ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಓಲಾ

|
Google Oneindia Kannada News

ನವದೆಹಲಿ, ಅಕ್ಟೋಬರ್ 22: ಶೀಘ್ರವೇ ಓಲಾ ಕಾರ್ಸ್ 10 ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಓಲಾವು ಕಾರು ಉತ್ಪಾದನೆಯನ್ನು ಮುಂದಿನ ವರ್ಷದಿಂದ ಹೆಚ್ಚಿಸುವ ಗುರಿ ಹೊಂದಿದೆ. ಸೇಲ್ಸ್‌, ಸೇವಾ ಕೇಂದ್ರ ಸೇರಿದಂತೆ ಹಲವು ವಿಭಾಗಗಳಿಗೆ ನೇಮಕ ಮಾಡಲಾಗುತ್ತದೆ ಎಂದು ಓಲಾ ಕಾರ್ಸ್ ಸಿಇಒ ಅರುಣ್ ಸರ್ದೇಶ್ಮುಖ್ ಹೇಳಿದ್ದಾರೆ.

ಓಲಾವು ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ, ಅದರಕ್ಕೆ ಉತ್ತಮ ಸ್ಪಂದನೆಯೂ ದೊರೆತಿದೆ. ಮುಂಬರುವ ವರ್ಷದಲ್ಲಿ ಎಲೆಕ್ಟ್ರಿಕ್ ಕಾರನ್ನು ಕೂಡ ಬಿಡುಗಡೆ ಮಾಡಲಿದೆ.

Ola Cars Plans to Hire 10,000 People, Expand to 100 Cities by Next Year

ಮುಂದಿನ ಎರಡು ತಿಂಗಳುಗಳಲ್ಲಿ ಓಲಾ ಕಾರ್ಸ್ 30 ನಗರಗಳಲ್ಲಿ ಕಾರ್ಯಾಚರಿಸಲಿದೆ. ಮುಂದಿನ ವರ್ಷ 100ಕ್ಕೂ ಅಧಿಕ ನಗರಗಳಿಗೆ ವಿಸ್ತರಣೆ ಮಾಡಲಿದೆ.

ಓಲಾ ಕಾರ್ಸ್ ತನ್ನ ಮೊದಲ ತಿಂಗಳ ಕಾರ್ಯಾಚರಣೆಯಲ್ಲಿ 5 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ. ಮುಂಬರುವ ತಿಂಗಳುಗಳಲ್ಲಿ 100 ನಗರಗಳಿಗೆ ವಿಸ್ತರಿಸಲಿದ್ದೇವೆ, ಮಾರಾಟ ಹಾಗೂ ಸೇವಾ ಕೇಂದ್ರಗಳು ಸೇರಿ ಒಟ್ಟು 10 ಸಾವಿರ ಮಂದಿಗೆ ಉದ್ಯೋಗ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.

ಓಲಾ ಕಾರ್ಸ್ ದೆಹಲಿ, ಪುಣೆ, ಬೆಂಗಳೂರು, ಚೆನ್ನೈ, ಹೈದರಾಬಾದ್‌ನಲ್ಲಿ ಮಾರಾಟ ಆರಂಭಿಸಿದೆ. ಈ ವಾರಾಂತ್ಯದಲ್ಲಿ ಜೈಪುರ, ಕೋಲ್ಕತ್ತ ಹಾಗೂ ಇಂದೋರ್‌ಗೆ ವಿಸ್ತರಿಸಲಿದೆ.

ಓಲಾ ದೇಶಾದ್ಯಂತ ಸೇವಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಓಲಾವು ತನ್ನ ವಾಹನಗಳನ್ನು ಅಪ್ಲಿಕೇಷನ್‌ ಮೂಲಕ ಖರೀದಿಸುವ ಅವಕಾಶವನ್ನು ನೀಡುತ್ತದೆ. ಖರೀದಿ, ಹಣಕಾಸು, ವಿಮೆ, ನೋಂದಣಿ ಸೇರಿದಂತೆ ಎಲ್ಲಾ ವಿಷಯಗನ್ನು ಕಂಪನಿ ನಿರ್ವಹಿಸಲಿದೆ. ಓಲಾ ಕಾರು ಡ್ರೂಮ್, ಕಾರ್‌ದೇಖೋ, ಕಾರ್ಸ್ 24 ಜತೆ ಸ್ಪರ್ಧಿಸುತ್ತಿದೆ.

ಓಲಾ ದ್ವಿಚಕ್ರವಾಹನಕ್ಕೆ ಸಂಬಂಧಿಸಿದಂತೆ, ಓಲಾ ಫ್ಯೂಚರ್ ಫ್ಯಾಕ್ಟರಿಯು ಸುಮಾರು 500 ಎಕರೆ ವಿಸ್ತೀರ್ಣದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯನ್ನು ವೇಗಗೊಳಿಸಿದಾಗ 10 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಓಲಾ ಹೇಳಿದೆ.

ಓಲಾ ತನ್ನ ಮೊದಲ ಎಲೆಕ್ಟ್ರಿಕ್​ ಸ್ಕೂಟರ್ ಫ್ಯಾಕ್ಟರಿಯನ್ನು ತಮಿಳುನಾಡಿನಲ್ಲಿ ಶುರು ಮಾಡಿದಾಗ, ಕಳೆದ ವರ್ಷ 2,400 ಕೋಟಿ ಬಂಡವಾಳ ಹೂಡಿತ್ತು. ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದೆ.

ಕಂಪನಿಯು ಆರಂಭದಲ್ಲಿ 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದೊಂದಿಗೆ ಆರಂಭಿಸಿ, ಬಳಿಕ ಅದನ್ನು 20 ಲಕ್ಷಕ್ಕೆ ಏರಿಸುವುದಾಗಿ ಹೇಳಿದೆ. ಎಲ್ಲವೂ ಮಾರುಕಟ್ಟೆ ಬೇಡಿಕೆ ಮೇಲೆ ಅವಲಂಬಿತವಾಗಿದೆ.
ನಿರೀಕ್ಷಿತ ಬೇಡಿಕೆ ಮಟ್ಟ ತಲುಪಿದ ಬಳಿಕ, ಓಲಾ ಎಲೆಕ್ಟ್ರಿಕ್ ಕಂಪನಿ 1 ಕೋಟಿ ಯೂನಿಟ್​​ಗಳ ವಾರ್ಷಿಕ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಹೇಳಿಕೊಂಡಿತ್ತು. ಇದು ವಿಶ್ವದ ಒಟ್ಟು ದ್ವಿಚಕ್ರ ವಾಹನ ಉತ್ಪಾದನೆಯ ಶೇ.15ರಷ್ಟಾಗುತ್ತದೆ.

ನೀವೂ ಸಹ ಓಲಾದ ಇ-ಸ್ಕೂಟರ್ ನ ಟೆಸ್ಟ್ ಡ್ರೈವ್ ಗಾಗಿ ಕಾಯುತ್ತಿದ್ದರೆ, ನಿಮಗೆ ಸಿಹಿ ಸುದ್ದಿ ಇದೆ. ದೀಪಾವಳಿಯ ನಂತರ ತನ್ನ ಗ್ರಾಹಕರಿಗೆ S 1 ಮತ್ತು S 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪರೀಕ್ಷಾ ಸವಾರಿಯನ್ನು ನೀಡಲು ಸಿದ್ಧವಾಗಿದೆ ಎಂದು ಓಲಾ ಘೋಷಿಸಿದೆ. ಚೆನ್ನೈ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರು ಎಲೆಕ್ಟ್ರಿಕ್ ಸ್ಕೂಟರ್‌ಗಳು ನವೆಂಬರ್ 10 ರಿಂದ ಟೆಸ್ಟ್ ರೈಡ್ ಸವಾರಿಗೆ ಲಭ್ಯವಿರುವುದಾಗಿ ಹೇಳಿದ್ದಾರೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ S1 ರೂಪಾಂತರವು ಪೂರ್ಣ ಚಾರ್ಜ್‌ನಲ್ಲಿ 121 ಕಿಮೀ ದೂರವನ್ನು ಕ್ರಮಿಸುತ್ತದೆ. ಅದೇ ಸಮಯದಲ್ಲಿ, S1 ಪ್ರೊ ಪೂರ್ಣ ಚಾರ್ಜ್‌ನಲ್ಲಿ 181 ಕಿಮೀ ವರೆಗೆ ಹೋಗಬಹುದು. ಓಲಾ S1 ಮಾದರಿಯು 3.6 ಸೆಕೆಂಡುಗಳಲ್ಲಿ 40 ಕಿಲೋಮೀಟರ್ ವೇಗವನ್ನು ಪಡೆಯುತ್ತದೆ. ಅದೇ ಸಮಯದಲ್ಲಿ, ಎಸ್ 1 ಪ್ರೊ ಕೇವಲ 3 ಸೆಕೆಂಡುಗಳಲ್ಲಿ ಗಂಟೆಗೆ 40 ಕಿಮೀ ವೇಗವನ್ನು ಹಿಡಿಯುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 115 ಕಿಮೀ.

ಅಕ್ಟೋಬರ್ 25 ರಿಂದ ವಿತರಣೆ ಆರಂಭವಾಗಬೇಕಿತ್ತು : ಓಲಾ ತನ್ನ ಇ-ಸ್ಕೂಟರ್ S 1 ಮತ್ತು S 1 ಪ್ರೊಗೆ ಅಕ್ಟೋಬರ್ 18 ರಿಂದ ಅಂತಿಮ ಪಾವತಿಯನ್ನು ತೆಗೆದುಕೊಂಡು ಅಕ್ಟೋಬರ್ 25 ರಿಂದ ವಿತರಿಸಲು ಯೋಜಿಸಿತ್ತು. ಟೆಲ್ ಡ್ರೈವ್ ತೆಗೆದುಕೊಂಡ ನಂತರವೇ ಸಂಪೂರ್ಣ ಪಾವತಿ ಮಾಡುವಂತೆ ಓಲಾ ಗ್ರಾಹಕರನ್ನು ಕೇಳಿದೆ. ಇದರೊಂದಿಗೆ, ಕಾಯ್ದಿರಿಸಿದ ವಾಹನಗಳ ಸಕಾಲಿಕ ವಿತರಣೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಆದಾಗ್ಯೂ, ಎಲ್ಲಾ ಡೆಲಿವರಿಗಳನ್ನು ಸಮಯಕ್ಕೆ ಸರಿಯಾಗಿ ಮಾಡುವುದಾಗಿ ಕಂಪನಿ ಹೇಳಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ S 1 ವೇರಿಯಂಟ್‌ನ ಎಕ್ಸ್ ಶೋರೂಂ ಬೆಲೆ 99,999 ರೂ., S 1 ಪ್ರೊ ವೇರಿಯಂಟ್‌ನ ಎಕ್ಸ್ ಶೋರೂಂ ಬೆಲೆ 1,29,999 ರೂ. ಇದಲ್ಲದೇ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಯ್ಕೆ ಮಾಡಲು 10 ಬಣ್ಣ ಆಯ್ಕೆಗಳಿವೆ. ಬುಕಿಂಗ್ ಸಮಯದಲ್ಲಿ ಆದ್ಯತೆಯ ಬಣ್ಣವನ್ನು ಆಯ್ಕೆ ಮಾಡಬಹುದು ಮತ್ತು ಕಂಪನಿಯ ವೆಬ್‌ಸೈಟ್ ಪ್ರಕಾರ, ಗ್ರಾಹಕರು ಬಯಸಿದರೆ ಸ್ಕೂಟರ್‌ನ ಬಣ್ಣದ ಆಯ್ಕೆಯನ್ನು ನಂತರ ಬದಲಾಯಿಸಬಹುದು.

ನಿರ್ದಿಷ್ಟ ವಿತರಣಾ ವಿಂಡೋದಲ್ಲಿ ಸ್ಕೂಟರ್‌ಗಳನ್ನು ನೀಡಲು ಸಿದ್ಧ ಎಂದು ಓಲಾ ಎಲೆಕ್ಟ್ರಿಕ್ ಹೇಳಿದೆ. ಕಂಪನಿಯು ನವೆಂಬರ್ 10 ರಿಂದ ಓಲಾ ಇ-ಸ್ಕೂಟರ್ ನ ಟೆಸ್ಟ್ ಡ್ರೈವ್ ಅನ್ನು ಗ್ರಾಹಕರಿಗೆ ನೀಡಲು ಯೋಜಿಸುತ್ತಿದೆ. ಇ-ಸ್ಕೂಟರ್ S1 ಗಾಗಿ ಬುಕ್ ಮಾಡಿದ ಗ್ರಾಹಕರು ಟೆಸ್ಟ್ ಡ್ರೈವ್ ನಂತರವೇ ಸಂಪೂರ್ಣ ಪಾವತಿ ಮಾಡುವಂತೆ ಕಂಪನಿಯು ಕೇಳುತ್ತದೆ ಎಂದು ಓಲಾ ಹೇಳಿದೆ.

ಓಲಾ ಎಲೆಕ್ಟ್ರಿಕ್ ತನ್ನ ಎರಡು ಎಲೆಕ್ಟ್ರಿಕ್ ಸ್ಕೂಟರ್ S1 ಮತ್ತು S1 ಪ್ರೊ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಆಗಸ್ಟ್ 15 ರಂದು ರೂ .1 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಮಾಡಿತು. ಸ್ಕೂಟರ್ ಬಿಡುಗಡೆಯಾದ 1 ತಿಂಗಳ ನಂತರ, ಅದರ ಬುಕಿಂಗ್ ಅನ್ನು ಎರಡು ದಿನಗಳವರೆಗೆ ತೆರೆಯಲಾಯಿತು.

ಕಂಪನಿಯ ಪ್ರಕಾರ, ಕೇವಲ ಎರಡು ದಿನಗಳಲ್ಲಿ, 1100 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಆನ್‌ಲೈನ್ ವ್ಯವಹಾರವನ್ನು ಮಾಡಲಾಗಿದೆ. ಕಂಪನಿಯು ಮೊದಲ 24 ಗಂಟೆಗಳಲ್ಲಿ 600 ಕೋಟಿ ರೂಗಳ ಬುಕಿಂಗ್ ಅನ್ನು ಪಡೆದುಕೊಂಡಿದೆ. ಈಗ ಈ ಸ್ಕೂಟರ್‌ಗಳ ಎರಡನೇ ಹಂತದ ಬುಕಿಂಗ್ ನವೆಂಬರ್ 1 ರಂದು ದೀಪಾವಳಿಗೆ ಮುಂಚಿತವಾಗಿ ಪ್ರಾರಂಭವಾಗಲಿದೆ.

Recommended Video

India vs Pakistan ಪಂದ್ಯಕ್ಕೆ ಆಟಗಾರರಲ್ಲಿ Ticket ಬೇಡಿಕೆ | Oneindia Kannada

English summary
Indian multinational ridesharing company Ola on Thursday said it plans to hire 10,000 people, as it eyes a leadership position with $2 billion gross merchandise value (GMV) for its vehicle commerce platform Ola Cars over the next 12 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X