ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ; ನೇಮಕಾತಿಗೆ ಇದ್ದ ತಡೆ ತೆರವು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23; ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ವಿವಿಧ ಇಲಾಖೆಗಳ ನೇಮಕಾತಿಗೆ ಕೋವಿಡ್ ಸಂದರ್ಭದಲ್ಲಿ ಹಾಕಿದ್ದ ತಡೆಯನ್ನು ತೆರವುಗೊಳಿಸಲಾಗಿದೆ.

ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ ಕೇಳಿದ್ದ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ ಈ ಕುರಿತು ಉತ್ತರ ನೀಡಿದ್ದಾರೆ. "ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ವಿಧಿಸಿದ್ದ ತಡೆಯನ್ನು ಆರ್ಥಿಕ ಇಲಾಖೆ ಇತ್ತೀಚೆಗೆ ತೆರವುಗೊಳಿಸಿದೆ" ಎಂದು ಹೇಳಿದರು.

ಹೆಸ್ಕಾಂ ಅಪ್ರೆಂಟಿಸ್ ನೇಮಕಾತಿ; ಆಸಕ್ತರು ಅರ್ಜಿ ಹಾಕಿಹೆಸ್ಕಾಂ ಅಪ್ರೆಂಟಿಸ್ ನೇಮಕಾತಿ; ಆಸಕ್ತರು ಅರ್ಜಿ ಹಾಕಿ

"ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ವಿವಿಧ ಹಂತದಲ್ಲಿ ಭರ್ತಿ ಮಾಡಲಾಗುತ್ತಿದೆ. ಹೊಸದಾಗಿ 2072 ಭೂ ಮಾಪಕರ ನೇಮಕಾತಿಗೆ ಪರೀಕ್ಷೆ ನಡೆಸಲಾಗಿತ್ತು. 820 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನಷ್ಟು ಮಂದಿಯನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಸಚಿವರು ಉತ್ತರ ನೀಡಿದರು.

ಕರ್ನಾಟಕದ ಹೈಕೋರ್ಟ್ ನೇಮಕಾತಿ; ಸ್ನಾತಕೋತ್ತರ ಪದವೀಧರರು ಅರ್ಜಿ ಹಾಕಿ ಕರ್ನಾಟಕದ ಹೈಕೋರ್ಟ್ ನೇಮಕಾತಿ; ಸ್ನಾತಕೋತ್ತರ ಪದವೀಧರರು ಅರ್ಜಿ ಹಾಕಿ

 New Recruitment In Department Karnataka Govt Vacate The Stay

"ಕೋವಿಡ್ ಕಾರಣದಿಂದಾಗಿ ನೇಮಕಾತಿಗಳಿಗೆ ತಡೆ ನೀಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ಎಲ್ಲಾ ಹಂತದಲ್ಲಿಯೂ ಕಚೇರಿಗಳ ನಿರ್ವಹಣೆಗೆ ಸಮಸ್ಯೆ ಆಗಿದೆ. ಈಗ ನೇಮಕಾತಿ ಮಾಡುವ ಮೂಲಕ ಸಮಸ್ಯೆ ಪರಿಹಾರ ಮಾಡಲಾಗುತ್ತದೆ" ಎಂದು ಆರ್. ಅಶೋಕ ತಿಳಿಸಿದರು.

ಕರ್ನಾಟಕ; ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರ ಮಾಹಿತಿ ಕರ್ನಾಟಕ; ಶಿಕ್ಷಕ, ಉಪನ್ಯಾಸಕರ ನೇಮಕಾತಿ ಬಗ್ಗೆ ಸಚಿವರ ಮಾಹಿತಿ

ಖಾಲಿ ಹುದ್ದೆಗಳ ವಿವರ; ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ 5689, ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ 1005, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ 643, ಗ್ರೇಡ್-1, ಗ್ರೇಡ್-2 ತಹಶೀಲ್ದಾರ 262, ಶಿರಸ್ತೇದಾರ್‌ ವೃಂದ 160 ಮತ್ತು1792 ಗ್ರಾಮ ಲೆಕ್ಕಿಗ ಹುದ್ದೆಗಳು ಖಾಲಿ ಇವೆ.

ಕೋವಿಡ್ ಸಂದರ್ಭದಲ್ಲಿ ತಡೆ; ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಆರ್ಥಿಕ ಇಲಾಖೆ ವಿವಿಧ ಇಲಾಖೆಗಳ ನೇಮಕಾತಿಗೆ ತಡೆ ನೀಡಿತ್ತು. ಅತಿ ಅಗತ್ಯವಿರುವ ಹುದ್ದೆಗಳನ್ನು ಬಿಟ್ಟು ಉಳಿದ ಹುದ್ದೆಗಳ ನೇಮಕಾತಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸುತ್ತೋಲೆ ಹೊರಡಿಸಿತ್ತು.

ಆರ್ಥಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಎನ್. ಎಸ್. ಪ್ರಸಾದ್ 2020ರ ಜುಲೈನಲ್ಲಿ ಈ ಕುರಿತು ಸುತ್ತೋಲೆ ಹೊರಡಿಸಿದ್ದರು. ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಭರ್ತಿ ಪ್ರಕ್ರಿಯೆಯನ್ನು ಮುಂದಿನ ಆದೇಶದ ತನಕ ತಡೆ ಹಿಡಿಯಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.

ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವುದು ಮತ್ತು ಕೋವಿಡ್ ಸಂದರ್ಭದಲ್ಲಿ ಆದ ಆರ್ಥಿಕ ನಷ್ಟದ ಕಾರಣದಿಂದಾಗಿ ಆರ್ಥಿಕ ಇಲಾಖೆ ನೇಮಕಾತಿಗೆ ತಡೆ ನೀಡಿತ್ತು. ಆದರೆ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಇದ್ದವರಿಗೆ ಇದರಿಂದ ಹಿನ್ನಡೆ ಆಗಿತ್ತು. ವಯಸ್ಸು ಜಾಸ್ತಿಯಾಗಿ ಸರ್ಕಾರಿ ಉದ್ಯೋಗ ಕೈ ತಪ್ಪುವ ಭೀತಿ ಎದುರಾಗಿತ್ತು.

ಕೋವಿಡ್ ಕಾರಣದಿಂದಾಗಿ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಅಗತ್ಯವಾಗಿದ್ದು, ಸರ್ಕಾರದ ವೆಚ್ಚದಲ್ಲಿ ಮಿತವ್ಯಯ ಪಾಲಿಸುವುದು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಎಲ್ಲಾ ನೇರ ನೇಮಕಾತಿಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

ಈಗಾಗಳೇ ವಿವಿಧ ಇಲಾಖೆಗಳು ಆರ್ಥಿಕ ಇಲಾಖೆ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ತಡೆ ನೀಡಲಾಗಿತ್ತು. ಇದರಿಂದಾಗಿ ನೇಮಕಾತಿಗಾಗಿ ಪರೀಕ್ಷೆ ಬರೆದವರ ಫಲಿತಾಂಶ ಸಹ ಪ್ರಕಟವಾಗಿರಲಿಲ್ಲ.

ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ 40ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇವೆ. ಸರ್ಕಾರ ನೇಮಕಾತಿಗೆ ತಡೆ ನೀಡಿದ್ದರಿಂದ ಸಿಬ್ಬಂದಿಗಳು ಇಲ್ಲದೇ ಸರ್ಕಾರಿ ಕೆಲಸವೂ ವಿಳಂಬವಾಗುತ್ತಿತ್ತು. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೂ ನಿರಾಸೆಯಾಗಿತ್ತು.

English summary
Revenue minister of Karnataka R. Ashok said that financial department vacated the stay that given in the time of Covid for new recruitment in various department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X