ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ; ಮಹತ್ವದ ಬದಲಾವಣೆ

|
Google Oneindia Kannada News

ಬೆಂಗಳೂರು, ನವೆಂಬರ್ 22 : ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೂ ಅನ್ವಯವಾಗುವಂತೆ ಈ ಬದಲಾವಣೆ ಜಾರಿಗೆ ಬರಲಿದೆ.

ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ವೇಳೆ ನಡೆಸುತ್ತಿದ್ದ ಮೌಖಿಕ ಸಂದರ್ಶನವನ್ನು ಕೈ ಬಿಡಲಾಗುತ್ತಿದೆ. ರಾಜ್ಯ ಸರ್ಕಾರ ಈ ಕುರಿತು ಮೌಖಿಕ ಆದೇಶ ಹೊರಡಿಸಿದೆ. 10 ಅಂಕಗಳಿಗೆ ನಡೆಯುತ್ತಿದ್ದ ಮೌಖಿಕ ಪರೀಕ್ಷೆ (ಸಂದರ್ಶನ) ಇನ್ನು ಮುಂದೆ ಇರುವುದಿಲ್ಲ.

ಗ್ರೂಪ್ 'ಸಿ' ನಾಗರಿಕ ಸೇವಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಮೌಖಿಕ ಪರೀಕ್ಷೆ ನಡೆಸಬಾರದು ಎಂದು ನಿಯಮವನ್ನು ತಿದ್ದುಪಡಿ ಮಾಡಲಾಗಿದೆ. ಆದ್ದರಿದ, ಎಸ್ಐ ನೇಮಕಾತಿ ಮಾಡುವಾಗ ಇನ್ನು ಮುಂದೆ ಮೌಖಿಕ ಪರೀಕ್ಷೆ ನಡೆಸಲಾಗುವುದಿಲ್ಲ.

No Interview In Police Inspector Recruitment

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ನಡೆಯುತ್ತಿದೆ. ಕಳೆದ ಭಾನುವಾರ ಲಿಖಿತ ಪರೀಕ್ಷೆ ನಡೆದಿದೆ. ಈ ನೇಮಕಾತಿ ವೇಳೆಯೂ ಮೌಖಿಕ ಪರೀಕ್ಷೆ ನಡೆಸಬಾರದು ಎಂದು ಸೂಚನೆ ನೀಡಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ಪುರುಷ/ಮಹಿಳೆ, ಸೇವಾನಿರತರು ಸೇರಿದಂತೆ ಒಟ್ಟು 200 ಹುದ್ದೆ. ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿಎಆರ್/ಡಿಎಆರ್) ಪುರುಷ 40 ಹುದ್ದೆ. ಕೆಎಸ್ಆರ್‌ಪಿ ಪುರುಷ 40 ಹುದ್ದೆಗಳಿಗೆ ಪ್ರಸ್ತುತ ನೇಮಕಾತಿ ನಡೆಯುತ್ತಿದೆ.

ಮೌಖಿಕ ಪರೀಕ್ಷೆ ಹೊರತುಪಡಿಸಿದರೆ ಉಳಿದ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ಮುಂದೆ 'ಕರ್ನಾಟಕ ರಾಜ್ಯ ಸಿವಿಲ್ ಸೇವೆ ಕಾಯ್ದೆ 1978ರಲ್ಲಿ ಗ್ರೂಪ್ ಸಿ ನಾಗರಿಕ ಸೇವೆಗಳಿಗೆ ಯಾವುದೇ ಮೌಖಿಕ ಪರೀಕ್ಷೆ, ಸಂದರ್ಶನ ಇರುವುದಿಲ್ಲ' ಎಂದು ಸರ್ಕಾರದ ಟಿಪ್ಪಣಿ ಹೇಳಿದೆ.

English summary
Karnataka government decided not to conduct interview in police inspector recruitment. Till 10 marks interview part of the recruitment process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X