ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ : ಡಿ-ಗ್ರೂಪ್ ನೌಕರಿಗೆ ಎಸ್‌ಎಸ್‌ಎಲ್‌ಸಿ ಕಡ್ಡಾಯ

|
Google Oneindia Kannada News

ಬೆಂಗಳೂರು, ಜುಲೈ 03 : ಕರ್ನಾಟಕದಲ್ಲಿ ಡಿ ಗ್ರೂಪ್ ಸರ್ಕಾರಿ ನೌಕರಿ ಪಡೆಯಲು ಎಸ್‌ಎಸ್‌ಎಲ್‌ಸಿ ಕಡ್ಡಾಯವಾಗಲಿದೆ. ಕರ್ನಾಟಕ ನಾಗರಿಕ ಸೇವೆ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು ಅಧಿಸೂಚನೆ ಪ್ರಕಟಿಸಲಾಗಿದೆ.

ಪ್ರಸ್ತುತ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳಿಲ್ಲ. ಆದ್ದರಿಂದ, ಡಿ ಗ್ರೂಪ್ ನೌಕರಿಗೆ ಸೇರಲು ಎಸ್‌ಎಸ್‌ಎಲ್‌ಸಿ ಕಡ್ಡಾಯಗೊಳಿಸಲಾಗಿದೆ. ಸಿ-ಗ್ರೂಪ್ ನೌಕರರ ನೇಮಕಾತಿಗೆ ಲಿಖಿತ ಪರೀಕ್ಷೆ ಮಾತ್ರ ಮಾನದಂಡವಾಗಲಿದೆ.

ಏರ್ ಇಂಡಿಯಾ ಸಂಸ್ಥೆಯಲ್ಲಿ 51 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನಏರ್ ಇಂಡಿಯಾ ಸಂಸ್ಥೆಯಲ್ಲಿ 51 ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

ಕರ್ನಾಟಕ ಸರ್ಕಾರ 'ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದ್ದರಿಂದ, ಇನ್ನು ಮುಂದೆ ಡಿ ಗ್ರೂಪ್ ನೌಕರಿ ಸೇರಲು ಎಸ್‌ಎಸ್‌ಎಲ್‌ಸಿ ಕಡ್ಡಾಯವಾಗಲಿದೆ.

99 ಸ್ಟಾಫ್ ನರ್ಸ್ ಹುದ್ದೆಗಳಿವೆ, ಜುಲೈ 17ರೊಳಗೆ ಅರ್ಜಿ ಹಾಕಿ99 ಸ್ಟಾಫ್ ನರ್ಸ್ ಹುದ್ದೆಗಳಿವೆ, ಜುಲೈ 17ರೊಳಗೆ ಅರ್ಜಿ ಹಾಕಿ

Now SSLC mandatory for d group govt jobs Karnataka

ಸಿ-ಗ್ರೂಪ್ ಸಿಬ್ಭಂದಿ ನೇಮಕಾತಿಯ ಮೌಖಿಕ ಸಂದರ್ಶನದಲ್ಲಿ ಅಕ್ರಮ ನಡೆಯಬಹುದು ಎಂಬ ಕಾರಣಕ್ಕೆ ಲಿಖಿತ ಪರೀಕ್ಷೆ ಅಂಕಗಳನ್ನು ಮಾತ್ರ ಮಾನದಂಡವಾಗಿ ಮಾಡಲು ತೀರ್ಮಾನಿಸಲಾಗಿದೆ. ಆದ್ದರಿಂದ, ನೇಮಕಾತಿ ವೇಳೆ ಪರೀಕ್ಷಾ ಫಲಿತಾಂಶ ಮಾತ್ರ ಪರಿಗಣನೆಯಾಗಲಿದೆ.

ನೈಋತ್ಯ ರೈಲ್ವೆಯಲ್ಲಿ 179ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿನೈಋತ್ಯ ರೈಲ್ವೆಯಲ್ಲಿ 179ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳ ತಿದ್ದುಪಡಿಯಿಂದ ಹಲವು ಬದಲಾವಣೆಯಾಗಲಿದೆ. ಹಿಂದೆ ಒಂದು ಇಲಾಖೆಯಲ್ಲಿ ಪ್ರೊಬೆಷನರಿ ಅವಧಿ ಪೂರೈಸಿದವರು ಮತ್ತೊಂದು ಇಲಾಖೆಗೆ ಹೋದರೆ ಒಂದು ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಬೇಕಿತ್ತು. ಈಗ ಇನ್ನೊಂದು ಇಲಾಖೆಯಲ್ಲೂ 2 ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಬೇಕಿದೆ.

ಅಭ್ಯರ್ಥಿಗಳು ಪ್ರೊಬೆಷನರಿ ಅವಧಿಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಅಥವ ಅರ್ಹತೆಗಳನ್ನು ಪಡೆಯುವುದಕ್ಕೆ ಇದ್ದ ಒಂದು ವರ್ಷದ ಅವಧಿಯನ್ನು 5 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಅಷ್ಟರೊಳಗೆ ಪೂರೈಸದಿದ್ದರೆ ಕೆಲಸದಿಂದ ತೆಗೆದುಹಾಕಲು ಅವಕಾಶವಿದೆ.

English summary
Karnataka government issued notification that SSLC mandatory for join D-group govt jobs in Karnataka and written exam marks will consider for C-group jobs recruitment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X