ನ್ಯಾಷನಲ್ ಬುಕ್ ಟ್ರಸ್ಟ್: 26ಸಹಾಯಕ ಹುದ್ದೆಗಳಿವೆ ಅರ್ಜಿ ಸಲ್ಲಿಸಿ
ಬೆಂಗಳೂರು, ಜನವರಿ 20: ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ ಇಂಡಿಯಾ) 2021 ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸಹಾಯಕರು, ಲೈಬ್ರಿರಿಯನ್, ಅಕೌಂಟಂಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಫೆಬ್ರವರಿ 14ರೊಳಗೆ ಸಲ್ಲಿಸಬಹುದು.
ಸಂಸ್ಥೆಹೆಸರು: ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ ಇಂಡಿಯಾ)
ಹುದ್ದೆ ಹೆಸರು: Assistant, Librarian, Accountant
ಒಟ್ಟು ಹುದ್ದೆ: 26
ಉದ್ಯೋಗ ಸ್ಥಳ: ದೆಹಲಿ, ಮುಂಬೈ, ಕೋಲ್ಕತಾ ಹಾಗೂ ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 14, 2021.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 8, 10ನೇ ತರಗತಿ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ.
ವಯೋಮಿತಿ: 18 ರಿಂದ 35 ವರ್ಷ
ವಯೋಮಿತಿಯಲ್ಲಿ ವಿನಾಯಿತಿ
ಒಬಿಸಿ ಅಭ್ಯರ್ಥಿ: 3 ವರ್ಷ
ಎಸ್ ಸಿ/ ಎಸ್ಟಿ ಅಭ್ಯರ್ಥಿ: 5 ವರ್ಷ
ವಿಶೇಷ ಚೇತನ ಅಭ್ಯರ್ಥಿ: 10 ವರ್ಷ
ಅರ್ಜಿ ಶುಲ್ಕ:
ಇತರೆ ಅಭ್ಯರ್ಥಿ: 500 ರು (ಹಿಂತಿರುಗಿಸಲಾಗುವುದಿಲ್ಲ)
ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16/01/2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14/02/ 2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ