ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಬದಲಿಸುವುದು ಏಕೆ? ವೇತನ ಹೆಚ್ಚಳವೋ ಸಮಯದ ಕಾರಣವೋ?

|
Google Oneindia Kannada News

ಬೆಂಗಳೂರು, ಏಪ್ರಿಲ್ 27 : ಶೇಕಡಾ 80ರಷ್ಟು ಭಾರತೀಯ ಉದ್ಯೋಗಿಗಳು ಸಂಬಳ ಹೆಚ್ಚು ಸಿಗುತ್ತದೆ ಎಂಬ ಕಾರಣಕ್ಕೆ ಕೆಲಸ ಬದಲಿಸುತ್ತಾರೆ ಹಾಗೂ ಶೇ 60ರಷ್ಟು ಮಂದಿ ಸಂಬಳದ ಹೊರತಾಗಿ ಕೆಲಸದ ಸಮಯ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಉದ್ಯೋಗ ಬದಲಿಸುತ್ತಾರೆ ಎಂಬ ಅಂಶವನ್ನು ಹೊಸ ವರದಿಯೊಂದು ಶುಕ್ರವಾರ ಬಯಲು ಮಾಡಿದೆ.

ಅಮೆರಿಕ ಮೂಲದ ಉದ್ಯೋಗದ ಸರ್ಚ್ ಎಂಜಿನ್ ಪ್ರಕಾರ, ಸದ್ಯಕ್ಕೆ ಇಪ್ಪತ್ತೈದರಿಂದ ಮೂವತ್ನಾಲ್ಕರ ವಯೋಮಾನದಲ್ಲಿ ಇರುವವರು ಶೇ 83ರಷ್ಟು ಮಂದಿ ವೇತನ ಹೆಚ್ಚಳಕ್ಕಾಗಿಯೇ ಕೆಲಸ ಬದಲಿಸುವುದಾಗಿ ಹೇಳಿದ್ದಾರೆ. ಶೇ 50ರಷ್ಟು ಮಂದಿ ನೀಡಿರುವ ಉತ್ತರ, ತಾವು ಸದ್ಯಕ್ಕೆ ಕೆಲಸ ನಿರ್ವಹಿಸುವ ಕಡೆಯಲ್ಲೇ ವೇತನ ಹೆಚ್ಚಳಕ್ಕೆ ಕೇಳುವುದಾಗಿ ಹೇಳಿದ್ದಾರೆ. ಏಕೆಂದರೆ ಸದ್ಯಕ್ಕೆ ಅವರು ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಸಮಾಧಾನವಿದೆ.

ಕೆಲಸ ಹುಡುಕಾಟ ಸುಲಭಗೊಳಿಸಿದ ಗೂಗಲ್ ಸರ್ಚ್ಕೆಲಸ ಹುಡುಕಾಟ ಸುಲಭಗೊಳಿಸಿದ ಗೂಗಲ್ ಸರ್ಚ್

ಇನ್ನು ಈ ಅಧ್ಯಯನದಲ್ಲಿ ಭಾಗಿಯಾಗಿದ್ದ ಶೇ 67ರಷ್ಟು ಮಹಿಳಾ ಉದ್ಯೋಗಿಗಳು ವೇತನ ಹೆಚ್ಚಳಕ್ಕೆ ಕೇಳುವುದಾಗಿ ಉತ್ತರಿಸಿದ್ದಾರೆ. ವೇತನ ಹೆಚ್ಚಳಕ್ಕೆ ಕೇಳುವುದಾಗಿ ಹೇಳಿದ ಪುರುಷ ಉದ್ಯೋಗಿಗಳ ಪ್ರಮಾಣ ಶೇ 64ರಷ್ಟಿದೆ. ಅಂದರೆ, ಸದ್ಯಕ್ಕೆ ತಮಗೆ ದೊರೆಯುತ್ತಿರುವ ವೇತನದ ಬಗ್ಗೆ ಅಸಮಾಧಾನ ಇರುವ ಉದ್ಯೋಗಿಗಳ ಪ್ರಮಾಣ ಹೆಚ್ಚಿದೆ.

Over 80 percent Indians will switch jobs for pay rise: Report

ತಮಗೆ ಪುರುಷ ಉದ್ಯೋಗಿಗಳಿಗಿಂತ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಶೇಕಡಾ 20ರಷ್ಟು ಮಹಿಳೆಯರು ಭಾವಿಸಿದರೆ, ಶೇ 9ರಷ್ಟು ಪುರುಷ ಉದ್ಯೋಗಿಗಳು ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ವೇತನದ ಏರಿಕೆ ಹೊರತಾಗಿ ಬೇರೆ ಸವಲತ್ತು ಕೊಟ್ಟರೆ ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಹಲವರು ಹೇಳಿದ್ದಾರೆ.

ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಶೇ 60ರಷ್ಟು ಮಂದಿ ವೇತನದ ಬದಲಿಗೆ ಕೆಲಸದ ಸಮಯದಲ್ಲಿ ಒಂದಿಷ್ಟು ವಿನಾಯ್ತಿ ತೋರಿಸಲಿ ಎಂದಿದ್ದರೆ, ಶೇಕಡಾ 47ರಷ್ಟು ಮಂದಿ ವಾರ್ಷಿಕ ರಜಾ ಹೆಚ್ಚು ಮಾಡಲಿ ಎಂದಿದ್ದಾರೆ. ಶೇ 40ರಷ್ಟು ಮಂದಿ ಸಂಬಳ ಸಹಿತ ಪೋಷಕತ್ವ ರಜಾದ ಅನುಕೂಲ ಮಾಡಿಕೊಡುವ ಬಗ್ಗೆ ಒಲವು ತೋರಿದರೆ, ಶೇ 63ರಷ್ಟು ಮಂದಿ ವೇತನ ಹೆಚ್ಚಳ ಮಾಡದಿದ್ದರೆ ಬದಲಿಗೆ ಆರೋಗ್ಯ ಸುರಕ್ಷತೆ ಅನುಕೂಲಗಳನ್ನು ಮಾಡಿಕೊಡಲಿ ಎಂದಿದ್ದಾರೆ.

ಆಸಕ್ತಿಕರ ಸಂಗತಿ ಏನೆಂದರೆ, ಶೇ 43ರಷ್ಟು ಮಂದಿಗೆ ವೇತನ ಏರಿಕೆ ಮಾಡಿ ಎಂದು ಕೇಳುವ ಇರಾದೆಯೇ ಇಲ್ಲವಂತೆ. ಸದ್ಯಕ್ಕೆ ಪಡೆಯುತ್ತಿರುವ ವೇತನದ ಬಗ್ಗೆ ಸಮಾಧಾನ ಇದೆಯಂತೆ.

English summary
More than 80 per cent of Indians age between 25-34 consider switching jobs for a pay rise while over 60 per cent stated flexible work hours as an alternative to a pay hike, a new report said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X