ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NWKRTC ನೇಮಕಾತಿ, 2814 ಹುದ್ದೆಗಳಿಗೆ ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 10 : ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 8/1/2020 ಕೊನೆಯ ದಿನವಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಚಾಲಕ, ಚಾಲಕ (ಪರಿಶಿಷ್ಟ ಜಾತಿ -ಹಿಂಬಾಕಿ), ಚಾಲಕ ಕಂ ನಿರ್ವಾಹಕ (ಪರಿಶಿಷ್ಟ ಜಾತಿ - ಹಿಂಬಾಕಿ) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಕೆಪಿಎಸ್‌ಸಿ 1998 ನೇಮಕಾತಿ ಅಕ್ರಮ; ಪರಿಷ್ಕೃತ ಪಟ್ಟಿ ಪ್ರಕಟಕೆಪಿಎಸ್‌ಸಿ 1998 ನೇಮಕಾತಿ ಅಕ್ರಮ; ಪರಿಷ್ಕೃತ ಪಟ್ಟಿ ಪ್ರಕಟ

ಆಯ್ಕೆಯಾದವರು ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ, ಹುಬ್ಭಳ್ಳಿ, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ವಿಭಾಗ ಮತ್ತು ಶಿರಸಿಯಲ್ಲಿ ಕೆಲಸ ಮಾಡಬೇಕಿದೆ. ಡಿಸೆಂಬರ್ 10 ರಿಂದ ಜನವರಿ 8ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತ

ಪ್ರಕಟಿಸಲಾದ ಖಾಲಿ ಹುದ್ದೆಗಳ ಸಂಖ್ಯೆ ತಾತ್ಕಾಲಿಕವಾಗಿದೆ. ಆಯ್ಕೆ ಸಮಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾರ್ಪಾಡುಗೊಳಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ

ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ

ಒಟ್ಟು ಹುದ್ದೆ 2814

ಒಟ್ಟು ಹುದ್ದೆ 2814

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ 2500, ಚಾಲಕ (ಪರಿಶಿಷ್ಟ ಜಾತಿ -ಹಿಂಬಾಕಿ) 55, ಚಾಲಕ ಕಂ ನಿರ್ವಾಹಕ (ಪರಿಶಿಷ್ಟ ಜಾತಿ - ಹಿಂಬಾಕಿ) 259 ಸೇರಿ ಒಟ್ಟು 2814 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆನ್‌ಲೈನ್ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳಿಗೆ ಷರತ್ತು

ಅಭ್ಯರ್ಥಿಗಳಿಗೆ ಷರತ್ತು

ಆಯ್ಕೆಯಾದ ಅಭ್ಯರ್ಥಿಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಇತರ ಸಂಸ್ಥೆಗಳಾದ ಕೆಎಸ್ಆರ್‌ಟಿಸಿ, ಬಿಎಂಟಿಸಿ ಅಥವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ವರ್ಗಾವಣೆ ಹೊಂದಲು ಅವಕಾಶವಿಲ್ಲ.

ಆಯ್ಕೆಯಾದ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ 'ಕೆಲಸದ ಮೇಲೆ ತರಬೇತಿಗೆ' ನಿಯೋಜನೆ ಮಾಡಲಾಗುತ್ತದೆ. ಸದರಿ ಅವಧಿಯಲ್ಲಿ ಚಾಲಕ 10000, ಚಾಲಕ ಕಂ ನಿರ್ವಾಹಕ 9100 ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ.

ವಯೋಮಿತಿ ವಿವರಗಳು

ವಯೋಮಿತಿ ವಿವರಗಳು

ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗೆ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಕನಿಷ್ಠ 24 ವರ್ಷ ತುಂಬಿರಬೇಕು. ಕೆಳಕಂಡ ಗರಿಷ್ಠ ವಯೋಮಿತಿ ಮೀರಿರಬಾರದು.

* ಪಜಾ/ಪಪಂ/ವರ್ಗ-1 40 ವರ್ಷಗಳು
* ಪ್ರವರ್ಗ 2ಎ, 2ಬಿ, 3ಎ, 3ಬಿ - 38 ವರ್ಷಗಳು
* ಸಾಮಾನ್ಯ ವರ್ಗ 35 ವರ್ಷಗಳು.

ವಿದ್ಯಾರ್ಹತೆಯ ವಿವರಗಳು

ವಿದ್ಯಾರ್ಹತೆಯ ವಿವರಗಳು

ಚಾಲಕ ಮತ್ತು ಚಾಲಕ ಕಂ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆಯಾಗಿರಬೇಕು. ಭಾರತೀಯ ವಿದ್ಯಾಲಯ ಶಿಕ್ಷಾ ಬೋರ್ಡ್ ಮಂಡಳಿಯಿಂದ ಅಂಗೀಕೃತವಾದ ಮಂಡಳಿಯನ್ನು ಹೊರತುಪಡಿಸಿ ಉಳಿದ ಯಾವುದೇ ಸಂಸ್ಥೆ/ಮಂಡಳಿಗಳಿಂದ ನಡೆಸಿದ ವಿದ್ಯಾರ್ಹತೆಯ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.

ಚಾಲ್ತಿಯಲ್ಲಿರುವ ಭಾರಿ ಸರಕು ಸಾಗಾಣಿಕೆ ವಾಹನ ಚಾಲನಾ ಪರವಾನಿಗೆ ಹೊಂದಿ ಕನಿಷ್ಠ 2 ವರ್ಷಗಳಾಗಿರಬೇಕು. ಮತ್ತು ಪ್ರಯಾಣಿಕರ ಭಾರಿ ವಾಹನ ಚಾಲನಾ ಪರವಾನಿಗೆ ಹಾಗೂ ಕರ್ನಾಟಕ ಪಿಎಸ್‌ವಿ ಬ್ಯಾಡ್ಜ್‌ ಹೊಂದಿರಬೇಕು.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ವರ್ಗ-1/ಮಾಜಿ ಸೈನಿಕ ಮತ್ತು ಅಶಕ್ತ ಮಾಜಿ ಸೈನಿಕರ ಅವಲಂಬಿತರಿಗೆ 300 ರೂ. ಶುಲ್ಕ, ವರ್ಗ 2ಎ/2ಬಿ/3ಎ/3ಬಿ/ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ. ಶುಲ್ಕ ನಿಗದಿ ಮಾಡಲಾಗಿದೆ. ಎರಡೂ ಹುದ್ದೆಗೆ ಅರ್ಜಿ ಸಲ್ಲಿಸುವವರು ಎರಡೂ ಹುದ್ದೆಗೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.

English summary
The North Western Karnataka Road Transport Corporation invited application for to fill 2814 post. Candidates can apply online till 8/1/2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X