ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೇಮಕಾತಿ; ಅರ್ಜಿ ಹಾಕಿ

|
Google Oneindia Kannada News

ಬೆಂಗಳೂರು, ಜನವರಿ 06 : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 5/2/2020.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕ, ಚಾಲಕ (ಹಿಂಬಾಕಿ), ಚಾಲಕ ಕಮ್ ನಿರ್ವಾಹಕ, ಚಾಲಕ ಕಮ್ ನಿರ್ವಾಹಕ (ಹಿಂಬಾಕಿ) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಅರ್ಜಿಗಳನ್ನು 6/1/2020ರಿಂದ ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

ಕೆಪಿಟಿಸಿಎಲ್ ನೇಮಕಾತಿ; ಬೆಂಗಳೂರಲ್ಲಿ ಕೆಲಸಕೆಪಿಟಿಸಿಎಲ್ ನೇಮಕಾತಿ; ಬೆಂಗಳೂರಲ್ಲಿ ಕೆಲಸ

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013ರ ಅನ್ವಯ ಸ್ಥಳೀಯ ವೃಂದ ಮತ್ತು ವಿಕ್ಕುಳಿದ ವೃಂದಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸುವಾಗ ಹುದ್ದೆಗಳ ಸಂಖ್ಯೆಯನ್ನು ಮಾರ್ಪಾಡುಗೊಳಿಸುವ ಅಧಿಕಾರ ಸಂಸ್ಥೆ ಹೊಂದಿದೆ.

ಎಸ್‌ಬಿಐ ನೇಮಕಾತಿ; ಬೆಂಗಳೂರಲ್ಲಿ 475 ಹುದ್ದೆಗಳುಎಸ್‌ಬಿಐ ನೇಮಕಾತಿ; ಬೆಂಗಳೂರಲ್ಲಿ 475 ಹುದ್ದೆಗಳು

KSRTC, BMTC, NWKRTC ಮತ್ತು NEKRTCಯಲ್ಲಿ ಸೇವೆ ಸಲ್ಲಿಸುವವರು ಸಂಬಂಧಪಟ್ಟ ನೇಮಕ ಪ್ರಾಧಿಕಾರಸ್ಥರಿಂದ ಜಾಹೀರಾತಿನಲ್ಲಿ ಕರೆಯಲಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪಡೆದ ನಿರಾಕ್ಷೇಪಣಾ ಹಾಗೂ ಸೇವಾ ಪ್ರಮಾಣ ಪತ್ರ ಕಡ್ಡಾಯವಾಗಿ ಮೂಲ ದಾಖಲಾತಿ ಪರಿಶೀಲನೆ ಸಮಯದಲ್ಲಿ ಹಾಜರುಪಡಿಸಬೇಕು.

ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಮಹತ್ವದ ಬದಲಾವಣೆವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಮಹತ್ವದ ಬದಲಾವಣೆ

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

ಹುದ್ದೆಗಳ ವಿವರ

ಹುದ್ದೆಗಳ ವಿವರ

* ಚಾಲಕ 857
* ಚಾಲಕ (ಹಿಂಬಾಕಿ) 68
* ಚಾಲಕ ಕಮ್ ನಿರ್ವಾಹಕ 621
* ಚಾಲಕ ಕಮ್ ನಿರ್ವಾಹಕ (ಹಿಂಬಾಕಿ) 73 ಹುದ್ದೆಗಳು

ಅರ್ಜಿ ಸಲ್ಲಿಕೆಗೆ ವಿಳಾಸ : www.nekrtc.org/jobs

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಹೊಂದಿರಬೇಕು. ಕನಿಷ್ಠ ವಯೋಮಿತಿ 24 ವರ್ಷಗಳು. ಗರಿಷ್ಠ ವಯೋಮಿತಿ ಕೆಳಕಂಡಂತೆ ಇದೆ.

* ಸಾಮಾನ್ಯ ವರ್ಗದವರಿಗೆ 35 ವರ್ಷ
* ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ
* ಪ.ಜಾ/ಪ.ಪಂ/ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ

ವಿದ್ಯಾರ್ಹತೆ ವಿವರಗಳು

ವಿದ್ಯಾರ್ಹತೆ ವಿವರಗಳು

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಎಸ್‌ಎಸ್‌ಎಲ್‌ಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಮುಕ್ತ ವಿಶ್ವವಿದ್ಯಾಲಯದಿಂದ ವಿತರಿಸಿರುವ ಹಾಗೂ ಗರಿಷ್ಠ 500 ಅಂಕಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಅಂಕಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮತ್ತು ಇತರೆ ಯಾವುದೇ ಸಂಘ, ಸಂಸ್ಥೆ, ವಿಶ್ವವಿದ್ಯಾಲಯದಿಂದ ನಡೆಸಲಾಗುವ ಎಸ್‌ಎಸ್‌ಎಲ್‌ಸಿ ತತ್ಸಮಾನವೆಂದು ತಿಳಿಸಿ ಸಲ್ಲಿಸುವ ಬ್ರಿಡ್ಜ್ ಕೋರ್ಸ್ ಅಂಕಪಟ್ಟಿಯನ್ನು ಪರಿಗಣಿಸುವುದಿಲ್ಲ.

ಭತ್ಯೆ ಹಾಗೂ ವೇತನ ಶ್ರೇಣಿ

ಭತ್ಯೆ ಹಾಗೂ ವೇತನ ಶ್ರೇಣಿ

ಸಂಸ್ಥೆಯು ಪ್ರಕಟಿಸುವ ಅಂತಿಮ ಆಯ್ಕೆಪಟ್ಟಿಯಲ್ಲಿ ಸ್ಥಾನ ಪಡೆದು ಆಯ್ಕೆಗೊಂಡ ಅಭ್ಯರ್ಥಿಗಳನ್ನು ಎರಡು ವರ್ಷಗಳ ಕಾಲ ಕೆಲಸದ ಮೇಲಿನ ತರಬೇತಿಗೆ ನಿಯೋಜನೆ ಮಾಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಚಾಲಕರಿಗೆ 10,000, ಚಾಲಕ ಕಂ ನಿರ್ವಾಹಕರಿಗೆ 9,100 ರೂ.ನಂತೆ ಮಾಸಿಕ ತರಬೇತಿ ಭತ್ಯೆಯನ್ನು ನೀಡಲಾಗುತ್ತದೆ.

English summary
The North Eastern Karnataka Road Transport Corporation recruitment 2020. Apply for driver, driver and conductor post. February 5, 2020 last date to submit application online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X