ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಂಗ್ ಕ್ಷೇತ್ರದಲ್ಲಿ 18 ಸಾವಿರ ಉದ್ಯೋಗ ಕಡಿತ

|
Google Oneindia Kannada News

ಬೆಂಗಳೂರು, ನವೆಂಬರ್ 25 : ಉದ್ಯೋಗ ಕಡಿತ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದೆ. ಜರ್ಮನ್ ಮೂಲದ ಡಾಯ್ಚ ಬ್ಯಾಂಕ್ ಉದ್ಯೋಗಿಗಳನ್ನು ಮನೆಗೆ ಕಳಿಸಿ ರೋಬೋಗಳನ್ನು ಕೆಲಸಕ್ಕೆ ಇಟ್ಟುಕೊಳ್ಳಲಿದೆ.

ಬಹುರಾಷ್ಟ್ರೀಯ ಡಾಯ್ಚ ಬ್ಯಾಂಕ್ 8.3 ಬಿಲಿಯನ್ ವೆಚ್ಚದ ಪುನರ್ ಸ್ಥಾಪನೆ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರ ಭಾಗವಾಗಿ 4 ಸಾವಿರ ಉದ್ಯೋಗಿಗಳನ್ನು ಈಗಾಗಲೇ ಮನೆಗೆ ಕಳಿಸಲಾಗಿದೆ.

ನೋಟು ಅಮಾನ್ಯೀಕರಣದ ಬಳಿಕ ಎಂಎಸ್‌ಎಂಇಯಲ್ಲಿ ಉದ್ಯೋಗ ಹೆಚ್ಚಳ ನೋಟು ಅಮಾನ್ಯೀಕರಣದ ಬಳಿಕ ಎಂಎಸ್‌ಎಂಇಯಲ್ಲಿ ಉದ್ಯೋಗ ಹೆಚ್ಚಳ

2022ರ ವೇಳೆಗೆ 18 ಸಾವಿರ ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಲಿದ್ದು, ಅವರ ಜಾಗಕ್ಕೆ ರೋಬೋಟ್‌ಗಳು ಬರಲಿವೆ. ರೋಬೋ ಕೆಲಸದ ಬಗ್ಗೆ ಅಧ್ಯಯನ ಮಾಡಿದ್ದು, ಯಂತ್ರಗಳು ಮಾಡುತ್ತಿರುವ ಕೆಲಸದಿಂದ ಕ್ಷಮತೆ ಹೆಚ್ಚುತ್ತಿದೆ ಎಂಬುದು ಸಾಬೀತಾಗಿದೆ.

ಐಟಿ ಕಂಪನಿಗಳಿಂದ 40 ಸಾವಿರ ಉದ್ಯೋಗ ಕಡಿತ ನಿರೀಕ್ಷೆ ಐಟಿ ಕಂಪನಿಗಳಿಂದ 40 ಸಾವಿರ ಉದ್ಯೋಗ ಕಡಿತ ನಿರೀಕ್ಷೆ

Now Job Cut Enter To Banking Sector

ಡಾಯ್ಚ ಬ್ಯಾಂಕ್ ಕಾರ್ಪೊರೇಟ್ ಮತ್ತು ಇನ್‌ವೆಸ್ಟ್‌ಮೆಂಟ್ ವಿಭಾಗದ ಮುಖ್ಯಸ್ಥ ಮಾರ್ಕ್ ಮ್ಯಾಥ್ಯೂಸ್ ಈ ಕುರಿತು ಮಾತನಾಡಿದ್ದಾರೆ. "680, 000 ಗಂಟೆಯ ಮನುಷ್ಯರ ಕೆಲವವನ್ನು ರೋಬೋಗಳು ಇದುವರೆಗೂ ಉಳಿಸಿವೆ. 5 ಮಿಲಿಯನ್ ವ್ಯವಹಾರಗಳಿಗೆ ರೋಬೋಗಳನ್ನು ಬಳಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ ಇನ್ಫೋಸಿಸ್​​ ಸಂಸ್ಥೆಯಿಂದ 10,000 ಉದ್ಯೋಗ ಕಡಿತ ಸಾಧ್ಯತೆ

"ಉದ್ಯೋಗ ಕಡಿತವನ್ನು ನಾವು ಮುಂದುವರೆಸುತ್ತೇವೆ. ಹಣ ಮತ್ತು ಸಮಯ ಉಳಿತಾಯ ಮಾಡುವುದು ನಮ್ಮ ಆದ್ಯತೆ. ಗ್ರಾಹಕರ ಅನುಭವವನ್ನು ನಾವು ಸಂಗ್ರಹ ಮಾಡಿದ್ದೇವೆ" ಎಂದು ಮಾರ್ಕ್ ಹೇಳಿದ್ದಾರೆ.

'ಆಪರೇಷನ್ 4.0' ಎಂಬ ಹೆಸರಿನಲ್ಲಿ ಬ್ಯಾಂಕ್‌ಗಳಲ್ಲಿ ರೋಬೋ ಪರಿಚಯಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 6.6 ಬಿಲಿಯನ್ ಹಣ ಉಳಿಸುವ ಗುರಿಯನ್ನು ಬಹುರಾಷ್ಟ್ರೀಯ ಬ್ಯಾಂಕ್ ಹೊಂದಿದ್ದು ಇದರ ಭಾಗವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ.

English summary
Now job cut enter to banking sector also. Multinational Deutsche bank has so far axed over 4,000 jobs. By 20200 18,000 more staff will lost job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X