆ ರಾಜ್ಯಗಳ ಮಾದರಿಯಲ್ಲಿ ವಯೋಮಿತಿಯನ್ನು ಹೆಚ್ಚಳ ಮಾಡಲಾಗುತ್ತದೆ. ಉತ್ತರ ಪ್ರದೇಶ, ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಯೋಮಿತಿ 33 ರಿಂದ 40 ವರ್ಷಗಳ ತನಕ ಇದೆ. ನಮ್ಮ ರಾಜ್ಯದಲ್ಲಿ ವಯೋಮಿತಿ ಕಡಿಮೆ ಇರುವುದರಿಂದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಾದವಿದೆ.

ಪ್ರಸ್ತುತ ವಯೋಮಿತಿ

ಪ್ರಸ್ತುತ ವಯೋಮಿತಿ

ಕರ್ನಾಟಕದಲ್ಲಿ ಪ್ರಸ್ತುತ ಸಾಮಾನ್ಯ ವರ್ಗಕ್ಕೆ 28, ಎಸ್‌ಸಿ/ಎಸ್‌ಟಿಗೆ 30, ಒಬಿಸಿಗೆ 30 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಜನವರಿ 21ರಂದು ನಡೆದ ವೃಂದ ಪರಿಶೀಲನಾ ಉಪ ಸಮಿತಿ ಸಭೆಯಲ್ಲಿ ವಯೋಮತಿಯನ್ನು ಸಾಮಾನ್ಯ ವರ್ಗಕ್ಕೆ 30, ಎಸ್‌ಸಿ/ಎಸ್‌ಟಿ 32, ಒಬಿಸಿ ವರ್ಗಕ್ಕೆ 32 ವರ್ಷದ ವಯೋಮಿತಿಯನ್ನು ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಕರ್ನಾಟಕ ನಾಗರಿಕ ಸೇವೆಗಳ ನಿಯಮ 1997ರ ಪ್ರಕಾರ (ಸಾಮಾನ್ಯ ನೇಮಕಾತಿ) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ವರ್ಷ ತುಂಬಿರಬೇಕು ಎಂಬ ನಿಯಮವಿತ್ತು. 2004ರ ಡಿಸೆಂಬರ್ 23ರಂದು ತಿದ್ದುಪಡಿ ತಂದು ಸಾಮಾನ್ಯ ವರ್ಗಕ್ಕೆ 24, ಎಸ್‌ಸಿ/ಎಸ್‌ಟಿ/ಹಿಂದುಳಿದ ವರ್ಗಕ್ಕೆ 26 ವರ್ಷದ ವಯೋಮಿತಿ ನಿಗದಿ ಮಾಡಲಾಯಿತು.

2009ರಲ್ಲಿ ತಿದ್ದುಪಡಿ

2009ರಲ್ಲಿ ತಿದ್ದುಪಡಿ

2014ರ ಆಗಸ್ಟ್‌ನಲ್ಲಿ ಸರ್ಕಾರ ನೇಮಕಾತಿ ವಯೋಮಿತಿಯನ್ನು ಮತ್ತೆ ಹೆಚ್ಚಳ ಮಾಡಿತು. ಸಾಮಾನ್ಯ ವರ್ಗಕ್ಕೆ 28, ಎಸ್‌ಸಿ/ಎಸ್‌ಟಿ/ಹಿಂದುಳಿದ ವರ್ಗಕ್ಕೆ 30 ವರ್ಷ ನಿಗದಿ ಮಾಡಲಾಯಿತು. 2015ರಲ್ಲಿ ಇದೇ ವಯೋಮಿತಿ ಆಧಾರದಲ್ಲಿ ನೇಮಕಾತಿ ನಡೆಯಿತು.

English summary
Karnataka government may increase age limit to 2 years for the recruitment of Police Sub Inspector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X