ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಸಕ್ತ ವರ್ಷದಲ್ಲೇ 1 ಲಕ್ಷಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25: ಕೊರೊನಾವೈರಸ್ ಸಾಂಕ್ರಾಮಿಕ ನಡುವೆ ವರ್ಕ್ ಫ್ರಂ ಹೋಂ, ನ್ಯೂ ನಾರ್ಮಲ್ ಎನ್ನುತ್ತಾ ಹೊಸ ಮಾದರಿ ಉದ್ಯೋಗ ವಾತಾವರಣ ಸೃಷ್ಟಿಸಿಕೊಂಡ ಐಟಿ ಕ್ಷೇತ್ರ ಈಗ ಮತ್ತೊಮ್ಮೆ ಪುಟಿದೇಳುತ್ತಿದೆ. ಹಲವು ಪ್ರಮುಖ ಕಂಪನಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಹಲವೆಡೆ ಹೈಬ್ರಿಡ್ ವರ್ಕಿಂಗ್ ವಾತಾವರಣ ಜಾರಿಯಲ್ಲಿದೆ. ಈ ಹಿಂದೆ ಘೋಷಿಸಿದಂತೆ ಪ್ರಮುಖ ಐಟಿ ಕಂಪನಿಗಳು ಪ್ರಸಕ್ತ ವರ್ಷದಲೇ 1 ಲಕ್ಷಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿಯನ್ನು ಮತ್ತೊಮ್ಮೆ ಘೋಷಿಸಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಇನ್ಫೋಸಿಸ್, ವಿಪ್ರೋ ಸಂಸ್ಥೆಗಳು ಕಳೆದ ಆರ್ಥಿಕ ವರ್ಷದಲ್ಲಿ ಬೇರೆ ಐಟಿ ಕಂಪನಿಗಳಿಗೆ ಹೋಲಿಸಿದರೆ ಶೇ 45ರಷ್ಟು ಅಧಿಕ ನೇಮಕಾತಿ ಮಾಡಿಕೊಂಡಿವೆ. ಕೊರೊನಾ ಕಾಲದಲ್ಲಿಸರ್ಕಾರಿ ಸಂಸ್ಥೆಗಳು ಸೇರಿದಂತೆ ಅನೇಕ ಸಂಸ್ಥೆಗಳು ಡಿಜಿಟಲ್ ಸೇವೆಗೆ ಹೆಚ್ಚಿನ ಬೇಡಿಕೆ ಒಡ್ಡಿದ್ದರಿಂದ ಟಾಪ್ 3 ಸಂಸ್ಥೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆದಿದೆ.

ಸಮೀಕ್ಷೆ: ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರವೇ ಮುಂದೆಸಮೀಕ್ಷೆ: ನೇಮಕಾತಿ ಪ್ರಗತಿಯಲ್ಲಿ ಬೆಂಗಳೂರು ನಗರವೇ ಮುಂದೆ

2022ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ವೇಳೆಗೆ 50,000ಕ್ಕೂ ಅಧಿಕ ನೇಮಕಾತಿ ಸಾಧ್ಯವಾಗಲಿದೆ ಈ ಮೂಲಕ ಒಟ್ಟಾರೆ, 1,02,517 ಮಂದಿ ನೇಮಕಾತಿ ಇನ್ನು ಆರು ತಿಂಗಳಲ್ಲಿ ಆಗಲಿದೆ ಎಂದು ವರದಿ ಬಂದಿದೆ.

One Lakh Freshers Recruitment by TCS, Infosys, Wipro, major IT Companies

ಕಳೆದ ಆರ್ಥಿಕ ವರ್ಷದಲ್ಲಿ 21,00 ಫ್ರೆಶರ್ಸ್ ನೇಮಕ ಮಾಡಿಕೊಳ್ಳಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿತ್ತು. ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ತನ್ನ ನೇಮಕಾತಿ ಪ್ರಕ್ರಿಯೆ ಮುಂದುವರೆಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೇ 45 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿಯನ್ನು ಘೋಷಿಸಿದೆ.

ಪ್ರಮುಖ ಐಟಿ ಕಂಪನಿಗಳ ಪೈಕಿ ಇನ್ಫೋಸಿಸ್ ಅತಿ ಹೆಚ್ಚು ಆಟ್ರಿಷನ್ ದರ ಹೊಂದಿದೆ. 12.8 % ಇದ್ದ ಆಟ್ರಿಷನ್ ದರ 20.1 % ಕ್ಕೇರಿದ್ದು, ಸೆಪ್ಟೆಂಬರ್ 30ರ ಅಂತ್ಯಕ್ಕೆ 2,79,617 ಉದ್ಯೋಗಿಗಳನ್ನು ಹೊಂದಿದೆ.

ಇನ್ಫಿಯಿಂದ ಶುಭ ಸುದ್ದಿ, 45 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿಇನ್ಫಿಯಿಂದ ಶುಭ ಸುದ್ದಿ, 45 ಸಾವಿರಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿ

ಪ್ರಸಕ್ತ ವರ್ಷದಲ್ಲಿ ಈ ಟಾಪ್ 3 ಕಂಪನಿಗಳಲ್ಲದೆ ಎಚ್‌ಸಿಎಲ್ ಟೆಕ್ ಸೇರಿದಂತೆ ಸುಮಾರು 1 ಲಕ್ಷ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ. 2021-22ರ ಆರ್ಥಿಕ ವರ್ಷದಲ್ಲಿ 40 ಸಾವಿರ ಹೊಸ ನೇಮಕಾತಿಯನ್ನು ಟಿಸಿಎಸ್ ಘೋಷಿಸಿದೆ ಅಲ್ಲದೆ, ಕೆಲ ತಿಂಗಳುಗಳಲ್ಲೇ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದಾಖಲೆಯ 5 ಲಕ್ಷ ಸಂಖ್ಯೆಗೇರಿಸಿಕೊಂಡಿತ್ತು.

''ಕಳೆದ ಆರು ತಿಂಗಳಲ್ಲಿ ಸುಮಾರು 43,000 ಹೊಸ ಪದವೀಧರರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಈ ಹಿಂದೆ ಘೋಷಿಸಿದಂತೆ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ,'' ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದಾರೆ.

ಈ ಪೈಕಿ 20,000 ರಿಂದ 22,000 ಪದವೀಧರರನ್ನು ಕಾಲೇಜ್ ಕ್ಯಾಂಪಸ್ ಗಳಿಂದ ನೇಮಕ ಮಾಡಿಕೊಳ್ಳಲು ಎಚ್ ಸಿ ಎಲ್ ಟೆಕ್ನಾಲಜೀಸ್ ಮುಂದಾಗಿದ್ದು, ಈ ವರ್ಷವೇ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸಲಿದೆ.

ಇನ್ನು ವಿಪ್ರೋ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೇಮಕಾತಿ ಮಾಡುವ ಸಂಖ್ಯೆಯನ್ನು ನಿಖರವಾಗಿ ಇನ್ನೂ ಪ್ರಕಟಿಸಿಲ್ಲ. ಆದರೆ, ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಅವರು FY22ರಲ್ಲಿ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಫ್ರೆಶರ್ಸ್ ನೇಮಕ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಸುಮಾರು 9,000ಕ್ಕೂ ಅಧಿಕ ಫ್ರೆಶರ್ಸ್ ನೇಮಕಾತಿ ದಾಖಲಿಸಿದ್ದ ವಿಪ್ರೋ ಈ ಬಾರಿ ಈ ಸಂಖ್ಯೆಯನ್ನು ಹೆಚ್ಚಿಸುವ ಭರವಸೆ ನೀಡಿದೆ.

ನೌಕ್ರಿ ಜಾಬ್ ಸ್ಪೀಕ್ ವರದಿ ಪ್ರಕಾರ, ಭಾರತದ ಔದ್ಯೋಗಿಕ ಮಾರುಕಟ್ಟೆ ಸತತವಾಗಿ ಮೂರನೇ ತಿಂಗಳು ಶೇ 57 ರಷ್ಟು ಪ್ರಗತಿ ಸಾಧಿಸಿದೆ.

ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರಲ್ಲಿ ಅತಿ ಹೆಚ್ಚು ನೇಮಕಾತಿ ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 133ರಷ್ಟು ಪ್ರಗತಿ ಕಾಣಲಾಗಿದೆ. ಬೆಂಗಳೂರು ಶೇ 133ರಷ್ಟು, ಹೈದರಾಬಾದ್ ಶೇ 110 ರಷ್ಟು, ಪುಣೆ ಶೇ 95ರಷ್ಟು ಹಾಗೂ ಚೆನ್ನೈ ಶೇ 85ರಷ್ಟು ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಕಂಡಿವೆ ಎಂದು ನೌಕ್ರಿ ವರದಿ ಮಾಡಿದೆ.

English summary
According to report, four major service providers, namely Tata Consultancy Services (TCS), Infosys, Wipro and HCL Technologies are set to recruit more than one lakh freshers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X